108 ಆಂಬ್ಯುಲೆನ್ಸ್: ಸೇವಾ ಸಂಸ್ಥೆ ಬದಲಾಯಿಸಲು ಟೆಂಡರ್, ಬಿಡ್ ದಾರರೇ ಇಲ್ಲ!

ರೋಗಿಗಳಿಗೆ ಉಚಿತ ಆಂಬ್ಯುಲೆನ್ಸ್‌ ಸೇವೆ ಒದಗಿಸುವ  '108 ಆಂಬ್ಯುಲೆನ್ಸ್‌' ಸೇವೆ ನೀಡಲು ಗುತ್ತಿಗೆ ಪಡೆದಿರುವ ಖಾಸಗಿ ಕಂಪನಿ  ಬದಲಾಯಿಸಲು ಈವರೆಗೂ ಕರೆಯಲಾದ ಟೆಂಡರ್ ನಲ್ಲಿ ಯಾವುದೇ ಬಿಡ್ ದಾರರು ಬಿಡ್ ಸಲ್ಲಿಸದ ಕಾರಣ  ರಾಜ್ಯ ಸರ್ಕಾರದ ಕ್ರಮಗಳು ಹೆಚ್ಚಿನ ಪ್ರಗತಿ ಕಂಡಿಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರೋಗಿಗಳಿಗೆ ಉಚಿತ ಆಂಬ್ಯುಲೆನ್ಸ್‌ ಸೇವೆ ಒದಗಿಸುವ  '108 ಆಂಬ್ಯುಲೆನ್ಸ್‌' ಸೇವೆ ನೀಡಲು ಗುತ್ತಿಗೆ ಪಡೆದಿರುವ ಖಾಸಗಿ ಕಂಪನಿ  ಬದಲಾಯಿಸಲು ಈವರೆಗೂ ಕರೆಯಲಾದ ಟೆಂಡರ್ ನಲ್ಲಿ ಯಾವುದೇ ಬಿಡ್ ದಾರರು ಬಿಡ್ ಸಲ್ಲಿಸದ ಕಾರಣ ರಾಜ್ಯ ಸರ್ಕಾರದ ಕ್ರಮದಲ್ಲಿ ಹೆಚ್ಚಿನ ಪ್ರಗತಿ ಕಂಡಿಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಜಿವಿಕೆ-ಇಎಂಆರ್ ಐ ರಾಜ್ಯದಲ್ಲಿ 14 ವರ್ಷಗಳಿಂದ ಆಂಬ್ಯುಲೆನ್ಸ್ ಸೇವೆಗಳನ್ನು ನಿರ್ವಹಿಸುತ್ತಿರುವ ಕಂಪನಿಯಾಗಿದೆ.

ಆಂಬ್ಯುಲೆನ್ಸ್ ಸೇವೆಗಳ ಗುಣಮಟ್ಟ,  ತಡವಾಗಿ ಪ್ರತಿಕ್ರಿಯೆ ಮತ್ತು ಸರ್ವರ್‌ನಲ್ಲಿನ ತಾಂತ್ರಿಕ ದೋಷ ಸೇರಿದಂತೆ ಹಲವಾರು ವಿಷಯದಲ್ಲಿ ದೂರುಗಳು ಕೇಳಿಬಂದಿದ್ದವು. ಇದರಿಂದಾಗಿ ಸೇವೆಯಲ್ಲಿ ಹಠಾತ್ ಅಸ್ತವ್ಯಸ್ತವಾಗಿತ್ತು. ಸಿಎಜಿ 2022 ರ ವರದಿಯಲ್ಲೂ ಸೇವೆಯಲ್ಲಿ ವೈಫಲ್ಯವನ್ನು ಎತ್ತಿ ತೋರಿಸಿದೆ. 

ಜನವರಿ 9 ರಂದು ಹೊಸ ಟೆಂಡರ್ ಕರೆಯಲಾಗಿತ್ತು. ಆದರೆ, ಯಾವುದೇ ಬಿಡ್ ದಾರರು ಆಸಕ್ತಿ ತೋರಿಲ್ಲ. ಹೊಸ ಟೆಂಡರ್ ನಲ್ಲಿ ಕೆಲವು ಅವಶ್ಯತೆಗಳನ್ನು ಬದಲಾಯಿಸಲಾಗಿದೆ. ಶೀಘ್ರದಲ್ಲಿಯೇ ಆಸಕ್ತ ಬಿಡ್ ದಾರರು ಸಿಗುವ ವಿಶ್ವಾಸವಿದೆ ಎಂದು (108 ತುರ್ತು ಆಂಬ್ಯುಲೆನ್ಸ್ ) ಉಪ ನಿರ್ದೇಶಕ ಡಾ.ನಾರಾಯಣ ಹೇಳಿದ್ದಾರೆ. 

ಜನರಿಗೆ ಉತ್ತಮ ಗುಣಮಟ್ಟದ ಸೇವೆಗಳನ್ನು ಒದಗಿಸುವುದನ್ನು ಖಚಿತಪಡಿಸಿಕೊಳ್ಳಲು ಹೊಸ ಸೇವಾ ಪೂರೈಕೆದಾರರಿಗೆ ಮಾರ್ಗಸೂಚಿ ಮತ್ತು ಕಠಿಣ ದಂಡ ವಿಧಿಸಲು ಸರ್ಕಾರ ಯೋಜಿಸುತ್ತಿದೆ ಎಂದು ಅವರು ಹೇಳಿದರು. ಹಲವಾರು ಬಾರಿ, ಕಟ್ಟುನಿಟ್ಟಾದ ನಿಯಮಗಳನ್ನು ಹಾಕಲಾಗಿರುವುದರಿಂದ ಹೊಣೆಗಾರಿಕೆಯ ಕೊರತೆ ಕಂಡುಬಂದಿದೆ ಮತ್ತು  ಆಂಬ್ಯುಲೆನ್ಸ್‌ಗಳ ಕಳಪೆ ಗುಣಮಟ್ಟ ಅಥವಾ ತಡವಾಗಿ ಸೇವೆ ಒದಗಿಸುವ ಬಗ್ಗೆ ಸೇವಾ ಪೂರೈಕೆದಾರರಿಂದ ಹೆಚೆನ್ನೂ ಮಾಡಲಾಗಿಲ್ಲ ಎಂದು ಅವರು ತಿಳಿಸಿದರು. 

ಕಳೆದ ವರ್ಷ ಸೆಪ್ಟೆಂಬರ್  ಕಂಡುಬಂದ ತಾಂತ್ರಿಕ ದೋಷಗಳನ್ನು ಒಂದು ದಿನದ ಸಮಯದಲ್ಲಿ ಪರಿಹರಿಸಲಾಗಿದೆ. ತಾಂತ್ರಿಕ ದೋಷ ಹೊರತುಪಡಿಸಿ 14 ವರ್ಷಗಳಿಂದ ಸಮಯಕ್ಕೆ ಸರಿಯಾಗಿ ಸೇವೆಗಳನ್ನು ಒದಗಿಸಿದ್ದೇವೆ ಎಂದು ಜಿವಿಕೆ (ಇಎಂಆರ್ ಐ) ಸಿಇಒ ಆರ್ ಜಿ ಹನುಮಂತ್  ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com