ರಸ್ತೆಯಲ್ಲಿ ನಡೆಯುವ ಪ್ರತಿಯೊಬ್ಬ ವ್ಯಕ್ತಿಯೂ ಜೇಮ್ಸ್ ಬಾಂಡ್: ತಾರತಮ್ಯವಿಲ್ಲದೆ ನ್ಯಾಯ ಎಲ್ಲರಿಗೂ ಸಿಗಬೇಕು: ನೂತನ ಆಯುಕ್ತರು ( ಸಂದರ್ಶನ)

ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಬಿ. ದಯಾನಂದ್ ಅಧಿಕಾರ ಸ್ವೀಕರಿಸಿದ್ದಾರೆ, ಈ ವೇಳೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಅವರು ಹಲವು ವಿಷಯಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಬಿ. ದಯಾನಂದ್
ಬಿ. ದಯಾನಂದ್

ಬೆಂಗಳೂರು: ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಬಿ. ದಯಾನಂದ್ ಅಧಿಕಾರ ಸ್ವೀಕರಿಸಿದ್ದಾರೆ, ಈ ವೇಳೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಅವರು ಹಲವು ವಿಷಯಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಸೈಬರ್ ಅಪರಾಧ ಪ್ರಕರಣ ನಿಭಾಯಿಸಲು ಯಾವ ಕ್ರಮ ತೆಗೆದುಕೊಳ್ಳಲಾಗುವುದು?

ಹೆಚ್ಚು ಪರಿಣತಿ ಮತ್ತು ಸಂಕೀರ್ಣ ಕಾರ್ಯವಿಧಾನಗಳ ಅಗತ್ಯವಿಲ್ಲದ ಕಾರಣ ಸರಳ ಸೈಬರ್ ಪ್ರಕರಣಗಳನ್ನು ನ್ಯಾಯವ್ಯಾಪ್ತಿಯ ಪೊಲೀಸ್ ಠಾಣೆ ಮಟ್ಟದಲ್ಲಿ ವ್ಯವಹರಿಸಬಹುದು. ರಾಜ್ಯ ಪೊಲೀಸ್ ಮುಖ್ಯಸ್ಥರು ಸಹ ಎಲ್ಲಾ ಪೊಲೀಸ್ ಠಾಣೆಗಳಿಗೆ ಸರಳ ಸೈಬರ್ ಪ್ರಕರಣಗಳನ್ನು ದಾಖಲಿಸಲು ಸೂಚನೆ ನೀಡಿದ್ದಾರೆ. ಸೈಬರ್ ಪ್ರಕರಣಗಳು ಬಾಕಿ ಉಳಿದಿವೆ ಏಕೆಂದರೆ ತನಿಖಾ ಅಧಿಕಾರಿಗಳಿಗೆ ಪ್ರವೇಶ ಮತ್ತು ಲಾಗಿನ್ ವಿವರಗಳನ್ನು ಪಡೆಯುವಲ್ಲಿ ಪೂರೈಕೆದಾರರಿಂದ ಸಹಕಾರ ಅಗತ್ಯವಿರುತ್ತದೆ. ವಿತ್ತೀಯ ಸೈಬರ್ ಪ್ರಕರಣಗಳಲ್ಲಿಯೂ ಸಹ, ಬ್ಯಾಂಕ್ ಖಾತೆಗಳ ವಿವರಗಳು, ಖಾತೆದಾರರ ವಿಳಾಸವನ್ನು ಪಡೆಯಲು ಬ್ಯಾಂಕ್‌ಗಳ ಸಹಕಾರವು ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ ಸಂಘಟಿತ ವಿಧಾನವು ಹೆಚ್ಚು ಮುಖ್ಯವಾಗಿದೆ. ಬಿಟ್‌ಕಾಯಿನ್ ಪ್ರಕರಣಗಳಂತಹ ಗಂಭೀರ ಸೈಬರ್ ಪ್ರಕರಣಗಳಲ್ಲಿ ಸಿಇಎನ್ ಪೊಲೀಸ್ ಠಾಣೆಯಲ್ಲಿ ಅಥವಾ ಅಪರಾಧ ತನಿಖಾ ಇಲಾಖೆ (ಸಿಐಡಿ) ಸೈಬರ್ ಕ್ರೈಮ್ ವಿಭಾಗದಲ್ಲಿ ಉನ್ನತ ಮಟ್ಟದಲ್ಲಿ ದಾಖಲಿಸಬೇಕಾಗುತ್ತದೆ.

