ಶಕ್ತಿ ಯೋಜನೆ: ಈಗ ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರು ಮಾತ್ರವಲ್ಲದೆ ಪುರುಷ ಪ್ರಯಾಣಿಕರ ಸಂಖ್ಯೆ ಕೂಡ ಹೆಚ್ಚಳ!

ರಾಜ್ಯದಲ್ಲಿ ಶಕ್ತಿ ಯೋಜನೆ ಪ್ರಾರಂಭವಾದ ನಂತರ, ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಸುವ ಮಹಿಳೆಯರ ಸಂಖ್ಯೆ ಹಲವಾರು ಪಟ್ಟು ಹೆಚ್ಚಾಗಿದೆ. ಈ ಯೋಜನೆಯು ಮಹಿಳೆಯರಿಗೆ ಅನುಕೂಲಕರವಾಗಿದೆ.
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಶಕ್ತಿ ಯೋಜನೆ ಪ್ರಾರಂಭವಾದ ನಂತರ, ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಸುವ ಮಹಿಳೆಯರ ಸಂಖ್ಯೆ ಹಲವಾರು ಪಟ್ಟು ಹೆಚ್ಚಾಗಿದೆ. ಈ ಯೋಜನೆಯು ಮಹಿಳೆಯರಿಗೆ ಅನುಕೂಲಕರವಾಗಿದೆ. ಇದರ ಜೊತೆಗೆ ಪುರುಷ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು ಮಾತ್ರವಲ್ಲದೆ ಒಟ್ಟಾರೆಯಾಗಿ ಸರ್ಕಾರಿ ಬಸ್ಸಿನಲ್ಲಿ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ.

ಶಕ್ತಿ ಯೋಜನೆ ಪ್ರಾರಂಭವಾದ ನಂತರ ಎರಡು ರೀತಿಯ ಬದಲಾವಣೆ ಆಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹಿಂದೆ ಮಹಿಳೆಯರು, ಖಾಸಗಿ ಬಸ್‌ಗಳು ಮತ್ತು ಆಟೋಗಳಂತಹ ಇತರ ಸಾರಿಗೆ ವಿಧಾನಗಳನ್ನು ಬಳಸುತ್ತಿದ್ದರು, ಈಗ ಬಸ್ಸುಗಳಲ್ಲಿ ಉಚಿತವಾಗಿರುವುದರಿಂದ ಬಸ್ಸುಗಳಲ್ಲಿಯೇ ಹೆಚ್ಚಿನವರು ಪ್ರಯಾಣಿಸುತ್ತಿದ್ದಾರೆ. ಎರಡನೆಯದು ಅನೇಕರು ನಡೆದುಕೊಂಡು ಹೋಗುತ್ತಿದ್ದವರು ಈಗ ಸಾರ್ವಜನಿಕ ಸಾರಿಗೆಯನ್ನು ಬಳಸಲು ಆರಿಸಿಕೊಂಡಿದ್ದಾರೆ. ಬಸ್ಸುಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಲು ಕಾರಣ ಸರ್ಕಾರದ ಉಚಿತ ಯೋಜನೆ ಎನ್ನುತ್ತಾರೆ ತಜ್ಞರು. 

BMTC ಯ ದೈನಂದಿನ ಸರಾಸರಿ ಪ್ರಯಾಣಿಕರ ಸಂಖ್ಯೆ 27.34 ಲಕ್ಷ ಆಗಿದ್ದರೆ, ಸಾರಿಗೆ ಇಲಾಖೆ ಹಂಚಿಕೊಂಡಿರುವ ಮಾಹಿತಿ ಪ್ರಕಾರ ಜೂನ್ 12 ರಂದು ಒಟ್ಟು 34.94 ಲಕ್ಷ ಮಂದಿ ಪ್ರಯಾಣಿಸಿದ್ದಾರೆ (17.57 ಲಕ್ಷ ಮಹಿಳಾ ಪ್ರಯಾಣಿಕರು) ಎಂದು ತೋರಿಸುತ್ತದೆ. ಜೂನ್ 13 ರಂದು 40.17 ಲಕ್ಷ (20.57 ಲಕ್ಷ ಮಹಿಳೆಯರು), ಜೂನ್ 14 ರಂದು 33.44 ಲಕ್ಷ (16.85 ಲಕ್ಷ) ಮತ್ತು ಜೂನ್ 15 ರಂದು 33.28 ಲಕ್ಷ (17.67 ಲಕ್ಷ) ಪುರುಷ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ ಎಂದು ಸೂಚಿಸುತ್ತದೆ.

ಬೆಂಗಳೂರು ಬಸ್ ಪ್ರಯಾಣಿಕ ವೇದಿಕೆಯ ಶಾಹೀನ್ ಶಾಸ, ಬಿಎಂಟಿಸಿಯಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆಯು ಗಮನಾರ್ಹವಾಗಿದೆ, ಜೂನ್ 12 ರಂದು 17 ಲಕ್ಷ ಮತ್ತು ಜೂನ್ 13 ರಂದು 20 ಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಜೂನ್ 14 ರಂದು ಇದು 16.85 ಲಕ್ಷಕ್ಕೆ ಇಳಿದಿರಬಹುದು, ಆದರೆ ಇದು ಜೂನ್ 12 ರ ಸಂಖ್ಯೆಗೆ ಹತ್ತಿರದಲ್ಲಿದೆ.  

ಸಂಚಾರಕ್ಕೆ ಇತರ ಸಾರಿಗೆಗಳನ್ನು ಬಳಸುತ್ತಿದ್ದ ಪ್ರಯಾಣಿಕರು ಉಚಿತದಿಂದಾಗಿ ಬಿಎಂಟಿಸಿ ಅವಲಂಬಿಸುತ್ತಿದ್ದಾರೆ. ನಡೆದುಕೊಂಡು ಹೋಗುತ್ತಿದ್ದವರು ಸಹ ಬಸ್‌ಗಳನ್ನು ಬಳಸಲು ಪ್ರಾರಂಭಿಸಿದ್ದಾರೆ ಎಂದು ಅವರು ಹೇಳಿದರು.

ತಜ್ಞ ಶ್ರೇಯಾ ಗಾಡೆಪಲ್ಲಿ ಅವರು ಯಾವುದೇ ಯೋಜನೆಯ ಪ್ರಾರಂಭದ ದಿನಗಳಲ್ಲಿ ಜನರಲ್ಲಿರುವ ಕುತೂಹಲದಿಂದಾಗಿ ಬಿಎಂಟಿಸಿಯಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ. ಇನ್ನು ಸ್ವಲ್ಪ ದಿನಗಳ ನಂತರ ಪರಿಸ್ಥಿತಿ ಹೇಗೆ ಮುಂದುವರಿಯುತ್ತದೆ ಎಂದು ನೋಡಬೇಕು ಎಂದರು.

ಬಿಎಂಟಿಸಿ ಅಧಿಕಾರಿಯೊಬ್ಬರು ಇದುವರೆಗೆ ಲಿಂಗವಾರು ಅಂಕಿಅಂಶ ಹೊಂದಿಲ್ಲ. ಶಕ್ತಿ ಯೋಜನೆ ಬಂದ ನಂತರ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಹೇಗೆ ಮುಂದುವರಿಯುತ್ತದೆ ಎಂದು ನೋಡಬೇಕಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com