ಕರ್ನಾಟಕ ಹಾಲು ಮಹಾಮಂಡಳದ ದರ ಇಳಿಕೆ ನಿರ್ಧಾರ ನಮ್ಮ ಮೇಲೆ ಪರಿಣಾಮ ಬೀರುತ್ತದೆ: ರೈತರ ಅಳಲು

ರೈತರಿಂದ ಖರೀದಿಸುವ ಹಾಲಿಗೆ ನಿಗದಿಪಡಿಸಿರುವ ದರದಲ್ಲಿ ಯಾವುದೇ ಕಡಿತ ಮಾಡದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಹಾಲಿನ ದರ ಇಳಿಕೆ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ರೈತರು, ಕಳೆದ ನಾಲ್ಕು ತಿಂಗಳಿಂದ ಬೆಂಬಲ ಬೆಲೆ ನೀಡದ ಕಾರಣ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಮೈಸೂರು: ರೈತರಿಂದ ಖರೀದಿಸುವ ಹಾಲಿಗೆ ನಿಗದಿಪಡಿಸಿರುವ ದರದಲ್ಲಿ ಯಾವುದೇ ಕಡಿತ ಮಾಡದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಹಾಲಿನ ದರ ಇಳಿಕೆ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ರೈತರು, ಕಳೆದ ನಾಲ್ಕು ತಿಂಗಳಿಂದ ಬೆಂಬಲ ಬೆಲೆ ನೀಡದ ಕಾರಣ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. 

ಕರ್ನಾಟಕ ಕಬ್ಬು ಬೆಳೆಗಾರರ ​​ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ಹಾಲು ಉತ್ಪಾದಕರು ಮೇವಿನ ಬೆಲೆ ಏರಿಕೆಯಿಂದ ಈಗಾಗಲೇ ತೊಂದರೆಗೊಳಲಾಗಿದ್ದಾರೆ ಮತ್ತು ಖಾಸಗಿ ಡೈರಿಗಳು ಲೀಟರ್‌ಗೆ 46 ರೂ. ನೀಡುತ್ತಿರುವಾಗ ರೈತರಿಂದ ಲೀಟರ್‌ಗೆ 34 ರೂ. ನೀಡಿ ಖರೀದಿಸಲಾಗುತ್ತಿದೆ ಎಂದಿದ್ದಾರೆ.

ಕರ್ನಾಟಕ ಹಾಲು ಮಹಾಮಂಡಳವು (ಕೆಎಂಎಫ್) ಇತ್ತೀಚಿನ ತಿಂಗಳುಗಳಲ್ಲಿ ಹಾಲಿನ ಉತ್ಪಾದನೆ ಹೆಚ್ಚಾಗಿದೆ ಎಂದು ಸಮರ್ಥಿಸಿಕೊಂಡಿದೆ. ಪ್ರತಿ ಲೀಟರ್‌ಗೆ 1 ರಿಂದ 2 ರೂ. ಗಳಷ್ಟು ಬೆಲೆಯನ್ನು ಕಡಿತಗೊಳಿಸುವ ಯೋಜನೆಯನ್ನು ಹೊಂದಿದ್ದು, ಇದು ಹಾಲು ಉತ್ಪಾದಕರಿಗೆ ಹೊಡೆತವನ್ನು ನೀಡುತ್ತದೆ. ಏಕೆಂದರೆ, ಲಕ್ಷಾಂತರ ಕುಟುಂಬಗಳು ಅವರ ಜೀವನೋಪಾಯಕ್ಕಾಗಿ ಹೈನುಗಾರಿಕೆಯನ್ನು ಅವಲಂಬಿಸಿವೆ. ಹಾಲಿನ ದರ ಇಳಿಕೆಯ ಪ್ರಸ್ತಾವನೆಯನ್ನು ಕೈಬಿಡುವಂತೆ ಕೆಎಂಎಫ್‌ಗೆ ಒತ್ತಾಯಿಸಿದ ಅವರು, ರೈತರ ಹಿತಾಸಕ್ತಿಗೆ ವಿರುದ್ಧವಾಗಿ ಹೊಸ ಸರ್ಕಾರವು ತನ್ನ ಯೋಜನೆಯನ್ನು ಮುಂದುವರಿಸಿದರೆ ಧರಣಿ ನಡೆಸುವುದಾಗಿ ಎಚ್ಚರಿಸಿದರು.

ಕರ್ನಾಟಕಕ್ಕೆ ಅಮುಲ್ ಉತ್ಪನ್ನಗಳ ಪ್ರವೇಶವನ್ನು ನಿಲ್ಲಿಸಲು ಸರ್ಕಾರ ಬಯಸಿದಾಗ, ಅದು ಸಹ ತಿಂಗಳ ಆಧಾರದಲ್ಲಿ ಲೀಟರ್‌ಗೆ 5 ರೂ. ಗಳ ಬೆಂಬಲ ಬೆಲೆಯನ್ನು ಬಿಡುಗಡೆ ಮಾಡಬೇಕು ಮತ್ತು ಹಾಲಿನ ದರವನ್ನು ಹೆಚ್ಚಿಸಬೇಕು ಮತ್ತು ಖಾಸಗಿಯವರಂತೆ ಪ್ರತಿದಿನ ಪಾವತಿ ಮಾಡಬೇಕು. ಗಡಿ ಗ್ರಾಮಗಳ ರೈತರು ನಂದಿನಿಯನ್ನು ಆಯ್ಕೆ ಮಾಡಿಕೊಳ್ಳದೆ ಖಾಸಗಿ ಡೇರಿಗಳಿಗೆ ಹೆಚ್ಚಿನ ಬೆಲೆ ಪಡೆದು ಹಾಲನ್ನು ಮಾರಾಟ ಮಾಡುತ್ತಿರುವುದು ಕಂಡುಬಂದಿದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com