ಮೇಕೆದಾಟು ಯೋಜನೆ ಬದಲು ಬೆಂಗಳೂರಿನ ರಾಜ ಕಾಲುವೆಗಳನ್ನು ಪುನಶ್ಚೇತನಗೊಳಿಸಿ: ಪರಿಸರವಾದಿಗಳ ಸಲಹೆ

ನಗರದ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಮೇಕೆದಾಟು ಜಲಾಶಯದ ಯೋಜನೆಗೆ ಮುಂದಾಗುವ ಬದಲು ಬೆಂಗಳೂರಿನ ರಾಜ ಕಾಲುವೆಗಳು ಮತ್ತು ಹಾಳಾದ ಕೆರೆಗಳನ್ನು ಪುನಶ್ಚೇತನಗೊಳಿಸಲು ಪರಿಸರವಾದಿಗಳು ಸಲಹೆ ನೀಡಿದ್ದಾರೆ.
ಮೇಕೆದಾಟು
ಮೇಕೆದಾಟು
Updated on

ಬೆಂಗಳೂರು: ನಗರದ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಮೇಕೆದಾಟು ಜಲಾಶಯದ ಯೋಜನೆಗೆ ಮುಂದಾಗುವ ಬದಲು ಬೆಂಗಳೂರಿನ ರಾಜ ಕಾಲುವೆಗಳು ಮತ್ತು ಹಾಳಾದ ಕೆರೆಗಳನ್ನು ಪುನಶ್ಚೇತನಗೊಳಿಸಲು ಪರಿಸರವಾದಿಗಳು ಸಲಹೆ ನೀಡಿದ್ದಾರೆ.

ಪ್ರಸ್ತುತ ರಾಜ ಕಾಲುವೆ ಮತ್ತು ಕೆರೆಗಳನ್ನು ಕಾಂಕ್ರೀಟಿಕರಣಗೊಳಿಸಲಾಗಿದೆ ಅಥವಾ ಅವು ನಗರದಲ್ಲಿ ಕೊಳಚೆ ನೀರನ್ನು ಸಾಗಿಸುವ ಜಾಲವಾಗಿ ಮಾರ್ಪಟ್ಟಿವೆ. ಕೆರೆಗಳು ಮತ್ತು ಸಂಪೂರ್ಣ ರಾಜ ಕಾಲುವೆ ಜಾಲವನ್ನು ಪುನಶ್ಚೇತನಗೊಳಿಸಿದರೆ, ಅವುಗಳು ನೀರಿನ ಮಟ್ಟವನ್ನು ಸುಗಮಗೊಳಿಸುತ್ತವೆ ಎಂದು ಬೆಂಗಳೂರಿನ ಮೂಲದ ಎನ್ ಜಿಒ ವೊಂದರ ಸಂಯೋಜಕ ಲಿಯೋ ಎಫ್ ಸಲ್ಡಾನ್ಹಾ ಹೇಳಿದ್ದಾರೆ.

ಬೆಂಗಳೂರಿನ ಭೌಗೋಳಿಕ ಸ್ಥಳವು ಮೂರು ಪ್ರಮುಖ ಕಣಿವೆಗಳಾದ ವೃಷಭಾವತಿ, ಹೆಬ್ಬಾಳ ಕಣಿವೆ ಮತ್ತು ಕೋರಮಂಗಲ-ಚಲ್ಲಘಟ್ಟ ಕಣಿವೆಗಳಿಂದ ಆವರಿಸಿವೆ. ಇವುಗಳು ಅನೇಕ ಕೆರೆಗಳನ್ನು ಹೊಂದಿದ್ದು, ಜಲವಿಜ್ಞಾನ ಪ್ರಕ್ರಿಯೆ ಮತ್ತು ಅಂತರ್ಜಲ ವೃದ್ಧಿಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ ಎಂದು ತಜ್ಞರು ವಿವರಿಸುತ್ತಾರೆ.

