ಬಿಬಿಎಂಪಿ ಮಾಜಿ ಕಾರ್ಪೋರೇಟರ್ ಸಿ.ಜಿ. ಗೌರಮ್ಮ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ ಜಾರಿ ನಿರ್ದೇಶನಾಲಯ
ಬಿಬಿಎಂಪಿ ಮಾಜಿ ಸದಸ್ಯೆ ಸಿ.ಜಿ. ಗೌರಮ್ಮ ಮತ್ತು ಇತರರ ವಿರುದ್ಧ ಹಣದ ಅಕ್ರಮ ಚಲಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಜಾರಿ ನಿರ್ದೇಶನಾಲಯವು (ಇ.ಡಿ) ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದೆ.
Published: 10th June 2023 10:44 AM | Last Updated: 10th June 2023 10:44 AM | A+A A-

ಜಿ.ಸಿ ಗೌರಮ್ಮ
ಬೆಂಗಳೂರು: ಬಿಬಿಎಂಪಿ ಮಾಜಿ ಸದಸ್ಯೆ ಸಿ.ಜಿ. ಗೌರಮ್ಮ ಮತ್ತು ಇತರರ ವಿರುದ್ಧ ಹಣದ ಅಕ್ರಮ ಚಲಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಜಾರಿ ನಿರ್ದೇಶನಾಲಯವು (ಇ.ಡಿ) ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದೆ.
ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದಡಿ ಗೌರಮ್ಮ ಮತ್ತು ಅವರ ಕುಟುಂಬದ ಸದಸ್ಯರ ವಿರುದ್ಧ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಆರೋಪಪಟ್ಟಿ ಆಧಾರದಲ್ಲಿ ಇ.ಡಿ ತನಿಖೆ ಆರಂಭಿಸಿತ್ತು. ಪಿಎಂಎಲ್‌ಎ ಅಡಿಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಿ, 3.35 ಕೋಟಿ ರು. ಮೊತ್ತದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು.
‘ಗೌರಮ್ಮ ಮತ್ತು ಅವರ ಕುಟುಂಬದ ಸದಸ್ಯರು 3.47 ಕೋಟಿ ಮೌಲ್ಯದ ಆಸ್ತಿಯನ್ನು ಅಕ್ರಮವಾಗಿ ಹೊಂದಿರುವುದು ಪತ್ತೆಯಾಗಿದೆ. ಆರೋಪಿಗಳು ಬ್ಯಾಂಕ್ ಖಾತೆಗಳಿಗೆ ಬೃಹತ್ ಮೊತ್ತದ ನಗದನ್ನು ಸಂದಾಯ ಮಾಡಿರುವುದು ಕಂಡುಬಂದಿದೆ. ದೊಡ್ಡ ಮೊತ್ತದ ಸಾಲಗಳನ್ನೂ ಪಡೆದಿದ್ದಾರೆ. ಸ್ಥಿರಾಸ್ತಿಗಳ ಖರೀದಿಗೆ ಬಳಸಿದ ಹಣದ ಮೂಲವನ್ನು ತಿಳಿಸುವಲ್ಲಿ ಆರೋಪಿಗಳು ವಿಫಲರಾಗಿದ್ದಾರೆ’ ಎಂದು ಇ.ಡಿ ತಿಳಿಸಿದೆ.
ಗೌರಮ್ಮ ಅವರು ಗೋವಿಂದರಾಜು ಜೊತೆ ಶಾಮೀಲಾಗಿ 2010 ರಿಂದ 2012 ರ ಅವಧಿಯಲ್ಲಿ 3.47 ಕೋಟಿ ರೂಪಾಯಿಗಳ ಆಸ್ತಿಯನ್ನು ಗಳಿಸಿದ್ದಾರೆ, ಇದು ಅವರ ಕಾನೂನು ಮೂಲ ಆದಾಯದ 62.60 ಪ್ರತಿಶತವನ್ನು ಮೀರಿದೆ ಎಂದು ಕೇಂದ್ರೀಯ ಸಂಸ್ಥೆ ಹೇಳಿದೆ.
3.47 ಕೋಟಿ ಆಸ್ತಿಯನ್ನು ಸಂಗ್ರಹಿಸುವ ದುರುದ್ದೇಶದಿಂದ ಗೌರಮ್ಮ ತನ್ನ ಪತಿಯೊಂದಿಗೆ ಸಂಚು ರೂಪಿಸಿದ್ದರು ಎಂದು ಇಡಿ ತನಿಖೆಯಿಂದ ತಿಳಿದುಬಂದಿದೆ. ಆರೋಪಿಗಳು ಮತ್ತು ಅವರ ಕುಟುಂಬ ಸದಸ್ಯರು ತಮ್ಮ ಬ್ಯಾಂಕ್ ಖಾತೆಗಳಲ್ಲಿ ಅಪಾರ ಹಣವನ್ನು ಜಮಾ ಮಾಡಿದ್ದಾರೆ ಮತ್ತು ಹೆಚ್ಚಿನ ಮೌಲ್ಯದ ಸಾಲಗಳನ್ನು ಸಹ ಹೊಂದಿದ್ದಾರೆ.