ಲಂಚ ಪ್ರಕರಣ: ಇಬ್ಬರು ಅಧಿಕಾರಿಗಳಿಗೆ ನಾಲ್ಕು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ನೀಡಿದ ಕರ್ನಾಟಕ ನ್ಯಾಯಾಲಯ

ಮಹತ್ವದ ತೀರ್ಪಿನಲ್ಲಿ, ಇಲ್ಲಿನ ಏಳನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಭ್ರಷ್ಟಾಚಾರ ಪ್ರಕರಣದಲ್ಲಿ ಉಪ ತಹಶೀಲ್ದಾರ್ ಮತ್ತು ಗ್ರಾಮ ಲೆಕ್ಕಿಗರಿಗೆ ನಾಲ್ಕು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಯನ್ನು (ಆರ್‌ಐ) ಶನಿವಾರ ವಿಧಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ತುಮಕೂರು: ಮಹತ್ವದ ತೀರ್ಪಿನಲ್ಲಿ, ಇಲ್ಲಿನ ಏಳನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಭ್ರಷ್ಟಾಚಾರ ಪ್ರಕರಣದಲ್ಲಿ ಉಪ ತಹಶೀಲ್ದಾರ್ ಮತ್ತು ಗ್ರಾಮ ಲೆಕ್ಕಿಗರಿಗೆ ನಾಲ್ಕು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಯನ್ನು (ಆರ್‌ಐ) ಶನಿವಾರ ವಿಧಿಸಿದೆ. ಜೊತೆಗೆ, ಸುಳ್ಳು ಸಾಕ್ಷ್ಯ ನೀಡಿದ ಆರೋಪದ ಮೇಲೆ ಕೆಎಎಸ್ ಅಧಿಕಾರಿ ಮತ್ತು ಲೋಕಾಯುಕ್ತ ತನಿಖಾಧಿಕಾರಿ, ದೂರುದಾರನ ಮೇಲೂ ಪ್ರಕರಣ ದಾಖಲಿಸುವಂತೆ ಮುಖ್ಯ ಆಡಳಿತಾಧಿಕಾರಿ (ಸಿಎಒ) ಅವರಿಗೆ ಆದೇಶಿಸಿದೆ.

ಭ್ರಷ್ಟಾಚಾರ ತಡೆ ಕಾಯಿದೆಗೆ (ಪಿಸಿಎ) ಸಂಬಂಧಿಸಿದ ಪ್ರಕರಣಗಳ ವಿಚಾರಣೆಗೆ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಟಿ.ಪಿ.ಗೌಡ ಅವರು, ಅಪರಾಧಕ್ಕಾಗಿ ಕುಣಿಗಲ್ ತಾಲೂಕಿನಲ್ಲಿ ಗ್ರಾಮ ಲೆಕ್ಕಾಧಿಕಾರಿಯಾಗಿದ್ದ ಆರ್.ಶಿವಕುಮಾರ್ ಮತ್ತು ಉಪ ತಹಶೀಲ್ದಾರ್ ಎಚ್.ಟಿ.ವಸಂತರಾಜು ಅವರನ್ನು ಅಪರಾಧಿ ಎಂದು ಘೋಷಿಸಿದ್ದಾರೆ. 

ತಪ್ಪಿತಸ್ಥರಿಗೆ ತಲಾ 40 ಸಾವಿರ ರೂಪಾಯಿ ದಂಡ ವಿಧಿಸಲಾಗಿದ್ದು, ಅದನ್ನು ಪಾವತಿಸದಿದ್ದಲ್ಲಿ ಆರು ತಿಂಗಳ ಸಾದಾ ಜೈಲು ಶಿಕ್ಷೆ ನೀಡುವುದಾಗಿ ಮತ್ತು ಇಬ್ಬರ ವಿರುದ್ಧದ ಎರಡು ಪ್ರಕರಣಗಳಲ್ಲಿ ಶಿಕ್ಷೆಯು ಏಕಕಾಲದಲ್ಲಿ ಜಾರಿಯಾಗುತ್ತವೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ದೂರುದಾರ ರಾಜೇಶ್ ಪ್ರಸಾದ್ ವೈಎಸ್ ವಿರುದ್ಧ ಶಿಕ್ಷಾರ್ಹ ಸುಳ್ಳು ಸಾಕ್ಷ್ಯವನ್ನು ನೀಡಿದ ಅಪರಾಧಕ್ಕಾಗಿ ಮತ್ತು ಕುಣಿಗಲ್ ಮಾಜಿ ತಹಶೀಲ್ದಾರ್ ಶಂಭುಲಿಂಗಯ್ಯ ಹಾಗೂ ಲೋಕಾಯುಕ್ತ ತನಿಖಾಧಿಕಾರಿ ಗೌತಮ್ ವಿರುದ್ಧವೂ ಖಾಸಗಿ ದೂರು ದಾಖಲಿಸಲು ಸಿಎಒಗೆ ಸೂಚಿಸಲಾಗಿದೆ. 

