ಶೇ.50 ರಿಯಾಯಿತಿ: ಇಂದು ದಾಖಲೆಯ 17.61 ಕೋಟಿ ರೂ. ಕಲೆಕ್ಷನ್; ಒಟ್ಟು 85.83 ಕೋಟಿ ರೂ. ದಂಡ ವಸೂಲಿ!

ಬಾಕಿ ಇರುವ ಸಂಚಾರ ನಿಯಮ ಉಲ್ಲಂಘನೆ ದಂಡ ವಸೂಲಿಗೆ ರಾಜ್ಯ ಸಾರಿಗೆ ಇಲಾಖೆ ಘೋಷಿಸಿದ ಶೇ.50 ರಷ್ಟು ರಿಯಾಯಿತಿಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಟ್ರಾಫಿಕ್ ಪೊಲೀಸ್ ಖಜಾನೆಗೆ ಕೋಟಿ ಕೋಟಿ ರೂಪಾಯಿ ಹರಿದು ಬರುತ್ತಿದೆ.
ಟ್ರಾಫಿಕ್ ದಂಡ
ಟ್ರಾಫಿಕ್ ದಂಡ

ಬೆಂಗಳೂರು: ಬಾಕಿ ಇರುವ ಸಂಚಾರ ನಿಯಮ ಉಲ್ಲಂಘನೆ ದಂಡ ವಸೂಲಿಗೆ ರಾಜ್ಯ ಸಾರಿಗೆ ಇಲಾಖೆ ಘೋಷಿಸಿದ ಶೇ.50 ರಷ್ಟು ರಿಯಾಯಿತಿಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಟ್ರಾಫಿಕ್ ಪೊಲೀಸ್ ಖಜಾನೆಗೆ ಕೋಟಿ ಕೋಟಿ ರೂಪಾಯಿ ಹರಿದು ಬರುತ್ತಿದೆ.

ಸಾವಿರಾರು ರೂಪಾಯಿ ದಂಡ ಅರ್ಧದಷ್ಟು ಕಡಿಮೆ ಆಗುತ್ತೆ ಎನ್ನುವುದು ಗೊತ್ತಾಗುತ್ತಿದ್ದಂತೆಯೇ ಟ್ರಾಫಿಕ್ ರೂಲ್ಸ್ ಉಲ್ಲಂಘಿಸಿದ್ದ ವಾಹನ ಸವಾರರು ದಂಡ ಪಾವತಿಸಲು ಇಂದು ಸಹ ಮುಗಿಬಿದ್ದಿದ್ದು, ಶುಕ್ರವಾರ ದಾಖಲೆಯ 17.61 ಕೋಟಿ ರೂಪಾಯಿ ದಂಡ ಸಂಗ್ರಹವಾಗಿದೆ.

ಒಟ್ಟಾರೆ ಕಳೆದ ಎಂಟು ದಿನಗಳಲ್ಲಿ 85.83 ಕೋಟಿ ರೂಪಾಯಿ ದಂಡ ವಸೂಲಿಯಾಗಿದೆ.

ಒಟ್ಟಾರೆ 31,11,546 ಪ್ರಕರಣಗಳು ಇತ್ಯರ್ಥಗೊಂಡು 85.83,07,541 ರೂಗಳ ದಂಡ ಸಂಗ್ರಹವಾಗಿದೆ. ‌ಕಳೆದ ಫೆ.8ರಂದು 9,06,94,800 ರೂ ನಿನ್ನೆ 12,36,35,450 ರೂ,ಇಂದು ರಾತ್ರಿ 8ರವರೆಗೆ ದಾಖಲೆ ಪ್ರಮಾಣದ 17.61 ಕೋಟಿ ರೂಪಾಯಿ ದಂಡ ಸಂಗ್ರಹವಾಗಿದೆ ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ತಿಳಿಸಿದ್ದಾರೆ.

ಕಳೆದ ಫೆಬ್ರವರಿ 3ರಂದು ಶೇ. 50 ರಷ್ಟು ರಿಯಾಯಿತಿ ಜಾರಿಗೆ ಬಂದಿದ್ದು, ಮೊದಲ ದಿನವೇ 5,61,45,000 ರೂಪಾಯಿಗೂ ಅಧಿಕ ದಂಡದ ಮೊತ್ತ ಸಂಗ್ರಹವಾಗಿತ್ತು. ಎರಡನೇ ದಿನ ಬರೋಬ್ಬರಿ 6,80,72,500 ರೂ. ದಂಡ ಸಂಗ್ರಹವಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com