ಹಲ್ಲೆಗೊಳಗಾದ ಬೇಕರಿ ಮಾಲೀಕ ಮಂಜುನಾಥ್ ಶೆಟ್ಟಿ
ರಾಜ್ಯ
ಬೆಂಗಳೂರು: ಬೇಕರಿ ಮಾಲೀಕನಿಗೆ ರಾಡ್ ನಿಂದ ಹೊಡೆದು, ಹಲ್ಲೆಗೈದ ದುಷ್ಕರ್ಮಿಗಳು
ಬೇಕರಿ ಮಾಲೀಕರೊಬ್ಬರಿಗೆ ದುಷ್ಕರ್ಮಿಗಳು ರಾಡ್ ನಿಂದ ಹೊಡೆದು ಹಲ್ಲೆಗೈದಿರುವ ಘಟನೆ ಜೆ.ಪಿ. ನಗರದಲ್ಲಿ ಸೋಮವಾರ ನಡೆದಿದೆ.
ಬೆಂಗಳೂರು: ಬೇಕರಿ ಮಾಲೀಕರೊಬ್ಬರಿಗೆ ದುಷ್ಕರ್ಮಿಗಳು ರಾಡ್ ನಿಂದ ಹೊಡೆದು ಹಲ್ಲೆಗೈದಿರುವ ಘಟನೆ ಜೆ.ಪಿ. ನಗರದಲ್ಲಿ ಸೋಮವಾರ ನಡೆದಿದೆ.
ಮಂಜುನಾಥ್ ಶೆಟ್ಟಿ ಹಲ್ಲೆಗೊಳಗಾದ ಬೇಕರಿ ಮಾಲೀಕರು. ಇವರು ಜೆಪಿ ನಗರದಲ್ಲಿ ಬೇಕರಿ ನಡೆಸುತ್ತಿದ್ದಾರೆ. ನಿನ್ನೆ ಬೇಕರಿ ಹತ್ತಿರ ಬಂದ ನಾಲ್ಕೈದು ಪುಂಡರು ಅಂಗಡಿಯೊಳಗೆ ನುಗ್ಗಿದ್ದು, ಸಿಗರೇಟ್ ಬಂಡಲಿಗೆ ಕೈ ಹಾಕಿ ತೆಗೆದುಕೊಳ್ಳಲು ಯತ್ನಿಸಿದ್ದಾರೆ. ಇದನ್ನು ಪ್ರಶ್ನಿಸಿದಾಗ ರಾಡ್ ಗಳಿಂದ ಹಲ್ಲೆ ನಡೆಸಿರುವುದಾಗಿ ಮಂಜುನಾಥ್ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.
ನನ್ನನ್ನು ರಸ್ತೆಗೆ ಎಳೆದು ತಂದು ಕಾಲಿನಿಂದ ತುಳಿದಿದ್ದಾರೆ. ರಸ್ತೆಯಲ್ಲಿದ್ದ ಸಲಾಕೆಯಿಂದಲೂ ನನ್ನ ಎದೆ,ತಲೆ ಹಾಗೂ ಹೊಟ್ಟೆಗೆ ಮನಬಂದಂತೆ ಹಲ್ಲೆ ನಡೆಸಿರುವುದಾಗಿ ಮಂಜುನಾಥ್ ಶೆಟ್ಟಿ ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