ಹಂಪಿಯಲ್ಲಿ ಜಿ20 ಶೃಂಗಸಭೆ: ಭದ್ರತೆಗೆ 100 ಸಿಸಿಟಿವಿ ಕ್ಯಾಮೆರಾ, 300 ಮಂದಿ ಪೊಲೀಸರ ನಿಯೋಜನೆ

ಜಿ20 ಶೃಂಗಸಭೆ ಭಾನುವಾರದಿಂದ ಹಂಪಿಯಲ್ಲಿ ಆರಂಭವಾಗಲಿದ್ದು, ಸುಮಾರು 52 ದೇಶಗಳಿಂದ ಬರಲಿರುವ ಗಣ್ಯರ ಭದ್ರತೆಗಾಗಿ 100 ಸಿಸಿಟಿವಿ ಕ್ಯಾಮೆರಾಗಳು ಹಾಗೂ ಕೇಂದ್ರೀಯ ಭದ್ರತಾಪಡೆಗಳು, ಎಸ್ಪಿಗಳು, ಡಿವೈಎಸ್ಪಿಗಳು ಸೇರಿದಂತೆ 300 ಮಂದಿ ಪೊಲೀಸರನ್ನು ನಿಯೋಜಿಸಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಹೊಸಪೇಟೆ (ವಿಜಯನಗರ): ಜಿ20 ಶೃಂಗಸಭೆ ಭಾನುವಾರದಿಂದ ಹಂಪಿಯಲ್ಲಿ ಆರಂಭವಾಗಲಿದ್ದು, ಸುಮಾರು 52 ದೇಶಗಳಿಂದ ಬರಲಿರುವ ಗಣ್ಯರ ಭದ್ರತೆಗಾಗಿ 100 ಸಿಸಿಟಿವಿ ಕ್ಯಾಮೆರಾಗಳು ಹಾಗೂ ಕೇಂದ್ರೀಯ ಭದ್ರತಾಪಡೆಗಳು, ಎಸ್ಪಿಗಳು, ಡಿವೈಎಸ್ಪಿಗಳು ಸೇರಿದಂತೆ 300 ಮಂದಿ ಪೊಲೀಸರನ್ನು ನಿಯೋಜಿಸಲಾಗಿದೆ.

ವಿಜಯನಗರ ಜಿಲ್ಲಾಡಳಿತ ಮಂಡಳಿಯು ಕಳೆದ ಮೂರು ತಿಂಗಳಿನಿಂದ ಜಿ20 ಶೃಂಗಸಭೆಗೆ ಸಿದ್ಧತೆ ನಡೆಸಿದೆ.

ನೀತಿ ಆಯೋಗದ ಸಿಇಒ ಅಮಿತ್ಭಾ ಕಾಂತ್ ಮತ್ತು ಆಂತರಿಕ ಭದ್ರತಾ ವಿಭಾಗದ ಐಜಿಪಿ ವಿಪುಲ್ ಕುಮಾರ್ ಈಗಾಗಲೇ ಹಂಪಿಗೆ ಭೇಟಿ ಪರಿಶೀಲನೆ ನಡೆಸಿದ್ದಾರೆ.

ಇಬ್ಬರು ಎಸ್ಪಿಗಳು, 5 ಡಿವೈಎಸ್ಪಿಗಳು ಮತ್ತು ಸುಮಾರು 300 ಪೊಲೀಸರು ಹಂಪಿಯಲ್ಲಿ ಪ್ರತಿನಿಧಿಗಳ ಭದ್ರತೆಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆಯ್ದ ಸ್ಥಳಗಳಲ್ಲಿ 100 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಮತ್ತು ಹಾನಿಗೊಳಗಾದ ಕೆಲವು ಕ್ಯಾಮೆರಾಗಳನ್ನು ಬದಲಾಯಿಸಿದ್ದೇವೆಂದು ಮಾಹಿತಿ ನೀಡಿದ್ದಾರೆ.

ಹಂಪಿಯಲ್ಲಿ ನಡೆಯುವ ಜಿ20 ಶೃಂಗಸಭೆಯಲ್ಲಿ 43 ದೇಶಗಳ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಭಾಗವಹಿಸುತ್ತಿದ್ದಾರೆ. ಹಂಪಿಯಲ್ಲಿ ಜಿ20 ಶೃಂಗಸಭೆ ನಡೆಯುತ್ತಿರುವುದು ನಮಗೆ ಹೆಮ್ಮೆ ತಂದಿದೆ ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.

ಸಮಾವೇಶದ ಸಮಯದಲ್ಲಿ ಹಂಪಿಗೆ ಪ್ರವಾಸಿಗರ ಪ್ರವೇಶಕ್ಕೆ ಯಾವುದೇ ನಿರ್ಬಂಧವಿಲ್ಲ ಹೇರಲಾಗಿಲ್ಲ. ಆದರೆ, ಶೃಂಗಸಭೆ ನಡೆಯುವ ಸ್ಥಳಗಳಿಗೆ ಇತರರ ಪ್ರವೇಶಕ್ಕೆ ಅನುಮತಿಯಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com