ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಆರ್ಥಿಕ ಕೊರತೆಯಿಂದ ಸ್ಥಗಿತಗೊಂಡಿದ್ದ ಮೊಬೈಲ್ ಕ್ಲಿನಿಕ್ ಸೇವೆ ಪುನರಾರಂಭಿಸಲು ಸರ್ಕಾರ ಚಿಂತನೆ!

ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್‌ಎಚ್‌ಎಂ) ಅಡಿಯಲ್ಲಿ ಆರಂಭಿಸಲಾಗಿದ್ದ ಮೊಬೈಲ್ ಕ್ಲಿನಿಕ್ ಸೇವೆ (ಎಂಎಂಯು)ಯನ್ನು ಪುನರಾರಂಭಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ಬೆಂಗಳೂರು: ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್‌ಎಚ್‌ಎಂ) ಅಡಿಯಲ್ಲಿ ಆರಂಭಿಸಲಾಗಿದ್ದ ಮೊಬೈಲ್ ಕ್ಲಿನಿಕ್ ಸೇವೆ (ಎಂಎಂಯು)ಯನ್ನು ಪುನರಾರಂಭಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ಹಣಕಾಸಿನ ಕೊರತೆಯಿಂದಾಗಿ ಕಳೆದ ವರ್ಷ ಮಾರ್ಚ್ ತಿಂಗಳಿನಲ್ಲಿ ಮೊಬೈಲ್ ಕ್ಲಿನಿಕ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಈ ಸೇವೆಯನ್ನು ಪುನರಾರಂಭಿಸಲು ಸರ್ಕಾರ ಮುಂದಾಗಿದೆ.

ಉಪನಿರ್ದೇಶಕ (ಎಂಎಂಯು) ಡಾ ಆರ್ ನಾರಾಯಣ್ ಅವರು ಮಾತನಾಡಿ, ಆರ್ಥಿಕ ಕೊರತೆಯಿಂದಾಗಿ 2021ರಲ್ಲಿ ಮೊಬೈಲ್ ಕ್ಲಿನಿಕ್ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಎಂಎಂಯು ಘಟಕಕ್ಕೆ ತಗುಲುವ ವೆಚ್ಚವನ್ನು ಸರ್ಕಾರದ ಮುಂದಿಡಲಾಗಿತ್ತು. ಈ ಖರ್ಚುವೆಚ್ಚಗಳಿಗೆ ಸರ್ಕಾರ ಇದೀಗ ಒಪ್ಪಿಗೆ ನೀಡಿದ್ದು, ಸ್ವಲ್ಪ ವೆಚ್ಚದ ಕಡಿತದೊಂದಿಗೆ 2023ರಲ್ಲಿ ಮರಳಿ ಈ ಸೇವೆಯನ್ನು ಪುನರರಾಂಭಿಸಲು ಚಿಂತನೆ ನಡೆದಿದೆ ಎಂದು ಹೇಳಿದ್ದಾರೆ.

ಆರೋಗ್ಯ ಆಯುಕ್ತ ಡಿ.ರಂದೀಪ್ ಅವರು ಮಾತನಾಡಿ, ಎನ್​ಹೆಚ್‌ಎಂ ಆದೇಶದಂತೆ ಎಂಎಂಯು ಘಟಕಕ್ಕೆ ರೂ 1.55 ಲಕ್ಷ ಅಗತ್ಯವಿರುತ್ತದೆ. ಅದಾಗ್ಯೂ 3.34 ಲಕ್ಷ ರೂ.,ಗಳ ವೆಚ್ಚದಲ್ಲಿ 34 ಘಟಕಗಳ ಸ್ಥಾಪನೆಗೆ ಸರ್ಕಾರ ಮುಂದಾಗಿದೆ ಎಂದು ತಿಳಿಸಿದ್ದಾರೆ.

2.8 ಲಕ್ಷ ರೂ.ಗಳ ಪರಿಷ್ಕೃತ ವೆಚ್ಚಕ್ಕೆ ಕೇಂದ್ರ ಸರಕಾರದಿಂದ ಒಪ್ಪಿಗೆ ಪಡೆದುಕೊಳ್ಳಲಾಗಿದ್ದು, ಅನುಮೋದಿತ ಬಜೆಟ್ ನೊಂದಿಗೆ ಪ್ರತೀ ಘಟಕ್ಕೆ ಕಡಿಮೆ ಸಂಖ್ಯೆಯಲ್ಲಿ ಸಿಬ್ಬಂದಿಗಳ ನೇಮಿಸಿಕೊಂಡು, ಘಟಕಗಳ ಆರಂಭಿಸಲಾಗುತ್ತದೆ. ಹೊರಗುತ್ತಿಗೆ ಸೇವೆಗಳ ಟೆಂಡರ್ ಪ್ರಕ್ರಿಯೆ ಶೀಘ್ರದಲ್ಲೇ ಆರಂಭಿಸುವ ನಿರೀಕ್ಷೆಗಳಿವೆ ಎಂದು ಡಾ ನಾರಾಯಣ್ ಅವರು ಹೇಳಿದ್ದಾರೆ.

ಇನ್ನೂ 50 ಎಂಎಂಯುಗಳಿಗೆ ಆರೋಗ್ಯ ಇಲಾಖೆ ಅನುಮೋದನೆ ನೀಡುವ ನಿರೀಕ್ಷೆಗಳಿವೆ ಎಂದು ತಿಳಿಸಿದ್ದಾರೆ.

ಕೃಪಾ ಎಂ ಮಾತನಾಡಿ, ಸರಕಾರ ಹಲವಾರು ಯೋಜನೆಗಳನ್ನು ತಂದರೂ ಅದರ ಅನುಷ್ಠಾನದಲ್ಲಿ ಸಮಸ್ಯೆಗಳು ಎದುರಾಗುತ್ತವೆ. ಮೂಲಭೂತ ಸೇವೆಗಳಿಗಾಗಿ ಜನರು ಹೆಚ್ಚು ದೂರ ಪ್ರಯಾಣಿಸುವುದನ್ನು ತಪ್ಪಿಸಲು, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸೌಲಭ್ಯಗಳನ್ನು ಒದಗಿಸಲು ಎಂಎಂಯುಗಳನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com