ಸಿರಿಧಾನ್ಯಗಳ ಬೆಳೆಯುವಿಕೆಯಿಂದ ಜಾಗತಿಕ ತಾಪಮಾನ ತಗ್ಗಿಸಬಹುದು: ಪೌಷ್ಟಿಕತಜ್ಞ ಡಾ. ಖಾದರ್ ವಲಿ

ರೈತರು ಅಕ್ಕಿ, ಗೋಧಿ ಮತ್ತು ಕಬ್ಬು ಬೆಳೆಯುವುದನ್ನು ನಿಲ್ಲಿಸಿದರೆ 18 ವರ್ಷಗಳಲ್ಲಿ ಜಾಗತಿಕ ತಾಪಮಾನವನ್ನು ತಗ್ಗಿಸಬಹುದು. ಬದಲಿಗೆ ಸಿರಿಧಾನ್ಯಗಳನ್ನು ಬೆಳೆದರೆ ಪ್ರಪಂಚದಾದ್ಯಂತ 10.4 ಬಿಲಿಯನ್ ಮೆಟ್ರಿಕ್ ಟನ್ ಇಂಗಾಲದ ಡೈಆಕ್ಸೈಡ್ ಅನ್ನು ಕಡಿಮೆ ಮಾಡಬಹುದು ಎಂದು ಭಾರತದ ಮಿಲೆಟ್ ಮ್ಯಾನ್ ಎಂದೇ ಜನಪ್ರಿಯವಾಗಿರುವ ಪೌಷ್ಟಿಕತಜ್ಞ ಡಾ. ಖಾದರ್ ವಲಿ ಹೇಳಿದರು.
ರಾಗಿ (ಪ್ರಾತಿನಿಧಿಕ ಚಿತ್ರ)
ರಾಗಿ (ಪ್ರಾತಿನಿಧಿಕ ಚಿತ್ರ)
Updated on

ಬೆಂಗಳೂರು: ರೈತರು ಅಕ್ಕಿ, ಗೋಧಿ ಮತ್ತು ಕಬ್ಬು ಬೆಳೆಯುವುದನ್ನು ನಿಲ್ಲಿಸಿದರೆ 18 ವರ್ಷಗಳಲ್ಲಿ ಜಾಗತಿಕ ತಾಪಮಾನವನ್ನು ತಗ್ಗಿಸಬಹುದು. ಬದಲಿಗೆ ಸಿರಿಧಾನ್ಯಗಳನ್ನು ಬೆಳೆದರೆ ಪ್ರಪಂಚದಾದ್ಯಂತ 10.4 ಬಿಲಿಯನ್ ಮೆಟ್ರಿಕ್ ಟನ್ ಇಂಗಾಲದ ಡೈಆಕ್ಸೈಡ್ ಅನ್ನು ಕಡಿಮೆ ಮಾಡಬಹುದು ಎಂದು ಭಾರತದ ಮಿಲೆಟ್ ಮ್ಯಾನ್ ಎಂದೇ ಜನಪ್ರಿಯವಾಗಿರುವ ಪೌಷ್ಟಿಕತಜ್ಞ ಡಾ. ಖಾದರ್ ವಲಿ ಹೇಳಿದರು.

ಸಿರಿಧಾನ್ಯಗಳು ಸ್ವತಃ ಬೆಳೆಯುತ್ತವೆ ಮತ್ತು ಹೆಚ್ಚಿನ ನೆರವು ಅಗತ್ಯವಿಲ್ಲ. ಸದ್ಯ ಬರ ಪರಿಸ್ಥಿತಿಯನ್ನು ಎದುರಿಸುತ್ತಿರುವ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಬಹುಮುಖಿ ಸಿರಿಧಾನ್ಯವನ್ನು ಸುಲಭವಾಗಿ ಬೆಳೆಯಬಹುದು. 'ಮಳೆಯಾಗಲಿ ಅಥವಾ ಆಗದಿರಲಿ, ಬರಪೀಡಿತ ಪ್ರದೇಶಗಳಲ್ಲಿ ಸಿರಿಧಾನ್ಯಗಳನ್ನು ಬೆಳೆಯಬಹುದು. ಏಕೆಂದರೆ, ಧಾನ್ಯದ ಜೀನೋಮಿಕ್ ಅಂಶದಿಂದಾಗಿ ಅವುಗಳನ್ನು 10 ಡಿಗ್ರಿ ಮತ್ತು 45 ಡಿಗ್ರಿ ಸೆಲ್ಸಿಯಸ್ ನಡುವೆ ಬೆಳೆಯಬಹುದು. ಆದರೆ, ದುರದೃಷ್ಟವಶಾತ್, ನಮ್ಮ ಆಹಾರ ಸಂಸ್ಕೃತಿಯು ಅಕ್ಕಿ ಮತ್ತು ಗೋಧಿಯ ನಡುವಿನ ಏಕಸಂಸ್ಕೃತಿಯಾಗಿ ಮಾರ್ಪಟ್ಟಿದೆ' ಎಂದು ಅವರು ಹೇಳಿದರು.

