ನೀರಿನಲ್ಲಿ ಮುಳುಗಿ ಮಕ್ಕಳಿಬ್ಬರ ಸಾವು: ಉಪ್ಪಿನ ರಾಶಿಯಲ್ಲಿ ಮೃತದೇಹ ಇಟ್ಟು ಬದುಕಿಸಲು ಪೋಷಕರ ಪರದಾಟ; ಹಾವೇರಿಯಲ್ಲಿ ಮನಕಲಕುವ ಘಟನೆ!

ನೀರಿನಲ್ಲಿ ಮುಳುಗಿ ಮಕ್ಕಳು ಸಾವನ್ನಪ್ಪಿದ್ದು, ದುಃಖತಪ್ತರಾಗಿದ್ದ ಪೋಷಕರು ಮರಳಿ ಬದುಕಿ ಬರುತ್ತಾರೆಂಬ ಆಶಯದೊಂದಿಗೆ ಉಪ್ಪಿನಲ್ಲಿ ಮೃತದೇಹಗಳನ್ನಿಟ್ಟು ಪರದಾಡುತ್ತಿದ್ದ ಮನ ಕಲಕುವ ಘಟನೆಯೊಂದು ಹಾವೇರಿಯಲ್ಲಿ ನಡೆದಿದೆ.
ಮಕ್ಕಳ ಮೃತದೇಹವನ್ನು ಉಪ್ಪಿನಲ್ಲಿಟ್ಟಿರುವುದು
ಮಕ್ಕಳ ಮೃತದೇಹವನ್ನು ಉಪ್ಪಿನಲ್ಲಿಟ್ಟಿರುವುದು
Updated on

ಹಾವೇರಿ: ನೀರಿನಲ್ಲಿ ಮುಳುಗಿ ಮಕ್ಕಳು ಸಾವನ್ನಪ್ಪಿದ್ದು, ದುಃಖತಪ್ತರಾಗಿದ್ದ ಪೋಷಕರು ಮರಳಿ ಬದುಕಿ ಬರುತ್ತಾರೆಂಬ ಆಶಯದೊಂದಿಗೆ ಉಪ್ಪಿನಲ್ಲಿ ಮೃತದೇಹಗಳನ್ನಿಟ್ಟು ಪರದಾಡುತ್ತಿದ್ದ ಮನ ಕಲಕುವ ಘಟನೆಯೊಂದು ಹಾವೇರಿಯಲ್ಲಿ ನಡೆದಿದೆ.

ಹಾವೇರಿ ಜಿಲ್ಲೆಯ ಕಾಗಿನೆಲೆ ಸಮೀಪದ ಗ್ರಾಮದಲ್ಲಿ ಡಿಸೆಂಬರ್ 24 ರಂದು ಘಟನೆ ವರದಿಯಾಗಿದೆ. ಹೇಮಂತ್ (12) ಮತ್ತು ನಾಗರಾಜ್ (11) ಗ್ರಾಮದ ಕೆರೆಯ ಬಳಿ ಈಜಲು ಹೋಗಿ ನೀರಿನಲ್ಲಿ ಮುಳುಗಿ, ಮೃತಪಟ್ಟಿದ್ದರು.

ದಡದಲ್ಲಿ ಮಕ್ಕಳ ಬಟ್ಟೆಗಳನ್ನು ಕಂಡ ಕೆಲವು ಗ್ರಾಮಸ್ಥರು ಬಾಲಕರನ್ನು ಹುಡುಕಲು ಆರಂಭಿಸಿದ್ದಾರೆ. ಈ ವೇಳೆ ಬಾಲಕರ ಮೃತದೇಹಗಳು ಪತ್ತೆಯಾಗಿವೆ. ಈ ವೇಳೆ ಕೆಲ ಗ್ರಾಮಸ್ಥರು ಮೃತದೇಹಗಳನ್ನು ಉಪ್ಪಿನಲ್ಲಿಟ್ಟರೆ ಮರಳಿ ಬದುಕಬಹುದು ಎಂದು ಸಲಹೆ ನೀಡಿದ್ದಾರೆ.

ಇದನ್ನು ನಂಬಿದ ಪೋಷಕರು ಉಪ್ಪಿನ ರಾಶಿಯಲ್ಲಿ ಮೃತದೇಹಗಳನ್ನಿಟ್ಟು, ಬದುಕಿ ಬರುವಂತೆ ಮೊರೆಯಿಟ್ಟಿದ್ದಾರೆ. ಈ ವಿಚಾರ ತಿಳಿದ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಪೋಷಕರಿಗೆ ವಾಸ್ತವಿಕ ಸತ್ಯ ತಿಳಿಸಿ ಅಂತ್ಯಸಂಸ್ಕಾರ ನೆರವೇರಿಸುವಂತೆ ಮನವೊಲಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com