ಕಲಬುರಗಿ: ಕಲುಷಿತ ಆಹಾರ ಸೇವಿಸಿ 21 ಜನರು ಅಸ್ವಸ್ಥ
ಕಳೆದ ವಾರ ರಾಯಚೂರು ಜಿಲ್ಲೆಯ ರೇಖಲಮರಡಿಯಲ್ಲಿ ಕಲುಷಿತ ನೀರು ಸೇವಿಸಿ ಜನರು ಅಸ್ವಸ್ಥರಾದ ಘಟನೆ ಇನ್ನೂ ಹಚ್ಚಹಸಿರಾಗಿರುವಾಗಲೇ ಕಲುಷಿತ ಆಹಾರ ಸೇವಿಸಿ 21 ಜನರು ಅಸ್ವಸ್ಥಗೊಂಡಿರುವ ಘಟನೆ ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದಲ್ಲಿ ನಡೆದಿದೆ.
Published: 02nd June 2023 09:55 AM | Last Updated: 02nd June 2023 09:55 AM | A+A A-

ಸಾಂದರ್ಭಿಕ ಚಿತ್ರ
ಕಲಬುರಗಿ: ಕಳೆದ ವಾರ ರಾಯಚೂರು ಜಿಲ್ಲೆಯ ರೇಖಲಮರಡಿಯಲ್ಲಿ ಕಲುಷಿತ ನೀರು ಸೇವಿಸಿ ಜನರು ಅಸ್ವಸ್ಥರಾದ ಘಟನೆ ಇನ್ನೂ ಹಚ್ಚಹಸಿರಾಗಿರುವಾಗಲೇ ಕಲುಷಿತ ಆಹಾರ ಸೇವಿಸಿ 21 ಜನರು ಅಸ್ವಸ್ಥಗೊಂಡಿರುವ ಘಟನೆ ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದಲ್ಲಿ ನಡೆದಿದೆ.
ಅಸ್ವಸ್ಥರು ವಿಜಯಪುರ ಜಿಲ್ಲೆಯ ಚಡಚಣದ ಡೋಣಿ ನಿವಾಸಿಗಳು ಎಂದು ತಿಳಿದುಬಂದಿದೆ. ಡೋಣಿ ನಿವಾಸಿಗಳು ನಿನ್ನೆ ಲಾಡ್ಲೇ ಮಶಾಕ್ ದರ್ಗಾಕ್ಕೆ ಹರಕೆ ತೀರಿಸಲು ಬಂದಿದ್ದರು. ಊಟ ಸೇವಿಸಿದ್ದ ಬಳಿಕ ವಾಂತಿ ಭೇದಿ ಕಾಣಿಸಿಕೊಂಡು ಅಸ್ವಸ್ಥಗೊಂಡಿದ್ದಾರೆ. ಅಸ್ವಸ್ಥರಿಗೆ ಆಳಂದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.