ಇಡಿ ದಾಳಿ: ಬೆಂಗಳೂರು, ದಾವಣೆಗೆರೆಯಲ್ಲಿ 100 ಕೋಟಿ ರೂ. ಗೂ ಹೆಚ್ಚಿನ ಮೌಲ್ಯದ ಆಸ್ತಿ, ನಗದು ಪತ್ತೆ
ಭಾರತ್ ಇನ್ಫ್ರಾ ಎಕ್ಸ್ಪೋರ್ಟ್ ಆ್ಯಂಡ್ ಇಂಪೋರ್ಟ್ ಲಿಮಿಟೆಡ್ನಿಂದ ವಂಚನೆ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇಂದು ಬೆಂಗಳೂರು ಹಾಗೂ ದಾವಣಗೆರೆಯಲ್ಲಿ ದಾಳಿ ನಡೆಸಿದೆ.
Published: 07th June 2023 06:46 PM | Last Updated: 07th June 2023 07:00 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಭಾರತ್ ಇನ್ಫ್ರಾ ಎಕ್ಸ್ಪೋರ್ಟ್ ಆ್ಯಂಡ್ ಇಂಪೋರ್ಟ್ ಲಿಮಿಟೆಡ್ನಿಂದ ವಂಚನೆ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇಂದು ಬೆಂಗಳೂರು ಹಾಗೂ ದಾವಣಗೆರೆಯಲ್ಲಿ ದಾಳಿ ನಡೆಸಿದ್ದು, ಕೋಟ್ಯಂತರ ಮೌಲ್ಯದ ಆಸ್ತಿ ಮತ್ತು ಲಕ್ಷಾಂತರ ರೂಪಾಯಿ ನಗದು ಪತ್ತೆಯಾಗಿದೆ.
ಭಾರತ್ ಇನ್ಫ್ರಾ ಎಕ್ಸ್ಪೋರ್ಟ್ ಆ್ಯಂಡ್ ಇಂಪೋರ್ಟ್ ಲಿಮಿಟೆಡ್ ವಿರುದ್ಧ ಬ್ಯಾಂಕ್ಗೆ ವಂಚನೆ ಪ್ರಕರಣ ಸಂಬಂಧ ಎರಡು ಜಿಲ್ಲೆಗಳಲ್ಲಿ ಏಳು ಕಡೆ ಇಡಿ ದಾಳಿ ನಡೆಸಲಾಗಿದೆ. ದಾಳಿ ವೇಳೆ 100 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿ, 14 ಲಕ್ಷ ರೂಪಾಯಿ ನಗದು ಪತ್ತೆಯಾಗಿದೆ.
ಇದನ್ನೂ ಓದಿ: ಗೇಮಿಂಗ್ ಪೋರ್ಟಲ್‌ಗಳ ಕಚೇರಿ ಮೇಲೆ ಇಡಿ ದಾಳಿ; 4 ಸಾವಿರ ಕೋಟಿ ರೂ. ವಿದೇಶಕ್ಕೆ ರವಾನೆ
ಈ ವೇಳೆ ಅಧಿಕಾರಿಗಳು ಹಲವು ದಾಖಲೆಗಳು ಹಾಗೂ ಡಿಜಿಟಲ್ ಡಿವೈಸ್ಗಳನ್ನೂ ವಶಪಡಿಸಿಕೊಂಡಿದ್ದಾರೆ. ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬ್ಯಾಂಕ್ ಖಾತೆ ಮಾಹಿತಿ ಸಂಗ್ರಹಿಸಿ ಖಾತೆಯನ್ನು ಜಪ್ತಿ ಮಾಡಿದ್ದಾರೆ.