ಬುರ್ಖಾ ಮತ್ತು ಮುಸ್ಲಿಂ ಟೋಪಿ ಧರಿಸಿ 'ಜೈ ಶ್ರೀ ರಾಮ್' ಘೋಷಣೆ ಕೂಗಿದ್ದ ಇಬ್ಬರಿಗೆ ಜೀವ ಬೆದರಿಕೆ: ವಿಡಿಯೋ
ಬುರ್ಖಾ ಮತ್ತು ಮುಸ್ಲಿಂ ಟೋಪಿ ಧರಿಸಿ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ ಇಬ್ಬರಿಗೆ ಬೆಂಗಳೂರಿನ ಯುವಕನೋರ್ವ ತನ್ನ ಇನ್‌ಸ್ಟಾಗ್ರಾಮ್ ನಲ್ಲಿ ಬೆದರಿಕೆ ಹಾಕುವ ವಿಡಿಯೋ ಅಪ್ಲೋಡ್ ಮಾಡಿದ್ದು ಈ ವಿಡಿಯೋವನ್ನು ದಿ ರೈಟ್ ವಿಂಗ್ ಗೈ ಎಕ್ಸ್ ನಲ್ಲಿ ಹಂಚಿಕೊಂಡಿದೆ.
Published: 29th August 2023 07:17 PM | Last Updated: 29th August 2023 07:47 PM | A+A A-

ಯುವಕ-ಯುವತಿಗೆ ಜೀವ ಬೆದರಿಕೆ
ಬೆಂಗಳೂರು: ಬುರ್ಖಾ ಮತ್ತು ಮುಸ್ಲಿಂ ಟೋಪಿ ಧರಿಸಿ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ ಇಬ್ಬರಿಗೆ ಬೆಂಗಳೂರಿನ ಯುವಕನೋರ್ವ ತನ್ನ ಇನ್‌ಸ್ಟಾಗ್ರಾಮ್ ನಲ್ಲಿ ಬೆದರಿಕೆ ಹಾಕುವ ವಿಡಿಯೋ ಅಪ್ಲೋಡ್ ಮಾಡಿದ್ದು ಈ ವಿಡಿಯೋವನ್ನು ದಿ ರೈಟ್ ವಿಂಗ್ ಗೈ ಎಕ್ಸ್ ನಲ್ಲಿ ಹಂಚಿಕೊಂಡಿದೆ.
ಬೆಂಗಳೂರಿನ ಈ ಮುಸ್ಲಿಂ ಯುವತಿ ಬುರ್ಖಾ ಧರಿಸಿ 'ಜೈ ಶ್ರೀ ರಾಮ್' ಎಂದು ಹೇಳಿದ್ದು ಯುವತಿಗೆ ಯುವಕ ಬಹಿರಂಗವಾಗಿ ಬೆದರಿಕೆ ಹಾಕಿದ್ದಾನೆ ಎಂದು ಬಳಕೆದಾರರು ಪೋಸ್ಟ್ ಮಾಡಿದ್ದಾರೆ.
ವೀಡಿಯೊದಲ್ಲಿ, Instagram ನಲ್ಲಿ nayaz_and_boy72 ಖಾತೆಯನ್ನು ನಿರ್ವಹಿಸುವ ಯುವಕ ಮತ್ತೊಂದು ವೀಡಿಯೊದಲ್ಲಿ ಮಹಿಳೆ ಮತ್ತು ಪುರುಷನಿಗೆ ಜೈ ಶ್ರೀ ರಾಮ್ ಎಂದು ಹೇಳಲು ಬಯಸಿದರೆ ಬುರ್ಖಾ ಮತ್ತು ಕ್ಯಾಪ್ ಅನ್ನು ತೆಗೆಯುವಂತೆ ಹೇಳಿದ್ದಾನೆ.
This Muxlin guy from Bangaluru, Karnataka, is openly threatening to cu/t off a girl frm the middle fr Chanting "Jai Shri Ram" wearing a Burqa nd Hijab.
— The Right Wing Guy (@rightwing_guy) August 28, 2023
Will the ambassadors of Hijab stand for this Hijabi girl for her right to wear burqa nd chant whatever she feels like.?? pic.twitter.com/hRDDQJFh8q
ಇದೆಲ್ಲದರ ಮಧ್ಯದಲ್ಲಿ ನೀವು ಇಸ್ಲಾಂ ಅನ್ನು ಏಕೆ ತರುತ್ತೀರಿ?. "ನೀವು ಕ್ಯಾಪ್ ಅನ್ನು ತೆಗೆದುಹಾಕಿ ಮತ್ತು ನಿಮಗೆ ಬೇಕಾದುದನ್ನು ಹೇಳಿ. ನಿನಗೆ ಧೈರ್ಯವಿದ್ದರೆ ನಿಜವಾದ ಮುಸಲ್ಮಾನನ ಮುಂದೆ ನಿಂತು ನೀನು ಹೇಳಿದ್ದನ್ನು ಹೇಳಿ, ಆಗ ನಿಮ್ಮ ತಲೆ ಕಡಿಯುತ್ತಾರೆ ಎಂದು ಹೇಳಿದ್ದಾನೆ.
ಇದನ್ನೂ ಓದಿ: ನೈತಿಕ ಪೊಲೀಸ್‌ಗಿರಿಯನ್ನು ಧೈರ್ಯದಿಂದ ಎದುರಿಸಿದ ಬುರ್ಖಾಧಾರಿ ಯುವತಿ ನಡೆಗೆ ಮೆಚ್ಚುಗೆ; ಆರೋಪಿ ಬಂಧನ
ಈ ವಿಡಿಯೋಗೆ ಪ್ರತಿಕ್ರಿಯಿಸಿರುವ ಬೆಂಗಳೂರು ನಗರ ಪೊಲೀಸರು, ಇದನ್ನು ಗಮನಿಸಲಾಗಿದ್ದು ಪರಿಶೀಲಿಸಲಾಗುವುದು ಎಂದು ಹೇಳಿದ್ದಾರೆ.