ಕಾಶಿ ದರ್ಶನಕ್ಕೆ ರಾಜ್ಯದ 600 ಯಾತ್ರಿಕರನ್ನು ಕಳುಹಿಸಲಾಗುವುದು: ರಾಮಲಿಂಗಾರೆಡ್ಡಿ

ಸರ್ಕಾರದ ಕಾಶಿ ಯಾತ್ರೆ ಯೋಜನೆಯಡಿ ಜುಲೈನಿಂದ ಕರ್ನಾಟಕದ ಯಾತ್ರಾರ್ಥಿಗಳನ್ನು ಕಾಶಿ ದರ್ಶನಕ್ಕೆ ಕಳುಹಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಗುರುವಾರ ಹೇಳಿದರು.
ರಾಮಲಿಂಗಾ ರೆಡ್ಡಿ
ರಾಮಲಿಂಗಾ ರೆಡ್ಡಿ

ಬೆಂಗಳೂರು: ಸರ್ಕಾರದ ಕಾಶಿ ಯಾತ್ರೆ ಯೋಜನೆಯಡಿ ಜುಲೈನಿಂದ ಕರ್ನಾಟಕದ ಯಾತ್ರಾರ್ಥಿಗಳನ್ನು ಕಾಶಿ ದರ್ಶನಕ್ಕೆ ಕಳುಹಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಗುರುವಾರ ಹೇಳಿದರು.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಸಚಿವರು, ಜುಲೈ ಎರಡನೇ ವಾರದಿಂದ ಕಾಶಿಗೆ ಒಂದು ಸುತ್ತಿನ ಪ್ರವಾಸಕ್ಕೆ ರಾಜ್ಯದ 600 ಮಂದಿ ಭಕ್ತರನ್ನು ಕಳುಹಿಸಲು ಮುಜರಾಯಿ ಇಲಾಖೆ ಮುಖ್ಯಸ್ಥರು ರೈಲ್ವೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ಹೇಳಿದರು.

ಚುನಾವಣಾ ನೀತಿ ಸಂಹಿತೆಯಿಂದಾಗಿ ಏಪ್ರಿಲ್ 14ರಿಂದ ಪ್ರಯಾಗ್‌ರಾಜ್ ಮತ್ತು ಅಯೋಧ್ಯೆ ಒಳಗೊಂಡ ಕಾಶಿ ರೌಂಡ್ ಟ್ರಿಪ್ ಪ್ಯಾಕೇಜ್ ಅನ್ನು ಸರ್ಕಾರ ನಿಲ್ಲಿಸಬೇಕಾಯಿತು. ಇದೀಗ ಯೋಜನೆ ಮರಳಿ ಆರಂಭವಾಗಲಿದೆ ಎಂದು ಮುಜರಾಯಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಟಿಕೆಟ್ ಕಾಯ್ದಿರಿಸಿದ್ಜ ಪ್ರತಿ ಯಾತ್ರಿಕರಿಗೆ ಇಲಾಖೆಯು 15,000 ರೂ. ಹಿಂದಿರುಗಿಸಿದೆ. ಯಾತ್ರೆಗೆ ಒಟ್ಟು ರೂ.20,000 ವೆಚ್ಚವಾಗಲಿದ್ದು, ಸರ್ಕಾರ ಪ್ರತಿ ಯಾತ್ರಾರ್ಥಿಗೆ ರೂ.5,000 ನೀಡುತ್ತಿದೆ. ಪ್ರವಾಸ ಕೈಗೊಳ್ಳುವ ಇಚ್ಛೆಯುಳ್ಳ ಯಾತ್ರಾರ್ಥಿಗಳು IRCTC ವೆಬ್'ಸೈಟ್'ಗೆ ಭೇಟಿ ನೀಡಿ ರೂ.15,000 ಪಾವತಿಸಿ ಟಿಕೆಟ್ ಬುಕ್ ಮಾಡಬಹುದು. ಮೆಜೆಸ್ಟಿಕ್ ನಿಂದ ರೈಲು ಹೊರಡಲಿದೆ ಎಂದು ಮುಜರಾಯಿ ಇಲಾಖೆಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ನಡುವೆ ಮುಳಬಾಗಿಲು ಗಣಪತಿ ದೇವಸ್ಥಾನದ ಪ್ರಧಾನ ಅರ್ಚಕ ಕೆ.ಎಸ್.ವಿಶ್ವನಾಥ ದೀಕ್ಷಿತ್ ಅವರು ಕಾಂಗ್ರೆಸ್ ಸರ್ಕಾರವನ್ನು ಕೊಂಡಾಡಿದ್ದಾರೆ. ಸಾಮರ್ಥ್ಯವಿಲ್ಲದ ಸಾಕಷ್ಟು ಬಡವರಿದ್ದಾರೆ. ಯೋಜನೆ ಮೂಲಕ ಅವರು ಕಾಶಿ ಯಾತ್ರೆ ಮಾಡಲು ಸಹಾಯವಾಗುತ್ತದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com