ಅಭಿಪ್ರಾಯ ಸಂಗ್ರಹದ ಬಳಿಕ ಎನ್ಇಪಿ ಕುರಿತು ಅಂತಿಮ ನಿರ್ಧಾರ: ಸಚಿವ ಸುಧಾಕರ್
ತಜ್ಞರು, ಮಾಜಿ ಕುಲಪತಿಗಳಿಂದ ಸಲಹೆ ಪಡೆದ ಬಳಿಕವೇ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅವರು ಶುಕ್ರವಾರ ಹೇಳಿದ್ದಾರೆ.
Published: 10th June 2023 12:00 PM | Last Updated: 10th June 2023 12:43 PM | A+A A-

ಉನ್ನತ ಶಿಕ್ಷಣ ಸಚಿವ ಸುಧಾಕರ್.
ಬೆಂಗಳೂರು: ತಜ್ಞರು, ಮಾಜಿ ಕುಲಪತಿಗಳಿಂದ ಸಲಹೆ ಪಡೆದ ಬಳಿಕವೇ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅವರು ಶುಕ್ರವಾರ ಹೇಳಿದ್ದಾರೆ.
ರಾಜ್ಯಾದ್ಯಂತ ವಿಶ್ವವಿದ್ಯಾಲಯಗಳ ಉಪಕುಲಪತಿಗಳೊಂದಿಗೆ ಪರಿಶೀಲನಾ ಸಭೆ ಬಳಿಕ ಮಾತನಾಡಿದ ಅವರು, ಎನ್‌ಇಪಿ ಕುರಿತು ಪರ ಮತ್ತು ವಿರೋಧದ ಮಾತುಗಳು ಕೇಳಿ ಬರುತ್ತಿವೆ. ಎನ್‌ಇಪಿ ರದ್ದುಪಡಿಸದಂತೆ ಶಿಕ್ಷಣ ಸಲಹೆಗಾರ ಡಾ.ಎಂ.ಆರ್.ದೊರೆಸ್ವಾಮಿ ಕೂಡ ಮನವಿ ಮಾಡಿಕೊಂಡಿದ್ದಾರೆ. ಎನ್‌ಇಪಿ ಉತ್ತಮ ಉಪಕ್ರಮಗಳನ್ನು ಹೊಂದಿದ್ದು ಕೌಶಲ್ಯ ಅಭಿವೃದ್ಧಿಗೆ ಒತ್ತು ನೀಡಿರುವುದರಿಂದ ಅದನ್ನು ರದ್ದುಗೊಳಿಸದಂತೆ ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಎನ್ಇಪಿ ಬದಲಿಗೆ ಹೊಸ ಶಿಕ್ಷಣ ನೀತಿ ರೂಪಿಸಲು ಮುಂದಾದ ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರ!
ಈ ಕುರಿತು ನಿರ್ಧಾರ ತೆಗೆದುಕೊಳ್ಳುವ ವೇಳೆ ಖಂಡಿತವಾಗಿಯೂ ಎಲ್ಲರಿಂದಲೂ ಅಭಿಪ್ರಾಯ ಪಡೆದುಕೊಳ್ಳಲಾಗುವುದು. ಎನ್ಇಪಿ ಅನುಷ್ಠಾನದ ಬಗ್ಗೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ನಿರ್ಧಾರ ತೆಗೆದುಕೊಳ್ಳುತ್ತಾರೆಂದು ಹೇಳಿದರು,
ಯುಯುಸಿಎಂಎಸ್ ಕುರಿತು ಮಾತನಾಡಿ, ಹಲವಾರು ಲೋಪದೋಷಗಳಿರುವುದರಿಂದ ಪೋರ್ಟಲ್ ಬಳಸುವ ಪ್ರಕ್ರಿಯೆಯನ್ನು ಸುಲಭಗೊಳಿಸುವಂತೆ ಉಪಕುಲಪತಿಗಳು ಮನವಿ ಮಾಡಿಕೊಂಡಿದ್ದಾರೆಂದು ತಿಳಿಸಿದರು.