ಶಂಭುಲಿಂಗಯ್ಯ ಅವರು ಸದ್ಯ ಸಮಾಜ ಕಲ್ಯಾಣ ಇಲಾಖೆಯಲ್ಲಿ ಹೆಚ್ಚುವರಿ ನಿರ್ದೇಶಕರು ಮತ್ತು ಉಪ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಬೆಂಗಳೂರಿನ ವಿಕಾಸ ಸೌಧ ಮತ್ತು ಗೌತಮ್ ರಾಮನಗರದಲ್ಲಿ ಲೋಕಾಯುಕ್ತ ಡಿವೈಎಸ್ಪಿಯಾಗಿದ್ದಾರೆ.

2014ರ ಆಗಸ್ಟ್ 11ರಂದು ಸಾರ್ವಜನಿಕರಿಗೆ ಯುಐಡಿಎಐ ಆಧಾರ್ ಕಾರ್ಡ್ ಅನ್ನು ಅಕ್ರಮವಾಗಿ ಸೃಷ್ಟಿಸಿದ್ದಕ್ಕಾಗಿ ಸಿದ್ದಲಿಂಗೇಶ್ವರ ದೇವಸ್ಥಾನದ ಅರ್ಚಕನಾಗಿದ್ದ ವೈಎಸ್ ರಾಜೇಶ್ ಪ್ರಸಾದ್ ಒಡೆತನದ ಯಡಿಯೂರಿನ ಶ್ರೀ ಸಿದ್ದಲಿಂಗೇಶ್ವರ ಕಂಪ್ಯೂಟರ್ ತರಬೇತಿ ಕೇಂದ್ರವನ್ನು ವಶಪಡಿಸಿಕೊಂಡಿದ್ದರು. ಸ್ಥಳ ಮಹಜರು ನಡೆಸಿ ರಾಜೇಂದ್ರ ಪ್ರಸಾದ್ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದರು. 

ಈ ನಡುವೆ ರಾಜೇಂದ್ರ ಪ್ರಸಾದ್ ಅವರು ತಹಶೀಲ್ದಾರ್ ಅವರನ್ನು ಖುದ್ದು ಭೇಟಿ ಮಾಡಿ ಸಹಾಯ ಮಾಡುವಂತೆ ಕೋರಿದ್ದರು ಎನ್ನಲಾಗಿದೆ. ಬಳಿಕ ಆರೋಪಿಗಳನ್ನು ಭೇಟಿಯಾಗಿ ಮತ್ತು ದೂರವಾಣಿ ಮೂಲಕ ಮಾತುಕತೆ ನಡೆಸಿದ್ದು, ಪ್ರಕರಣ ಕೈಬಿಡಲು ತಹಶೀಲ್ದಾರ್ ಪರವಾಗಿ 25 ಸಾವಿರ ರೂ. ನೀಡುವಂತೆ ಮತ್ತು ಅಂತಿಮವಾಗಿ 20,000 ರೂ.ಗೆ ಡೀಲ್ ಮಾಡಿಕೊಳ್ಳಲಾಗಿದೆ.

ರಾಜೇಂದ್ರ ಪ್ರಸಾದ್ ಅವರ ದೂರಿನ ಮೇರೆಗೆ, ಇನ್ಸ್‌ಪೆಕ್ಟರ್ ಗೌತಮ್ ನೇತೃತ್ವದ ಲೋಕಾಯುಕ್ತ ಪೊಲೀಸ್ ತಂಡವು 2014 ರ ಆಗಸ್ಟ್ 14 ರಂದು ನಗದು ಸಂಗ್ರಹಿಸುತ್ತಿದ್ದಾಗ ಆರೋಪಿಗಳನ್ನು ಬಲೆಗೆ ಬೀಳಿಸಿ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದರು.

2016ರಲ್ಲಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದ್ದು, ಪ್ರಕರಣದ ವಿಚಾರಣೆ ವೇಳೆ ರಾಜೇಂದ್ರ ಪ್ರಸಾದ್‌ ಅವರು ಪ್ರಾಸಿಕ್ಯೂಷನ್‌ ಮತ್ತು ತಹಶೀಲ್ದಾರ್‌ ಮತ್ತು ಐಒ ಅವರನ್ನು ಪ್ರಾಸಿಕ್ಯೂಷನ್‌ ಸಾಕ್ಷಿಗಳಾಗಿ ಅಕ್ರಮ ಸಾಕ್ಷ್ಯಾಧಾರಗಳನ್ನು ಸೃಷ್ಟಿಸಿದ್ದನ್ನು ಜಡ್ಜ್‌ ವಿಚಾರಣೆಗೆ ತೆಗೆದುಕೊಂಡರು ಎಂದು ಲೋಕಾಯುಕ್ತ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಎನ್‌. ಬಸವರಾಜು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com