ಬೀಪ್ ಸೌಂಡ್ ಬಂದ ಕಾರಣ ಜಾಕೆಟ್ ತೆಗೆಯುವಂತೆ ಹೇಳಲಾಗಿತ್ತು, ಶರ್ಟನ್ನಲ್ಲ: ಸಿಐಎಸ್ಎಫ್ ಸ್ಪಷ್ಟನೆ

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ಭದ್ರತಾ ಸಿಬ್ಬಂದಿ ಮಂಗಳವಾರ ರಾತ್ರಿ ತನ್ನ ಶರ್ಟ್ ತೆಗೆಯುವಂತೆ ಹೇಳಿದ್ದರು ಎಂಬ ಯುವತಿಯ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್‌ಎಫ್) ಉನ್ನತ ಅಧಿಕಾರಿಯೊಬ್ಬರು ಸ್ಪಷ್ಟನೆ ನೀಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ಭದ್ರತಾ ಸಿಬ್ಬಂದಿ ಮಂಗಳವಾರ ರಾತ್ರಿ ತನ್ನ ಶರ್ಟ್ ತೆಗೆಯುವಂತೆ ಹೇಳಿದ್ದರು ಎಂಬ ಯುವತಿಯ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್‌ಎಫ್) ಉನ್ನತ ಅಧಿಕಾರಿಯೊಬ್ಬರು ಸ್ಪಷ್ಟನೆ ನೀಡಿದ್ದಾರೆ.

ಭದ್ರತಾ ದೃಷ್ಟಿಯಿಂದ ಮಹಿಳೆಯನ್ನು ತಪಾಸಣೆ ನಡೆಸಿದಾಗ ಬೀಪ್ ಸೌಂಡ್ ಬಂದಿತ್ತು. ಹೀಗಾಗಿ ಮಹಿಳೆಗೆ ಜಾಕೆಟ್ ತೆಗೆಯುವಂತೆ ಹೇಳಲಾಗಿತ್ತು. ಆದರೆ, ಶರ್ಟ್ ತೆಗೆಯುವಂತೆ ಹೇಳಲಾಗಿರಲಿಲ್ಲ. ಆ ಜಾಕೆಟ್ ನ್ನೂ ಕೂಡ ಸಾರ್ವಜನಿಕವಾಗಿ ಅಲ್ಲದೆ, ಮಹಿಳೆಯರ ಸ್ಕ್ಯಾನಿಂಗ್ ಗಾಗಿ ಇರುವ ಪ್ರತ್ಯೇಕ ಪ್ರದೇಶದಲ್ಲಿ ತೆಗೆಯುವಂತೆ ತಿಳಿಸಲಾಗಿತ್ತು. ಜಾಕೆಟ್ ಅನ್ನು ಸ್ಕ್ಯಾನ್ ಮಾಡಿ ಮರಳಿಗೆ ಅವರಿಗೆ ಹಿಂತಿರುಗಿಸಲಾಗಿತ್ತು ಎಂದು ತಿಳಿಸಿದ್ದಾರೆ.

ಮಹಿಳೆಯೊಬ್ಬರು ನಿಲ್ದಾಣ ಪ್ರವೇಶಿಸುತ್ತಿದ್ದಂತೆಯೇ ಬೀಪ್ ಶಬ್ದ ಕೇಳಬಂದಿದ್ದು, ಈವೇಳೆ ಸಿಬ್ಬಂದಿಗಳು ಆಕೆ ಧರಿಸಿದ್ದ ನೀಲಿ ಬಣ್ಣದ ಜೀನ್ಸ್ ಜಾಕೆಟ್ ತೆಗೆಯುವಂತೆ ಆಕೆಗೆ ಸೂಚಿಸಿರುವತ್ತಿರುವ ದೃಶ್ಯಗಳು ಕೂಡ ಸಿಸಿಟಿವಿಯಲ್ಲಿ ಕಂಡು ಬಂದಿದೆ.

ಆರೋಪ ಸಂಬಂಧ "ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಮಹಿಳೆಗೆ ಕರೆ ಮಾಡಿ, ಟ್ವೀಟ್ ಮಾಡಿದ ಕಾರಣ ತಿಳಿಸುವಂತೆ ಕೇಳಿದ್ದು, ಈ ವೇಳೆ ಮಹಿಳೆ, ಹ್ಯಾಂಡ್ ಬ್ಯಾಗೇಜ್ ಸ್ಕ್ರೀನಿಂಗ್ ವಿಳಂಬದಿಂದ ಬೇಸತ್ತು, ಕೋಪದಲ್ಲಿ ಟ್ವೀಟ್ ಮಾಡಿರುವುದಾಗಿ ಹೇಳಿದ್ದಾರೆಂದು ಸಿಐಎಸ್ಎಫ್ ಅಧಿಕಾರಿಗಳು ತಿಳಿಸಿದ್ದಾರೆ.

ಟ್ವೀಟ್ ಸಂಬಂಧ ಮಹಿಳೆ ವಿರುದ್ಧ ಕಾನೂನು ಅಥವಾ ಇತರೆ ಕ್ರಮಗಳ ಕೈಗೊಳ್ಳುವ ಚಿಂತನೆಗಳಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ. ಈ ಎಲ್ಲಾ ಬೆಳವಣಿಗೆ ಬಳಿಕ ಮಹಿಳೆ ತನ್ನೆಲ್ಲಾ ಟ್ವೀಟ್ ಗಳನ್ನು ಡಿಲೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com