ಹಿಂದುತ್ವ, ಮನುವಾದ ಕುರಿತ ಸಿದ್ದು ಹೇಳಿಕೆ ತಪ್ಪು: ನಟ ಚೇತನ್ ಕುಮಾರ್ ಅಹಿಂಸಾ
ಸಂವಿಧಾನಕ್ಕೆ ವಿರುದ್ಧವಾದುದ್ದೇ ಹಿಂದುತ್ವ, ಅದೇ ಮನುವಾದ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆ ತಪ್ಪು ಎಂದು ನಟ ಚೇತನ್ ಕುಮಾರ್ ಅಹಿಂಸಾ ಹೇಳಿದ್ದಾರೆ.
Published: 06th February 2023 08:26 PM | Last Updated: 06th February 2023 08:34 PM | A+A A-

ಸಿದ್ದರಾಮಯ್ಯ, ಚೇತನ್ ಕುಮಾರ್ ಅಹಿಂಸಾ ಸಾಂದರ್ಭಿಕ ಫೋಟೋ
ಬೆಂಗಳೂರು: ಸಂವಿಧಾನಕ್ಕೆ ವಿರುದ್ಧವಾದುದ್ದೇ ಹಿಂದುತ್ವ, ಅದೇ ಮನುವಾದ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆ ತಪ್ಪು ಎಂದು ನಟ ಚೇತನ್ ಕುಮಾರ್ ಅಹಿಂಸಾ ಹೇಳಿದ್ದಾರೆ.
ಈ ಕುರಿತು ಟ್ವೀಟರ್ ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಚೇತನ್, ಹಿಂದುತ್ವ ಮನುವಾದ ಅಲ್ಲ, ಮನುವಾದವು ಮನುಸ್ಮೃತಿ (185 ಬಿಸಿಇ) ಮೂಲಕ ಸಾಂಸ್ಥಿಕಗೊಳಿಸಿದ ವರ್ಣ, ಲಿಂಗ, ಆಧಾರಿತ ಅಸಮಾನತೆಯಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ನಮಗೆ ಬ್ರಾಹ್ಮಣರು ಸಮಸ್ಯೆಯಲ್ಲ, ಬ್ರಾಹ್ಮಣ್ಯವೇ ದೊಡ್ಡ ಸಮಸ್ಯೆ; ಜೆಡಿಎಸ್ ಒಂದು ಬ್ರಾಹ್ಮಣ್ಯದ ಪಕ್ಷ: ಚೇತನ್
ಇಂದು ಕಾಂಗ್ರೆಸ್ ಮತ್ತು ಜೆಡಿಎಸ್ ಮನುವಾದಿ (ಬ್ರಾಹ್ಮಣ್ಯ) ಪಕ್ಷಗಳಾಗಿವೆ, ಬಿಜೆಪಿ (ಹಿಂದುತ್ವ) ಮತ್ತು ಕಾಂಗ್ರೆಸ್, ಜೆಡಿಎಸ್ ಇತರೆ ಎಲ್ಲಾ ಪಕ್ಷಗಳು (ಮನುವಾದ) ಸಮಾನತೆಗೆ ವಿರುದ್ಧವಾಗಿವೆ ಆದ್ದರಿಂದ ಎಲ್ಲವೂ ಅಸಂವಿಧಾನಿಕ ಎಂದು ಚೇತನ್ ಆಕ್ರೋಶ ಹೊರಹಾಕಿದ್ದಾರೆ.
Siddaramaiah is wrong
— Chetan Kumar Ahimsa / ಚೇತನ್ ಅಹಿಂಸಾ (@ChetanAhimsa) February 6, 2023
Hindutva is not Manuvada
Manuvada = caste/gender-based inequality as institutionalised by ‘Manusmriti’ (185 BCE)
Today’s Manuvadi (Brahminical) parties are Congress & JDS
BJP (Hindutva) & Congress-JDS (Manuvada) r against equality; thus, unconstitutional pic.twitter.com/rRyNQLkceo
ಕಲಬುರಗಿ ನಗರದಲ್ಲಿ ಆಯೋಜಿಸಲಾಗಿದ್ದ ಮಾಜಿ ಶಾಸಕ ಬಿ.ಆರ್.ಪಾಟೀಲ್ ಜೀವನ ಕಥೆಯ "ನಿರ್ಭಯ" ಸಮಾಜವಾದದೆಡೆಗೆ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ್ದ ಸಿದ್ದರಾಮಯ್ಯ, ಮನುವಾದ ಮತ್ತು ಪುರೋಹಿತಷಾಹಿ ಇವೆರಡೂ ಸಮಾಜಕ್ಕೆ ಶಾಪವಾಗಿದೆ. ನಾನು ಮನುವಾದ, ಹಿಂದುತ್ವದ ವಿರೋಧಿ, ಆದರೆ ಹಿಂದೂ ವಿರೋಧಿಯಲ್ಲ ಎಂದಿದ್ದರು.