ಹೊಸ ಪೊಲೀಸ್ ಕಮಿಷನರ್ ಅವರ ದೂರದೃಷ್ಟಿ ಏನು?

ಪೊಲೀಸರ ನ್ಯಾಯ ಶ್ರೀಮಂತರು, ಶಕ್ತಿಯುತ ಮತ್ತು ರಾಜಕೀಯವಾಗಿ ಪ್ರಭಾವಿ ವ್ಯಕ್ತಿಗಳಿಗೆ ಮಾತ್ರವಲ್ಲ, ಬೆಂಗಳೂರು ನಗರದ ಸಾಮಾನ್ಯ ನಾಗರಿಕರಿಗೂ ಇರಬೇಕು, ಇದು ನನ್ನ ದೂರದೃಷ್ಟಿಯಾಗಿದ್ದು, ಇದನ್ನೂ ನಗರದಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ಅಧಿಕಾರಿಗಳಿಗೆ ತಿಳಿಸಲಾಗಿದೆ.

ಸಾಮಾಜಿಕ ಮಾಧ್ಯಮದ ಪ್ರಾಮುಖ್ಯತೆಯ ಬಗ್ಗೆ ನಿಮ್ಮ ಅಭಿಪ್ರಾಯ?

ಸೋಷಿಯಲ್ ಮೀಡಿಯಾ ಎರಡು ಅಲುಗಿನ ಕತ್ತಿ. ಸಾಮಾಜಿಕ ಮಾಧ್ಯಮದಿಂದ ಜನರಿಗೆ ಅನುಕೂಲಗಳಿರುವಂತೆ, ಅದರಿಂದ ಅನಾನುಕೂಲಗಳೂ ಇವೆ. ನಾವು ಎರಡೂ ಅಂಶಗಳನ್ನು ಸಮತೋಲನಗೊಳಿಸಬೇಕು. ನಾವು ಸಾಮಾಜಿಕ ಮಾಧ್ಯಮದಿಂದ ಹೆಚ್ಚಿನ ಜನರನ್ನು ತಲುಪಬಹುದು ಇಲ್ಲದಿದ್ದರೆ ಅದು ಸಾಧ್ಯವಿಲ್ಲ. ಬೆಂಗಳೂರು ನಗರ ಪೊಲೀಸರು ಸಾಮಾಜಿಕ ಜಾಲತಾಣಗಳ ಮೂಲಕ ಜನರೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದಾರೆ. ಇದೇ ವೇಳೆ ಸಮಾಜದ ಶಾಂತಿ ಕದಡುವ ರೀತಿಯಲ್ಲಿ ಬಳಕೆ, ದುರುಪಯೋಗಪಡಿಸಿಕೊಂಡರೆ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು. ಟ್ವಿಟರ್‌ನಂತಹ ಸಾಮಾಜಿಕ ಮಾಧ್ಯಮಗಳಲ್ಲಿ ದೂರುಗಳ ಆಧಾರದ ಮೇಲೆ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

ಪೊಲೀಸ್ ಠಾಣೆ ಮಟ್ಟದಲ್ಲಿ ನೊಂದ ನಾಗರಿಕರ ಸಮಸ್ಯೆಗಳನ್ನು ಪರಿಹರಿಸಲು ಯಾವ ಕ್ರಮ ತೆಗೆದುಕೊಳ್ಳಲಾಗುವುದು?

