ಇರುಮುಡಿ ಹೊತ್ತು ಶಬರಿಮಲೆ ಅಯ್ಯಪ್ಪನ ದರ್ಶನ ಪಡೆದ ಗೃಹ ಸಚಿವ ಆರಗ ಜ್ಞಾನೇಂದ್ರ

ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಮಾಲಾಧಾರಿಯಾಗಿ ಶಬರಿಮಲೆ ಅಯ್ಯಪ್ಪ ಸ್ವಾಮಿ ಸ್ವಾಮಿ ದರ್ಶನ ಪಡೆದುಕೊಂಡಿದ್ದಾರೆ.
ಮಾಲಾಧಾರಿಯಾಗಿ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಹೊರಟಿರುವ ಗೃಹ ಸಚಿವ ಆರಗ ಜ್ಞಾನೇಂದ್ರ
ಮಾಲಾಧಾರಿಯಾಗಿ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಹೊರಟಿರುವ ಗೃಹ ಸಚಿವ ಆರಗ ಜ್ಞಾನೇಂದ್ರ

ಶಿವಮೊಗ್ಗ: ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಮಾಲಾಧಾರಿಯಾಗಿ ಶಬರಿಮಲೆ ಅಯ್ಯಪ್ಪ ಸ್ವಾಮಿ ಸ್ವಾಮಿ ದರ್ಶನ ಪಡೆದುಕೊಂಡಿದ್ದಾರೆ.

ಕಳೆದ 6-7 ವರ್ಷಗಳ ಹಿಂದೆ ಅಯ್ಯಪ್ಪ ಮಾಲದಾರಿಯಾಗಿ ಶಬರಿಮಲೆ ಯಾತ್ರೆ ಮಾಡುವ ಸಂಕಲ್ಪ ತೊಟ್ಟಿದ್ದ ಆರಗ ಜ್ಞಾನೇಂದ್ರ ಅವರು, ಈ ವರ್ಷ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಇರುಮುಡಿ ಹೊತ್ತು ತೆರಳಿದ್ದಾರೆ.

ಹಲವು ಬಾರಿ ಹೋಗಲು ಪ್ರತ್ನಿಸಿದ್ದರೂ ಕೊನೇ ಕ್ಷಣದಲ್ಲಿ ಹೋಗಲು ಸಾಧ್ಯವಾಗಿರಲಿಲ್ಲ. ಈ ವರ್ಷ ಏನೇ ಕಾರ್ಯದೊತ್ತಡ ಇದ್ದರೂ ಸ್ವಾಮಿಯ ಸನ್ನಿದಾನಕ್ಕೆ ಭೇಟಿ ಕೊಡಲೇಬೇಕು ಎಂದು 15 ದಿನ ಹಿಂದೆ ನಿಶ್ಚಯಿಸಿದ್ದೆ. ಅದರಂತೆ, ಇಂದು ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಇರುಮುಡಿಯನ್ನು ಹೊತ್ತು ತೆರಳಿದ್ದೇನೆಂದು ಆರಗ ಜ್ಞಾನೇಂದ್ರ ಅವರು ಹೇಳಿದ್ದಾರೆ.

ಅಯ್ಯಪ್ಪನ ಭಕ್ತನಾಗಿ ಅಯ್ಯಪ್ಪ ಸ್ವಾಮಿ ಭಕ್ತರ ಭಕ್ತಿಯಲ್ಲಿ ಕೈ ಜೊಡಿಸಬೇಕು ಎಂಬ ಅಭಿಲಾಷೆಯಿತ್ತು. ಅಯ್ಯಪ್ಪಸ್ವಾಮಿಯ ದರ್ಶನ ಮಾಡಲೇಬೇಕೆನ್ನುವ ಸಂಕಲ್ಪದೊಂದಿಗೆ ಭಕ್ತರ ಜೊತೆಗೆ ಅಯ್ಯಪ್ಪನ ದರ್ಶನ ಮಾಡಿದದ್ದೇನೆ. ಹಲವು ಬಾರಿ ಪ್ರಯತ್ನಿಸಿದ್ದರೂ ಕಾರಣಾಂತರಗಳಿಂದ ಕಾಲ ಕೂಡಿ ಬಂದಿರಲಿಲ್ಲ. ಕಳೆದ ಹದಿನೈದು ದಿನದ ಹಿಂದೆ ಶಬರಿಮಲೆಗೆ ಪಾದಯಾತ್ರೆ ಮುಗಿಸಿ ಬಂದವರು ಈ ಬಾರಿ ನಿಮ್ಮನ್ನು ಕರೆದುಕೊಂಡು ಬಂದೇ ಬರುತ್ತೇವೆ ಎಂದು ಶಪತ ಮಾಡಿ ಬಂದಿದ್ದೇವೆ ಹೊರಡಲೇಬೇಕು ಎಂದಿದ್ದರು. ಹಾಗಾಗಿ, ಅವರೊಂದಿಗೆ ಅಯ್ಯಪ್ಪಸ್ವಾಮಿ ದರ್ಶನಕ್ಕೆ ಬಂದಿದ್ದಾಗಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com