ಬ್ರಿಗೇಡ್ ರಸ್ತೆಯಲ್ಲಿ ಸಿಂಕ್ ಹೋಲ್: ಪೈಪ್ ಬದಲಾಯಿಸಲು ಬಿಎಂಆರ್ ಸಿಎಲ್ ನಿಂದ 3.5 ಕೋಟಿ ರೂ. ಕೇಳಿದ ಬಿಡಬ್ಲ್ಯೂಎಸ್ ಎಸ್ ಬಿ

ಒಂದು ತಿಂಗಳ ಹಿಂದೆ ಬ್ರಿಗೇಡ್ ರಸ್ತೆಯಲ್ಲಿ ಉಂಟಾದ ಸಿಂಕ್ ಹೋಲ್ ಸಮಸ್ಯೆಗೆ ಸಂಬಂಧಿಸಿದಂತೆ ಮೆಟ್ರೋ ಮಾರ್ಗದುದ್ದಕ್ಕೂ ಹಳೆಯ ಪೈಪ್ ಲೈನ್ ಬದಲಾಯಿಸಲು ರೂ. 3.5 ಕೋಟಿ ನೀಡುವಂತೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವನ್ನು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕೇಳಿದೆ.
ಬ್ರಿಗೇಡ್ ರಸ್ತೆಯಲ್ಲಿ ಸಿಂಕ್ ಹೋಲ್
ಬ್ರಿಗೇಡ್ ರಸ್ತೆಯಲ್ಲಿ ಸಿಂಕ್ ಹೋಲ್

ಬೆಂಗಳೂರು: ಒಂದು ತಿಂಗಳ ಹಿಂದೆ ಬ್ರಿಗೇಡ್ ರಸ್ತೆಯಲ್ಲಿ ಉಂಟಾದ ಸಿಂಕ್ ಹೋಲ್ ಸಮಸ್ಯೆಗೆ ಸಂಬಂಧಿಸಿದಂತೆ ಮೆಟ್ರೋ ಮಾರ್ಗದುದ್ದಕ್ಕೂ ಹಳೆಯ ಪೈಪ್ ಲೈನ್ ಬದಲಾಯಿಸಲು ರೂ. 3.5 ಕೋಟಿ ನೀಡುವಂತೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವನ್ನು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕೇಳಿದೆ.

ಈ ರೀತಿಯಲ್ಲಿ ಕೇಳಲಾದ ಪತ್ರವನ್ನು ಮೂರು ದಿನಗಳ ಹಿಂದೆಯೇ ಮೆಟ್ರೋ ಕಳುಹಿಸಲಾಗಿದೆ ಎಂದು ಬಿಡಬ್ಲ್ಯೂಎಸ್ ಎಸ್ ಬಿ ಅಧಿಕಾರಿಯೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ. ಹಳೆಯ ಪೈಪ್ ಗಳು 1970 ಮತ್ತು 1975 ರ ನಡುವಿನ ಹಿಂದಿನವು. ಸುರಂಗ ಕೊರೆಯುವ ಯಂತ್ರಗಳು ಕೆಲಸ ಮಾಡುವಾಗ ಕಂಪನಗಳನ್ನು ಉಂಟುಮಾಡುತ್ತವೆ. ಭಾರೀ ವಾಹನಗಳ ಸಂಚಾರ, ಭಾರೀ ಉಪಕರಣಗಳನ್ನು ಬಳಸಲಾಗುತ್ತಿದೆ. ಇವೆಲ್ಲವೂ ಪೈಪ್‌ಲೈನ್‌ಗಳ ಮೇಲೆ ಪರಿಣಾಮ ಬೀರುತ್ತವೆ ಎಂದು ಅವರು ಹೇಳಿದರು.

ಮೈಕೋ ಲೇಔಟ್ ನಿಂದ ಎಂಜಿ ರಸ್ತೆವರೆಗಿನ ಹಳೆಯ ಪೈಪ್ ಲೈನ್ ಗಳು ಕಾಳೇನ ಅಗ್ರಹಾರ ಮತ್ತು ನಾಗವಾರದ ಸುರಂಗ ಮಾರ್ಗದ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜನವರಿ 12 ರಂದು ಸಂಭವಿಸಿದ ಸಿಂಕ್‌ಹೋಲ್‌ಗೆ ಮೆಟ್ರೋ ಸುರಂಗ ಮಾರ್ಗ ಕಾಮಗಾರಿಯೇ ಕಾರಣ ಎಂದು ಶಂಕಿಸಲಾಗಿದೆ. ಬಿಡಬ್ಲ್ಯೂಎಸ್ ಎಸ್ ಬಿ ನೀರಿನ ಪೈಪ್ ಲೈನ್ 1972 ರ ಹಿಂದಿನವು. ಇದೇ ಕಾರಣದಿಂದ ನೀರು ಸೋರಿಕೆಯಾಗಿದೆ ಎಂಬುದು ಸ್ಪಷ್ಟವಾಗಿದೆ.

ಹಳೆಯ ಪೈಪ್ ಲೈನ್ ಬದಲಾಯಿಸುವುದು ಬಿಡಬ್ಲ್ಯೂಎಸ್ ಎಸ್ ಬಿ ಕೆಲಸವಾಗಿದೆ. ನಾವು ಯಾವುದೇ ಹಣ ನೀಡುವ ಅಗತ್ಯವಿಲ್ಲ, ಬಿಎಂಆರ್ ಸಿಎಲ್ ನಿಂದ ವೆಚ್ಚ ಮಾಡುವ ಪ್ರತಿಯೊಂದು ರೂಪಾಯಿಯನ್ನು ಸಮರ್ಥಿಸಿಕೊಳ್ಳಬೇಕಾಗುತ್ತದೆ. ಎಲ್ಲ ಕಡೆ ಮೆಟ್ರೋ ಕಾಮಗಾರಿಗಾಗಿ ಹಣ ನೀಡುತ್ತಾ ಹೋದರೆ, ನಗರಾದ್ಯಂತ ನಡೆಯುವ ಕಾಮಗಾರಿಗಳಿಗೂ ಹಣ ನೀಡಬೇಕಾಗುತ್ತದೆ ಎಂದು ಮೆಟ್ರೋ ಮೂಲಗಳು ಹೇಳಿವೆ. 

ವೈಟ್‌ಫೀಲ್ಡ್-ಕೆಆರ್ ಪುರಂ ಮಾರ್ಗ ಮಾರ್ಚ್ 15 ರ ನಂತರ ಸಿದ್ಧ: ವೈಟ್‌ಫೀಲ್ಡ್-ಕೆಆರ್ ಪುರಂ ನಡುವಿನ 13. ಕಿ. ಮೀ ದೂರದ ಮಾರ್ಗ  ಮಾರ್ಚ್ 15 ರ ನಂತರ ಯಾವುದೇ ಸಮಯದಲ್ಲಿ ಆರಂಭಕ್ಕೆ ಸಿದ್ಧವಾಗಲಿದೆ ಎಂದು ಬಿಎಂಆರ್‌ಸಿಎಲ್ ಎಂಡಿ ಅಂಜುಮ್ ಪರ್ವೇಜ್ ಹೇಳಿದ್ದಾರೆ. ಮುಖ್ಯ ಮೆಟ್ರೋ ರೈಲು ಸುರಕ್ಷತಾ ಆಯುಕ್ತರು ಫೆಬ್ರವರಿ 22 ರಿಂದ 24 ರವರೆಗೆ ಪ್ರಾಯೋಗಿಕ ಪರೀಕ್ಷೆ ನಡೆಸುತ್ತಾರೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com