ಬೆಂಗಳೂರು: ಕೊನೆಗೂ ಫೇಲಾಗಿದ್ದ ಯುಕೆಜಿ ವಿದ್ಯಾರ್ಥಿ ಪಾಸ್!

ಯುಕೆಜಿ ವಿದ್ಯಾರ್ಥಿಯನ್ನು ಫೇಲ್ ಮಾಡಿದ್ದಕ್ಕಾಗಿ ಪೋಷಕರು ಮತ್ತು ರಾಜಕಾರಣಿಗಳಿಂದ ತೀವ್ರ ಆಕ್ರೋಶದ ನಂತರ ಎಚ್ಚೆತ್ತುಕೊಂಡ ಬೆಂಗಳೂರಿನ ಶಾಲೆಯೊಂದು ಅಂತಿಮವಾಗಿ ವಿದ್ಯಾರ್ಥಿಯ ಫಲಿತಾಂಶವನ್ನು ಪರಿಷ್ಕರಿಸಿದ್ದು, ಪಾಸ್ ಮಾಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಯುಕೆಜಿ ವಿದ್ಯಾರ್ಥಿಯನ್ನು ಫೇಲ್ ಮಾಡಿದ್ದಕ್ಕಾಗಿ ಪೋಷಕರು ಮತ್ತು ರಾಜಕಾರಣಿಗಳಿಂದ ತೀವ್ರ ಆಕ್ರೋಶದ ನಂತರ ಎಚ್ಚೆತ್ತುಕೊಂಡ ಬೆಂಗಳೂರಿನ ಶಾಲೆಯೊಂದು ಅಂತಿಮವಾಗಿ ವಿದ್ಯಾರ್ಥಿಯ ಫಲಿತಾಂಶವನ್ನು ಪರಿಷ್ಕರಿಸಿದ್ದು, ಪಾಸ್ ಮಾಡಿದೆ. 

ಆನೇಕಲ್‌ನ ಸೇಂಟ್ ಜೋಸೆಫ್ ಚಾಮಿನಾಡೆ ಅಕಾಡೆಮಿಯಲ್ಲಿ ವ್ಯಾಸಂಗ ಮಾಡುತ್ತಿರುವ ಯುಕೆಜಿ ವಿದ್ಯಾರ್ಥಿಯ ಪೋಷಕರಾದ ಮನೋಜ್ ಬಾದಲ್, ಶಾಲೆಯು ಅಂತಿಮವಾಗಿ ಫಲಿತಾಂಶವನ್ನು ಪರಿಷ್ಕರಿಸಿದ್ದು, ಆಕೆಯ ರಿಪೋರ್ಟ್ ಕಾರ್ಡ್‌ನಿಂದ ‘ಫೇಲ್’ ಪದವನ್ನು ತೆಗೆದುಹಾಕಿದೆ ಎಂದು ಹೇಳಿದ್ದಾರೆ. 

ಈ ಸಂಬಂಧ ಏನು ವಿವರಣೆ ನೀಡಲಾಗಿದೆ ಎಂಬುದು ತಿಳಿದಿಲ್ಲ,. ಸಾಫ್ಟ್ ವೇರ್ ದೋಷದಿಂದಾದ ಸಮಸ್ಯೆಯನ್ನು ಶಾಲೆಯ ಗಮನಕ್ಕೆ ತಂದಾಗ ಕೂಡಲೇ ಅದನ್ನು ಸರಿಪಡಿಸಲಾಗಿದೆ. ತರಗತಿ ಶಿಕ್ಷಕರು, ಶಾಲಾ ಮುಖ್ಯೋಪಾಧ್ಯಾಯರು ಮತ್ತು ಶಾಲಾ ಆಡಳಿತ ಟ್ರಸ್ಟಿ ಎಲ್ಲರೂ ಯಾವುದೇ ತಿದ್ದುಪಡಿಗೆ ನಿರಾಕರಿಸಿದದ್ದು ಸತ್ಯವಾಗಿದೆ. ಅವರು ಇಮೇಲ್  ಮೂಲಕ ಲಿಖಿತವಾಗಿ ತಮ್ಮ ನಿರಾಕರಣೆಯನ್ನು ನೀಡಿದ್ದಾರೆ ಎಂದು ಅವರು ಆರೋಪಿಸಿದರು.

ಈ ತಿಂಗಳ ಆರಂಭದಲ್ಲಿ, ಬಾದಲ್ ತನ್ನ ಯುಕೆಜಿ ವಿದ್ಯಾರ್ಥಿನಿಯನ್ನು ಶಾಲೆಯಲ್ಲಿ ಫೇಲ್ ಮಾಡಲಾಗಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು. ಬಾದಲ್ ಪೋಸ್ಟ್ ಮಾಡಿದ ಸ್ಕ್ರೀನ್‌ಶಾಟ್‌ಗಳ ಪ್ರಕಾರ, ನಾಲ್ಕು ವಿಷಯಗಳಲ್ಲಿ, ಒಂದರಲ್ಲಿ ವಿದ್ಯಾರ್ಥಿಯು ನಲವತ್ತಕ್ಕೆ ಐದು ಅಂಕಗಳಿಸಿದ್ದರಿಂದ ಫೇಲ್ ಮಾಡಲಾಗಿದೆ ಎಂದು ಹೇಳಿದ್ದರು.

ಈ ವಿಷಯ ವೈರಲ್ ಆಗಿ, ಮಾಜಿ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಸೇರಿದಂತೆ ಹಲವು ಪ್ರಮುಖರು ಶಾಲೆ ವಿರುದ್ಧ ವಾಗ್ದಾಳಿ ನಡೆಸಿದ್ದರು. ಈ ಮಧ್ಯೆ ಶಿಕ್ಷಣ ಇಲಾಖೆ ಅಧಿಕಾರಿಗಳು ಶಾಲೆ ವಿರುದ್ಧವೂ ಕ್ರಮ ಕೈಗೊಂಡಿದ್ದರು, ಇದರ ಬಗ್ಗೆ ಸ್ಪಷ್ಟೀಕರಣ ನೀಡಬೇಕು ಮತ್ತು ಫಲಿತಾಂಶ ರದ್ದುಗೊಳಿಸಬೇಕೆಂದು ನೋಟಿಸ್ ಜಾರಿ ಮಾಡಲಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com