ಕಳೆದ 30 ವರ್ಷಗಳಿಂದ, ಡಾ ವಲಿ ಅವರು ಸಿರಿಧಾನ್ಯಗಳ ಪ್ರಯೋಜನಗಳನ್ನು ಪ್ರಚಾರ ಮಾಡುತ್ತಿದ್ದಾರೆ ಮತ್ತು ಸೂಪರ್ ಆಹಾರಧಾನ್ಯಗಳು ಹೇಗೆ ರೋಗಗಳನ್ನು ಹತೋಟಿಯಲ್ಲಿಡಬಹುದು ಎಂಬುದರ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. 

'ಸಮಾಜದಲ್ಲಿ ಸ್ವೀಕಾರಾರ್ಹವಾಗಿಸಲು ನಮಗೆ ಸಿರಿಧಾನ್ಯಗಳ ಮೇಲೆ ದೃಢವಾದ ಸಂಶೋಧನೆಯನ್ನು ನಡೆಸುವ ಅಗತ್ಯವಿದೆ. ಸಿರಿಧಾನ್ಯಗಳು ನಿಮ್ಮ ಮೈಟೊಕಾಂಡ್ರಿಯಾವನ್ನು ರಕ್ಷಿಸುತ್ತದೆ ಮತ್ತು ಸೂಕ್ಷ್ಮಜೀವಿಯ ಅಸಮತೋಲನ ಮತ್ತು ಹಾರ್ಮೋನ್ ಅಸಮತೋಲನದಿಂದ ನಿಮ್ಮ ದೇಹವನ್ನು ರಕ್ಷಿಸುತ್ತದೆ. ಪ್ರತಿದಿನ ಸಿರಿಧಾನ್ಯಗಳನ್ನು ತಿಂದರೆ ಮಧುಮೇಹ, ಥೈರಾಯ್ಡ್, ಕ್ಯಾನ್ಸರ್ ಸೇರಿದಂತೆ ಎಲ್ಲಾ ರೋಗಗಳು ದೂರವಾಗುತ್ತವೆ. ಪ್ರತಿ ವರ್ಷ, ಡಯಾಬಿಟಿಕ್ ಫಾರ್ಮಸಿಗಳಿಂದ 827 ಶತಕೋಟಿ ಡಾಲರ್ ಅನ್ನು ಸಂಗ್ರಹಿಸಲಾಗುತ್ತದೆ' ಎಂದು ಅವರು ಹೇಳಿದರು.

ಸದ್ಯ, ದೇಶದಲ್ಲಿ ಉತ್ಪಾದನೆಯಾಗುವ ಒಟ್ಟು ಧಾನ್ಯಗಳಲ್ಲಿ ಸಿರಿಧಾನ್ಯಗಳು ಕೇವಲ 1.5 ರಿಂದ 1.8 ಪ್ರತಿಶತದಷ್ಟಿವೆ. 'ನಾವು ಮಳೆಯಾಶ್ರಿತ ಕೃಷಿಯತ್ತ ಹೆಚ್ಚು ಗಮನ ಹರಿಸಬೇಕು ಮತ್ತು ನೀತಿ ಬದಲಾವಣೆಗಳನ್ನು ಪ್ರಾರಂಭಿಸಬೇಕು. ಮಳೆಯನ್ನು ಅವಲಂಬಿಸಿ ಕೃಷಿ ಮಾಡುವ ರೈತರಿಗೆ ಸಹಾಯಧನ ಲಭ್ಯವಾಗಬೇಕು. ನಾವು ಸಮಾಜದಲ್ಲಿ ಸಿರಿಧಾನ್ಯಗಳನ್ನು ತಿನ್ನುವುದನ್ನು ಜನಪ್ರಿಯಗೊಳಿಸಿದಾಗ ಮಾತ್ರ ರೈತರು ಅವುಗಳನ್ನು ಬೆಳೆಯಲು ಸಾಧ್ಯವಾಗುತ್ತದೆ. ಬೇಡಿಕೆಯನ್ನು ಸೃಷ್ಟಿಸುವ ಅಗತ್ಯವಿದೆ' ಎಂದು ಅವರು ಒತ್ತಿ ಹೇಳಿದರು.

ಡಾ. ವಲಿ ಅವರು ಕಳೆದ 30 ವರ್ಷಗಳಿಂದ ಸಿರಿಧಾನ್ಯಗಳನ್ನು ಸೇವಿಸುತ್ತಿದ್ದು, ಮಧ್ಯಾಹ್ನ ಸಿರಿಧಾನ್ಯದಿಂದ ತಯಾರಿಸಿದ ಊಟವನ್ನು ಮಾಡುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ಅವು ಹೆಚ್ಚು ಪೌಷ್ಟಿಕವಾಗಿದೆ. ತಜ್ಞರು, ವೈದ್ಯರು ಹಾಗೂ ಕೃಷಿಕರು ಒಗ್ಗೂಡಿ ಸಿರಿಧಾನ್ಯಗಳ ಆಂದೋಲನ ಮೂಡಿಸುವ ಅಗತ್ಯವಿದೆ ಎಂದು ವಿವರಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com