ಚಿಕ್ಕಮಗಳೂರು: ಯುವಕರಿಂದ ಅಸಭ್ಯ ವರ್ತನೆ, ನ್ಯಾಯಕ್ಕಾಗಿ ಮಗುವಿನೊಂದಿಗೆ ಅರ್ಧರಾತ್ರಿವರೆಗೂ ಠಾಣೆಯಲ್ಲಿ ಕುಳಿತ ಮಹಿಳೆ!
ನ್ಯಾಯಕ್ಕಾಗಿ ಮಹಿಳೆಯೊಬ್ಬರು 4 ವರ್ಷದ ಮಗುವಿನೊಂದಿಗೆ ಅರ್ಧರಾತ್ರಿಯವರೆಗೂ ಪೊಲೀಸ್ ಠಾಣೆಯಲ್ಲಿ ಕುಳಿತ ಘಟನೆಯೊಂದು ಜಿಲ್ಲೆಯ ಕಳಸದಲ್ಲಿ ನಡೆದಿದೆ.
Published: 02nd June 2023 11:42 AM | Last Updated: 02nd June 2023 08:23 PM | A+A A-

ಠಾಣೆಯಲ್ಲಿ ಕುಳಿತಿರುವ ಮಹಿಳೆ.
ಚಿಕ್ಕಮಗಳೂರು: ನ್ಯಾಯಕ್ಕಾಗಿ ಮಹಿಳೆಯೊಬ್ಬರು 4 ವರ್ಷದ ಮಗುವಿನೊಂದಿಗೆ ಅರ್ಧರಾತ್ರಿಯವರೆಗೂ ಪೊಲೀಸ್ ಠಾಣೆಯಲ್ಲಿ ಕುಳಿತ ಘಟನೆಯೊಂದು ಜಿಲ್ಲೆಯ ಕಳಸದಲ್ಲಿ ನಡೆದಿದೆ.
ಪಕ್ಕದ ಮನೆಯ ಯುವಕರು ತನ್ನೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದು, ಗಂಡನಿಗೆ ಜೀವ ಬೆದರಿಕೆ ಹಾಕಿದ್ದಾರೆಂದು 2 ದಿನಗಳ ಹಿಂದೆ ಮಹಿಳೆ ಕುದುರೆಮುಖ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.
ಯುವಕರ ದುರ್ವತನೆ ಕುರಿತ ವಿಡಿಯೋವನ್ನು ನೀಡಿದರೂ ಪೊಲೀಸರು ದೂರು ದಾಖಲಿಸಿಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ಇನ್ಸ್ ಪೆಕ್ಟರ್ ಕಚೇರಿಗೇ ತೆರಳಿ 4 ವರ್ಷದ ಮಗುವಿನೊಂದಿಗೆ ಅರ್ಧರಾತ್ರಿವರಗೂ ಠಾಣೆಯಲ್ಲಿ ಕುಳಿತಿದ್ದಾರೆ. ಎಫ್ಐಆರ್ ದಾಖಲಾಗದ ಹೊರತು ಮನೆಗೆ ಹೋಗುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಇದನ್ನೂ ಓದಿ: ಮುಸ್ಲಿಂ ಯುವತಿಯೊಂದಿಗೆ ಸ್ನೇಹ ಬೆಳೆಸಿದ್ದಕ್ಕೆ ಬಜರಂಗ ದಳದ ಕಾರ್ಯಕರ್ತನಿಗೆ ಥಳಿತ, ಗಂಭೀರ ಗಾಯ
ಮಹಿಳೆ ಪ್ರತಿಭಟನೆ ಕುರಿತ ಹಿನ್ನೆಲೆಯಲ್ಲಿ ಪೊಲೀಸರು ಮಧ್ಯರಾತ್ರಿ ವೇಳೆ ಯುವಕರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಮಹಿಳೆಯ ದೂರು ಹಿನ್ನೆಲೆಯಲ್ಲಿ ಅಸಭ್ಯ ವರ್ತನೆ ತೋರಿದ ನವೀನ್ ಹಾಗೂ ಶ್ರೇಯಾಂಕ್ ಎಂಬುವವರ ವಿರುದ್ಧ ದೂರು ದಾಖಲಾಗಿದೆ ಎಂದು ತಿಳಿದುಬಂದಿದೆ.