ರಷ್ಯಾ-ಉಕ್ರೇನ್ 'ಬಿಕ್ಕಟ್ಟೇ' ಅಥವಾ 'ಯುದ್ಧವೇ? ಏನನ್ನಬೇಕು! ಜಿ-20 ನಾಯಕರ ಚರ್ಚೆ

ಸರಿಯಾಗಿ ಒಂದು ವರ್ಷದ ಹಿಂದೆ, ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡಿತು. ಆದರೆ ಅದನ್ನು ಎರಡು ದಿನಗಳ ಜಿ-20 ಹಣಕಾಸು ಸಚಿವರು ಮತ್ತು ಸೆಂಟ್ರಲ್ ಗವರ್ನರ್ ಗಳ ಸಭೆ ನಂತರ ಹೊರಡಿಸಲಿರುವ ಜಂಟಿ ಪ್ರಕಟಣೆಯಲ್ಲಿ  ಅದನ್ನು ಹೇಗೆ ತಿಳಿಸಬೇಕು ಎಂಬುದರ ಬಗ್ಗೆ ವಿಶ್ವದ ಟಾಪ್ 20 ಆರ್ಥಿಕತೆಯ ನಾಯಕರು ಚರ್ಚಿಸುತ್ತಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಸರಿಯಾಗಿ ಒಂದು ವರ್ಷದ ಹಿಂದೆ, ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡಿತು. ಆದರೆ ಅದನ್ನು ಎರಡು ದಿನಗಳ ಜಿ-20 ಹಣಕಾಸು ಸಚಿವರು ಮತ್ತು ಸೆಂಟ್ರಲ್ ಗವರ್ನರ್ ಗಳ ಸಭೆ ನಂತರ ಹೊರಡಿಸಲಿರುವ ಜಂಟಿ ಪ್ರಕಟಣೆಯಲ್ಲಿ  ಅದನ್ನು ಹೇಗೆ ತಿಳಿಸಬೇಕು ಎಂಬುದರ ಬಗ್ಗೆ ವಿಶ್ವದ ಟಾಪ್ 20 ಆರ್ಥಿಕತೆಯ ನಾಯಕರು ಚರ್ಚಿಸುತ್ತಿದ್ದಾರೆ.

ಆತಿಥೇಯ ಭಾರತ ಭೌಗೋಳಿಕ ರಾಜಕೀಯ ಉದ್ವಿಗ್ನತೆಯನ್ನು "ಬಿಕ್ಕಟ್ಟು" ಅಥವಾ "ಸವಾಲು" ಎಂದು ಉಲ್ಲೇಖಿಸಲು ಬಯಸುತ್ತಿದೆ. ಆದರೆ ಯುಎಸ್ ಮತ್ತು ಇತರ ಪಾಶ್ಚಿಮಾತ್ಯ ರಾಷ್ಟ್ರಗಳು ಶನಿವಾರ ಸಂಜೆ ಹೊರಡಿಸಲಿರುವ ಹೇಳಿಕೆಯಲ್ಲಿ ಯುದ್ಧ ಅಂತಲೇ ಹೇಳಲು ಬಯಸುತ್ತವೆ. ತಟಸ್ಥ ಪದ ಸೇರಿಸಲು ಒಮ್ಮತ ಮೂಡಿಸಲು ಭಾರತ ಪ್ರಯತ್ನಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಅಧಿಕಾರಿಗಳು ಕಳೆದ ಎರಡು ದಿನಗಳಿಂದಲೂ ಯಾವ ರೀತಿಯ ಭಾಷೆ ಬಳಸಬೇಕು ಎಂಬುದರ ಬಗ್ಗೆ ಚರ್ಚಿಸುತ್ತಿದ್ದಾರೆ. ಈ ಚರ್ಚೆ ನಾಳೆಯೂ ಮುಂದುವರೆಯಬಹುದು ಎಂದು ಅವುಗಳು ಹೇಳಿವೆ. 

ಭಾರತವು ನೇರವಾಗಿ ಖಂಡಿಸಿಲ್ಲ ಅಥವಾ ಮಾಸ್ಕೋ ಪರವಾಗಿ ನಿಂತಿಲ್ಲ ಆದರೆ, ಅಗ್ಗದ ಬೆಲೆಯಲ್ಲಿ ತೈಲ ಆಮದಿನಿಂದಾಗಿ ಕಳೆದೊಂದು ವರ್ಷದಲ್ಲಿ ರಷ್ಯಾದೊಂದಿಗಿನ ಭಾರತದ ವ್ಯಾಪಾರವು ಹೆಚ್ಚಾಗಿದೆ. ವಿದೇಶದಿಂದ ಭಾರತಕ್ಕೆ ಆಮದಾಗುವ ತೈಲದಲ್ಲಿ ಕಾಲುಭಾಗ ರಷ್ಯಾದಿಂದಲೇ ಆಮದು ಆಗುತ್ತದೆ. ಜನವರಿಯಲ್ಲಿ ದಾಖಲೆಯ 1.4 ಮಿಲಿಯನ್ ಬ್ಯಾರಲ್ ತೈಲ ಆಮದು ಮಾಡಿಕೊಂಡಿದೆ.

ಕಳೆದ ವರ್ಷ ಬಾಲಿಯಲ್ಲಿ ನಡೆದ ಜಿ-20 ಶೃಂಗಸಭೆಯಲ್ಲಿ ವಿಶ್ವದ ಬಹುತೇಕ ರಾಷ್ಟ್ರಗಳು ಉಕ್ರೇನ್ ನಲ್ಲಿನ ದಾಳಿಯನ್ನು ಖಂಡಿಸಿದ್ದವು. ಆದಾಗ್ಯೂ, ಇನ್ನೂ ಕೆಲ ರಾಷ್ಟ್ರಗಳು ತಮ್ಮ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದವು. ರಷ್ಯಾ ಉಕ್ರೇನ್ ಆಕ್ರಮಣವನ್ನು ವಿಶೇಷ ಮಿಲಿಟರಿ ಆಪರೇಷನ್ ಅಂತಾ ಕರೆದಿದೆ. ರಷ್ಯಾ ವಿರುದ್ಧ ಬಲವಾದ ನಿರ್ಬಂಧ ಹೇರಬೇಕು ಎಂದು ಗುರುವಾರ ಅಮೆರಿಕ ಹಣಕಾಸು ಕಾರ್ಯದರ್ಶಿ ಜಾನೆಟ್ ಯೆಲ್ಲೆನ್  ಹೇಳಿದ್ದಾರೆ.

ಎರಡು ದಿನಗಳ ಜಿ-20 ನಾಯಕರ ಸಭೆಯಲ್ಲಿ ಡಿಜಿಟಲ್ ಕರೆನ್ಸಿ, ಪಾವತಿ, ವಿಶ್ವಬ್ಯಾಂಕ್ ನಂತರ ಸಂಸ್ಥೆಗಳ ಸುಧಾರಣೆ ಮತ್ತಿತರ ವಿಚಾರಗಳ ಬಗ್ಗೆ ವ್ಯಾಪಕ ಚರ್ಚೆ ನಡೆಯುವ ಸಾಧ್ಯತೆಯಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com