ಹತ್ಯೆ (ಸಾಂಕೇತಿಕ ಚಿತ್ರ)
ರಾಜ್ಯ
ಬೆಂಗಳೂರು: ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಗೆ 10 ಬಾರಿ ಚಾಕು ಇರಿದು ಕೊಂದ ಭಗ್ನ ಪ್ರೇಮಿ!
ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಯೋರ್ವಳಿಗೆ ಚಾರಿಯಿಂದ 10 ಬಾರಿ ಇರಿದು ಪಾಗಲ್ ಪ್ರೇಮಿಯೊಬ್ಬ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.
ಬೆಂಗಳೂರು: ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಯೋರ್ವಳಿಗೆ ಚಾರಿಯಿಂದ 10 ಬಾರಿ ಇರಿದು ಪಾಗಲ್ ಪ್ರೇಮಿಯೊಬ್ಬ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.
ಬೆಂಗಳೂರಿನ ಮುರಗೇಶಪಾಳ್ಯದ ಎನ್ಎಎಲ್ ರಸ್ತೆಯಲ್ಲಿ ಇಂದು ಸಂಜೆ ದಿವಾಕರ್ ಎಂಬಾತ ಆಂಧ್ರ ಮೂಲದ 26 ವರ್ಷದ ಲೀಲಾ ಪವಿತ್ರ ಎಂಬಾಕೆಗೆ ಚೂರಿ ಇರಿದು ಹತ್ಯೆ ಮಾಡಿದ್ದಾನೆ.
ದಿವಾಕರ್ ಕಳೆದ ಐದು ವರ್ಷಗಳಿಂದ ಲೀಲಾ ಪವಿತ್ರಳನ್ನು ಪ್ರೀತಿಸುತ್ತಿದ್ದನು. ಆದರೆ ಲೀಲಾ ಇದನ್ನು ನಿರಾಕರಿಸಿದ್ದಕ್ಕೆ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಆರೋಪಿ ದಿವಾಕರ್ ನನ್ನು ಬಂಧಿಸಿರುವ ಜೀವನ್ ಭೀಮಾ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