ಗುಜರಾತ್ ನ ಅಮುಲ್ ಜೊತೆ, ಕರ್ನಾಟಕದ ಕೆಎಂಫ್ ವಿಲೀನ: ಅಮಿತ್ ಶಾ ಹೇಳಿಕೆಗೆ ಸಿದ್ದರಾಮಯ್ಯ ಕಿಡಿ
ಕರ್ನಾಟಕದ ರೈತರಿಗೆ ನೆರವಾಗಲು ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಮತ್ತು ಅಮುಲ್ ಇಂಡಿಯಾ ಒಟ್ಟಾಗಿ ಕೆಲಸ ಮಾಡಬೇಕು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗೆ ಪ್ರತಿಪಕ್ಷ ಕಾಂಗ್ರೆಸ್ ಮತ್ತು ನಿಟ್ಟಿಗಲು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Published: 01st January 2023 07:18 AM | Last Updated: 01st January 2023 07:18 AM | A+A A-

ಸಿದ್ದರಾಮಯ್ಯ
ಬೆಂಗಳೂರು: ಕರ್ನಾಟಕದ ರೈತರಿಗೆ ನೆರವಾಗಲು ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಮತ್ತು ಅಮುಲ್ ಇಂಡಿಯಾ ಒಟ್ಟಾಗಿ ಕೆಲಸ ಮಾಡಬೇಕು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗೆ ಪ್ರತಿಪಕ್ಷ ಕಾಂಗ್ರೆಸ್ ಮತ್ತು ನಿಟ್ಟಿಗಲು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಷಾ ಅವರ ಸಲಹೆ ಕೆಎಂಎಫ್ ಅವಲಂಬಿಸಿರುವ 25 ಲಕ್ಷ ರೈತರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಮಾಜಿ ಮುಖ್ಯಮಂತ್ರಿ ಮತ್ತು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಕರ್ನಾಟಕದಲ್ಲಿ ಹಾಲು ಉತ್ಪಾದಕರು ಸುಮಾರು 20,000 ಕೋಟಿ ರೂಪಾಯಿ ವ್ಯಾಪಾರ ಮಾಡುತ್ತಿದ್ದು, ಗುಜರಾತ್‌ನ ಕಾರ್ಪೊರೇಟ್‌ಗಳು ಈಗ ಅದರ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ನಡುವೆ ಅಮುಲ್ ಜೊತೆಗೆ ಕೆಎಂಎಫ್ ವಿಲೀನದ ಕುರಿತು ಹಲವರು ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆ ಮಾಡಿದ್ದು, ಕೇಂದ್ರದ ಈ ಸಲಹೆ ವಿರುದ್ಧ ಕಿಡಿಕಾರುತ್ತಿದ್ದಾರೆ.
ಎರಡೂ ಬ್ರಾಂಡ್ ಗಳ ಗುಣಮಟ್ಟ, ಬೆಲೆ ಹಾಗೂ ರುಚಿಯನ್ನು ಹೋಲಿಕೆ ಮಾಡಿದ್ದು, ಈ ವಿಚಾರದಲ್ಲಿ ನಂದಿ ಅತ್ಯುತ್ತಮವಾಗಿದೆ ಎಂದು ಹೇಳಿದ್ದಾರೆ.
ಕೆಎಂಎಫ್ ಕರ್ನಾಟಕದ ಹೆಮ್ಮೆ ಎಂದು ಕರೆದಿರುವ ನೆಟ್ಟಿಗರು, ಕೆಎಂಎಫ್ ಕರ್ನಾಟಕದಲ್ಲಿ ಅಗ್ರ ಮತ್ತು ಲಾಭದಾಯಕ ಬ್ರ್ಯಾಂಡ್ ಎಂದು ಕೊಂಡಾಡಿದ್ದಾರೆ.