ಪೊಲೀಸ್ ಕಮಿಷನರ್ ಕಚೇರಿಗೆ ಬರುವ ಅರ್ಜಿದಾರರು ಅಥವಾ ದೂರುದಾರರ ಸಂಖ್ಯೆಯಿಂದ ಪೊಲೀಸ್ ಠಾಣೆ ಮಟ್ಟದಲ್ಲಿ ಪ್ರತಿಯೊಬ್ಬ ಪೊಲೀಸ್ ಅಧಿಕಾರಿಯ ದಕ್ಷತೆಯನ್ನು ನಿರ್ಣಯಿಸಲಾಗುತ್ತದೆ. ಇದನ್ನು ಎಲ್ಲ ಅಧಿಕಾರಿಗಳಿಗೆ ಸ್ಪಷ್ಟವಾಗಿ ತಿಳಿಸಲಾಗಿದೆ. ಪೊಲೀಸ್ ಠಾಣೆ ಮಟ್ಟದಲ್ಲಿಯೇ ಎಲ್ಲ ಸಮಸ್ಯೆಗಳನ್ನು ಬಗೆಹರಿಸಬೇಕು. ದೂರುದಾರರು ಅಥವಾ ಅರ್ಜಿದಾರರು ಉನ್ನತ ಅಧಿಕಾರಿಗಳನ್ನು ಸಂಪರ್ಕಿಸಿದರೆ, ಇದು ಪೊಲೀಸ್ ಠಾಣೆ ಮಟ್ಟದ ಅಧಿಕಾರಿಯ ಅಸಮರ್ಥತೆಯನ್ನು ತೋರಿಸುತ್ತದೆ. ಯಾವುದೇ ನೊಂದ ವ್ಯಕ್ತಿ ಉನ್ನತ ಅಧಿಕಾರಿಗಳನ್ನು ಸಂಪರ್ಕಿಸಲು ಬಯಸುವುದಿಲ್ಲ. ಸ್ಥಳೀಯ ಪೋಲೀಸರು ಆತನಿಗೆ ಸ್ಪಂದಿಸದಿದ್ದಾಗ ಅಥವಾ  ಅವರ ಜೊತೆ ವರ್ತಿಸದಿದ್ದಾಗ  ಹಾಗೂ ಅತನಿಗೆ ಹಾನಿಯನ್ನುಂಟುಮಾಡಿದಾಗ ಮಾತ್ರ ಅವರು ಉನ್ನತ ಅಧಿಕಾರಿಗಳನ್ನು ಸಂಪರ್ಕಿಸುತ್ತಾರೆ.  ನನ್ನ ಕಛೇರಿಯಲ್ಲಿ ಬರುವ ಅರ್ಜಿದಾರರ ಸಂಖ್ಯೆಯನ್ನು ಆಧರಿಸಿ ಅವರ ವಾರ್ಷಿಕ ಗೌಪ್ಯ ವರದಿಯನ್ನು (ACR) ನಿರ್ಧರಿಸಲಾಗುತ್ತದೆ.

ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗುವುದು?

ಈಗಿನ ವ್ಯವಸ್ಥೆಯಲ್ಲಿ ತಪ್ಪು ಮಾಡಿದವನ ಕಣ್ಣಿಗೆ ಬೀಳುವುದಿಲ್ಲ ಅಥವಾ ತಪ್ಪು ಮಾಡಿದವರು ಕಂಬಳದ ಕೆಳಗೆ ಹೂತು ಹೋಗಲು ಸಾಧ್ಯವಿಲ್ಲ.  ಮಾಧ್ಯಮಗಳು, ಸಾಮಾಜಿಕ ಮಾಧ್ಯಮಗಳು ಮತ್ತು ಡಿಜಿಟಲ್ ಮಾಧ್ಯಮಗಳು ಇಲ್ಲದಿದ್ದಾಗ 20 ವರ್ಷಗಳ ಹಿಂದಿನ  ಪರಿಸ್ಥಿತಿ ಮತ್ತು ಈಗಿನ ಪರಿಸ್ಥಿತಿ  ಒಂದೇ ಆಗಿಲ್ಲ. ರಸ್ತೆಯಲ್ಲಿ ನಡೆಯುವ ಪ್ರತಿಯೊಬ್ಬ ವ್ಯಕ್ತಿಯೂ ಜೇಮ್ಸ್ ಬಾಂಡ್. ಈಗಿನ ತಂತ್ರಜ್ಞಾನ ಸಾಮಾನ್ಯ ನಾಗರಿಕರಿಗೆ ಲಭ್ಯವಿದೆ. ಈ  ವ್ಯವಸ್ಥೆಯನ್ನು ಹುಸಿಗೊಳಿಸಲು ಯಾರಾದರೂ ಪ್ರಯತ್ನಿಸಿದರೆ ಅವನು ಮೂರ್ಖ ಎಂದರ್ಥ. ಏಕೆಂದರೆ ಯಾವತ್ತಿಗೂ ಅವರು ಸಿಕ್ಕಿಬೀಳುತ್ತಾರೆ ಮತ್ತು ಪರಿಣಾಮಗಳನ್ನು ಎದುರಿಸುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com