ಮಡಿಕೇರಿ: ಕಾಡ್ಗಿಚ್ಚು ತಡೆಯಲು ಹೆಚ್ಚುವರಿ ಅರಣ್ಯ ವೀಕ್ಷಕರ ನೇಮಕ

ಒಣಹವೆಯ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಬೆಂಕಿ ಅವಘಡಗಳು ಹೆಚ್ಚಾಗುತ್ತಿವೆ. ಹೀಗಾಗಿ ಈ ಬಾರಿಯ ಬರಗಾಲದಲ್ಲಿ ಅರಣ್ಯ ಪ್ರದೇಶಗಳನ್ನು ಸಂರಕ್ಷಿಸಲು ಜಿಲ್ಲೆಯಲ್ಲಿ ಅರಣ್ಯ ಇಲಾಖೆ ವಿವಿಧ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.
ಅರಣ್ಯ ಸಿಬ್ಬಂದಿ
ಅರಣ್ಯ ಸಿಬ್ಬಂದಿ
Updated on

ಮಡಿಕೇರಿ: ಒಣಹವೆಯ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಬೆಂಕಿ ಅವಘಡಗಳು ಹೆಚ್ಚಾಗುತ್ತಿವೆ. ಹೀಗಾಗಿ ಈ ಬಾರಿಯ ಬರಗಾಲದಲ್ಲಿ ಅರಣ್ಯ ಪ್ರದೇಶಗಳನ್ನು ಸಂರಕ್ಷಿಸಲು ಜಿಲ್ಲೆಯಲ್ಲಿ ಅರಣ್ಯ ಇಲಾಖೆ ವಿವಿಧ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.

ತೀವ್ರ ಶುಷ್ಕ ಹವಾಮಾನದ ನಂತರ ಕೊಡಗಿನಾದ್ಯಂತ ಖಾಸಗಿ ಎಸ್ಟೇಟ್‌ಗಳು ಮತ್ತು ಜನ ಪ್ರದೇಶಗಳಲ್ಲಿ ಬೆಂಕಿಯ ಘಟನೆಗಳು ಸೇರಿದಂತೆ ಹಲವಾರು ಅಗ್ನಿ ಅವಘಡಗಳು ಆಗಾಗ್ಗೆ ವರದಿಯಾಗುತ್ತಿವೆ. ಈ ಆಕಸ್ಮಿಕ ಬೆಂಕಿಯಿಂದ ಮೀಸಲು ಅರಣ್ಯಗಳು ಮತ್ತು ವನ್ಯಜೀವಿಗಳನ್ನು ರಕ್ಷಿಸಲು, ವಿರಾಜಪೇಟೆ ಮತ್ತು ಮಡಿಕೇರಿ ವಿಭಾಗದ ಅರಣ್ಯ ಇಲಾಖೆ ಅಧಿಕಾರಿಗಳು ಕಾಡ್ಗಿಚ್ಚು ತಡೆಯಲು ಹೆಚ್ಚುವರಿ ಅರಣ್ಯ ವೀಕ್ಷಕರನ್ನು ನೇಮಿಸಿದ್ದಾರೆ.

ವಿರಾಜಪೇಟೆ ವಿಭಾಗದಲ್ಲಿ ಒಟ್ಟು 66 ಕಿ.ಮೀ ಕಾಡ್ಗಿಚ್ಚು ರೇಖೆಗಳನ್ನು ಎಳೆಯಲಾಗಿದೆ. ವಿರಾಜಪೇಟೆ ವಿಭಾಗದ ಡಿಎಫ್‌ಒ ಶರಣಪ್ಪ ಖಚಿತ ಪಡಿಸಿದಂತೆ, ಮಾಕುಟ್ಟ ಅರಣ್ಯ ಪ್ರದೇಶ ಸೇರಿದಂತೆ ವಿರಾಜಪೇಟೆಯ ಮೀಸಲು ಅರಣ್ಯಗಳಲ್ಲಿ ಮೂರು ಮೀಟರ್ ಅಗಲದಲ್ಲಿ ಕಾಡ್ಗಿಚ್ಚು ರೇಖೆಗಳನ್ನು ಎಳೆಯಲಾಗಿದೆ.

ಇದೇ ವೇಳೆ ಇಲಾಖೆಯಿಂದ ಒಟ್ಟು 28 ಮಂದಿ ಅರಣ್ಯ ವೀಕ್ಷಕರನ್ನು ಅರಣ್ಯ ಅಗ್ನಿ ವೀಕ್ಷಕರನ್ನಾಗಿ ನೇಮಿಸಲಾಗಿದೆ. ಯಾವುದೇ ಕಾಡ್ಗಿಚ್ಚನ್ನು ವರದಿ ಮಾಡಲು ಅಗ್ನಿಶಾಮಕ ವೀಕ್ಷಕರು ಅರಣ್ಯದ ಗಡಿಯುದ್ದಕ್ಕೂ ನಿಯಮಿತವಾಗಿ ಮೇಲ್ವಿಚಾರಣೆ ಮಾಡುತ್ತಾರೆ. ನಾಲ್ವರ ತಂಡ ಸದಾ ಅರಣ್ಯದ ಗಡಿ ಪ್ರದೇಶಗಳ ಮೇಲೆ ನಿಗಾ ಇಡುತ್ತಿದೆ ಎಂದು ವಿವರಿಸಿದರು.

ಮಡಿಕೇರಿ ವಿಭಾಗದ ಅರಣ್ಯ ಪ್ರದೇಶದಲ್ಲಿ ಒಟ್ಟು 200 ಕಿ.ಮೀ ಅರಣ್ಯ ಬೆಂಕಿ ರೇಖೆ ಎಳೆಯಲಾಗಿದೆ. ಅರಣ್ಯ ಪ್ರದೇಶವನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಲು ಒಟ್ಟು 20 ಅರಣ್ಯ ಅಗ್ನಿಶಾಮಕ ವೀಕ್ಷಕರನ್ನು ಇಲಾಖೆಯಿಂದ ಹೊರಗುತ್ತಿಗೆ ನೀಡಲಾಗಿದೆ ಎಂದು ಡಿಸಿಎಫ್ ಪೂವಯ್ಯ ಖಚಿತಪಡಿಸಿದರು. 

ಯಾವುದೇ ಆಕಸ್ಮಿಕ ಬೆಂಕಿಯನ್ನು ನಂದಿಸಲು ತಕ್ಷಣಕ್ಕೆ ಬೇಕಾಗಿರುವ ಬ್ಲೋವರ್‌ಗಳು, ವಾಟರ್ ಕ್ಯಾನ್‌ಗಳು ಮತ್ತು ಸ್ಪ್ರೇಯರ್‌ಗಳು ಸೇರಿದಂತೆ ಅಗ್ನಿಶಾಮಕ ಸಾಧನಗಳನ್ನು ಇಲಾಖೆ ಖರೀದಿಸಿದೆ ಎಂದು ಪೂವಯ್ಯ ಹೇಳಿದರು. ಕಾಡ್ಗಿಚ್ಚು ವೀಕ್ಷಕರಿಗೆ ಕಾಡ್ಗಿಚ್ಚಿನ ಸಂದರ್ಭದಲ್ಲಿ ತ್ವರಿತವಾಗಿ ಕಾರ್ಯನಿರ್ವಹಿಸಲು ಅಗ್ನಿಶಾಮಕ ಬೂಟುಗಳು ಮತ್ತು ಸೂಟ್ಗಳನ್ನು ಸಹ ಒದಗಿಸಲಾಗಿದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com