
ಒಕ್ಕಣ್ಣಿನ ನಾಗರಹಾವು
ಕಾರವಾರ: ಕಾರವಾರ ಸಮೀಪದ ಕದ್ರಾದಲ್ಲಿ ಅಪರೂಪದ ಒಕ್ಕಣ್ಣಿನ ನಾಗರಹಾವು ಪತ್ತೆಯಾಗಿದ್ದು, ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ.
ರವಾರ ತಾಲೂಕಿನ ಮಲ್ಲಾಪುರದ ಲಕ್ಷ್ಮೀನಗರದ ಆಕಾಶ ಎನ್.ಚೌಗ್ಲೆ ಎನ್ನುವವರ ಮನೆಯ ಬಳಿ ಈ ಅಪರೂಪದ ಹಾವು ಕಾಣಿಸಿಕೊಂಡಿದೆ. ಕೂಡಲೇ ಚೌಗ್ಲೆ ಅವರು ಕದ್ರಾ ಅರಣ್ಯ ವಿಭಾಗದ ಅರಣ್ಯ ವೀಕ್ಷಕ ಬಿಲಾಲ್ ಶೇಖ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ತಕ್ಷಣ ಸ್ಥಳಕ್ಕೆ ತೆರಳಿದ ಅರಣ್ಯ ಇಲಾಖೆಯ ಸಿಬ್ಬಂದಿಗಳು, ಹಾವನ್ನು ಸುರಕ್ಷಿತವಾಗಿ ರಕ್ಷಿಸಿ ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದಾರೆ.
ಈ ರೀತಿ ಒಕ್ಕಣ್ಣಿನ ನಾಗರ ಕಾಣ ಸಿಗುವುದು ತೀರಾ ವಿರಳ. ಈ ನಾಗರ ಹಾವಿಗೆ ಕಣ್ಣಿನ ಗುಳಿ ಮಾತ್ರವಿದ್ದು, ಕಣ್ಣುಗುಡ್ಡೆ ಇರುವುದಿಲ್ಲ ಬಿಲಾಲ್ ಶೇಖ್ ಅವರು ಮಾಹಿತಿ ನೀಡಿದ್ದಾರೆ.
ಹಾವು ಆನುವಂಶಿಕ ವಿಕಲತೆಯಿಂದ ಹುಟ್ಟಿರಬಹುದು ಅಥವಾ ಮುಂಗುಸಿಯೊಂದಿಗಿನ ಕಾದಾಟದಲ್ಲಿ ಕಣ್ಣು ಕಳೆದುಕೊಂಡಿರಬಹುದು. ಒಂದು ಕಣ್ಣಿನ ನಾಗರಹಾವು ಬಹಳ ಅಪರೂಪವಾಗಿ ಕಂಡುಬರುತ್ತದೆ ಎಂದು ತಿಳಿಸಿದ್ದಾರೆ.