<strong>ಮೇಕೆದಾಟುವಿನ ಕಾವೇರಿ ನದಿ</strong>
ಮೇಕೆದಾಟುವಿನ ಕಾವೇರಿ ನದಿ

ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್  ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿಯಾಗಿ ಮೇಕೆದಾಟು ಯೋಜನೆ  ಮತ್ತು ಹೆಚ್ಚುವರಿ ನೀರನ್ನು ಬೆಂಗಳೂರಿನ ಕುಡಿಯುವ ನೀರಿನ ಅಗತ್ಯತೆಗಳನ್ನು ಪೂರೈಸಲು ಹೇಗೆ ಬಳಸಬಹುದು ಎಂದು ವಿವರಿಸಿದ್ದಾರೆ. ಮೇಕೆದಾಟು ಸಮಸ್ಯೆ ಈಗ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ಅದರ ಸುಸ್ಥಿರತೆಯ ಅಂಶವನ್ನು ಪರಿಗಣಿಸುತ್ತಿಲ್ಲ ಎಂದು ಪರಿಸರವಾದಿಗಳು ಹೇಳಿದ್ದಾರೆ. ಇನ್ನೊಂದು ಅಣೆಕಟ್ಟು ಕಟ್ಟುವಷ್ಟು ನೀರು ಕಾವೇರಿ ನದಿಯಲ್ಲಿ ಇಲ್ಲ. ಕಳೆದ 10 ವರ್ಷಗಳಿಂದ ಅಣೆಕಟ್ಟು ಮತ್ತು ನೀರಿನ ಮಟ್ಟದಲ್ಲಿ ಬದಲಾವಣೆಯಾಗಿಲ್ಲ ಎಂದು ಸಲ್ದಾನ್ಹಾ ಹೇಳಿದರು. 

ಅಶುದ್ಧ ನೀರನ್ನು ಸಂಸ್ಕರಿಸಲು ಲಭ್ಯವಿರುವ ಸುಧಾರಿತ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಬದಲು ನಗರದ ನೀರಿನ ಅಗತ್ಯಗಳನ್ನು ಪೂರೈಸಲು ಪುರಾತನ ವಿಧಾನಗಳಿಗೆ ಸರ್ಕಾರ ಬೇರೂರಿದೆ ಎಂದು ಪರಿಸರ ಸಂವಹನಕಾರ ನಾಗೇಶ್ ಹೆಗಡೆ ಹೇಳಿದರು. ತಂತ್ರಜ್ಞಾನವು ಈಗ ಎಷ್ಟು ಮುಂದುವರಿದಿದೆ ಎಂದರೆ ಜಗತ್ತು ಕೊಳಚೆ ನೀರನ್ನು ಕುಡಿಯುವ ನೀರಾಗಿ ಪರಿವರ್ತಿಸುವ ಮೂಲಕ ಬಳಸುತ್ತಿದೆ. ಸರ್ಕಾರ ಬದಲಿಗೆ  ಪರಿಸರ ವಿನಾಶಕಾರಿ ಅಣೆಕಟ್ಟೆಗೆ ಬೇರೂರಿದೆ ಎಂದರು. 

ಪ್ರಸ್ಥಭೂಮಿಯಂತಹ ಭೂಮಿಯಲ್ಲಿ ಬೆಂಗಳೂರು ನೆಲೆಗೊಂಡಿರುವುದರಿಂದ, ಇದು ವಾರ್ಷಿಕವಾಗಿ ಸುಮಾರು 15 ಟಿಎಂಸಿ ಮಳೆಯನ್ನು ಪಡೆಯುತ್ತದೆ ಮತ್ತು 13 ಟಿಎಂಸಿ  ನೀರು ಚರಂಡಿ ಮೂಲಕ ಹರಿಯುತ್ತದೆ. ನಗರದ ದಕ್ಷಿಣದಲ್ಲಿ ಅಣೆಕಟ್ಟು ಸ್ಥಾಪಿಸಿ ನೀರನ್ನು ಪಂಪ್ ಮಾಡಲು ಹಣ ಹೂಡಿಕೆ ಮಾಡುವುದು ಸಂಪನ್ಮೂಲಗಳ ಶುದ್ಧ ವ್ಯರ್ಥ ಎಂದು ಹೆಗ್ಡೆ ಹೇಳಿದರು. 9,000 ಕೋಟಿ ವೆಚ್ಚದ ಯೋಜನೆಗೆ ಅನುಮೋದನೆ ನೀಡಿದರೆ ಕರ್ನಾಟಕ ಮತ್ತು ತಮಿಳುನಾಡು ಎರಡರಲ್ಲೂ ಪರಿಸರ ನಾಶವಾಗುತ್ತದೆ. ಕಾವೇರಿ ವನ್ಯಜೀವಿ ಅಭಯಾರಣ್ಯದ ಶೇ 63ರಷ್ಟು ಅರಣ್ಯ ಪ್ರದೇಶ ಮುಳುಗಡೆಯಾಗಲಿದೆ ಎಂದು ತಜ್ಞರು ಹೇಳಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com