ನಗರದ ಬೆಳವಣಿಗೆಯಲ್ಲಿ ಅಪಾರ್ಟ್ಮೆಂಟ್‌ಗಳ ಪಾತ್ರ ಪ್ರಮುಖ: ಸಚಿವ ಅಶ್ವತ್ಥ್ ನಾರಾಯಣ್
ನಗರದ ಬೆಳವಣಿಗೆಯಲ್ಲಿ ಅಪಾರ್ಟ್ಮೆಂಟ್‌ಗಳ ಪಾತ್ರ ಮುಖ್ಯವಾಗಿದ್ದು, ಎಲ್ಲಾ ಪ್ರಜೆಗಳಿಗೂ ಮಧ್ಯವರ್ತಿಗಳ ಅವಲಂಬನೆ ಇಲ್ಲದೆ ನಾಗರಿಕ ಸೇವೆಗಳನ್ನು ಲಭ್ಯವಾಗಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದು ಸಚಿವ ಅಶ್ವತ್ಥ್ ನಾರಾಯಣ್ ಅವರು ಹೇಳಿದ್ದಾರೆ.
Published: 13th March 2023 11:33 AM | Last Updated: 13th March 2023 03:39 PM | A+A A-

ಬೆಂಗಳೂರು ಅಪಾರ್ಟ್ಮೆಂಟ್ ಫೆಡರೇಷನ್ ಆಯೋಜಿಸಿದ್ದ 'Every Vote Matters' ಕಾರ್ಯಕ್ರಮದಲ್ಲಿ ಸಚಿವ ಅಶ್ವತ್ಥ್ ನಾರಾಯಣ್.
ಬೆಂಗಳೂರು: ನಗರದ ಬೆಳವಣಿಗೆಯಲ್ಲಿ ಅಪಾರ್ಟ್ಮೆಂಟ್‌ಗಳ ಪಾತ್ರ ಮುಖ್ಯವಾಗಿದ್ದು, ಎಲ್ಲಾ ಪ್ರಜೆಗಳಿಗೂ ಮಧ್ಯವರ್ತಿಗಳ ಅವಲಂಬನೆ ಇಲ್ಲದೆ ನಾಗರಿಕ ಸೇವೆಗಳನ್ನು ಲಭ್ಯವಾಗಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದು ಸಚಿವ ಅಶ್ವತ್ಥ್ ನಾರಾಯಣ್ ಅವರು ಹೇಳಿದ್ದಾರೆ.
ಬೆಂಗಳೂರು ಅಪಾರ್ಟ್ಮೆಂಟ್ ಫೆಡರೇಷನ್ ಆಯೋಜಿಸಿದ್ದ "Every Vote Matters" ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಗರದ ಬೆಳವಣಿಗೆಯಲ್ಲಿ ಅಪಾರ್ಟ್ಮೆಂಟ್‌ಗಳ ಪಾತ್ರ ಮುಖ್ಯವಾಗಿದೆ. ಎಲ್ಲಾ ಪ್ರಜೆಗಳಿಗೂ ಮಧ್ಯವರ್ತಿಗಳ ಅವಲಂಬನೆ ಇಲ್ಲದೆ ನಾಗರಿಕ ಸೇವೆಗಳನ್ನು ಲಭ್ಯವಾಗಿಸುವುದು ಸರ್ಕಾರದ ಉದ್ದೇಶವಾಗಿದೆ. ಇದನ್ನು ಗಮನದಲ್ಲಿರಿಸಿಕೊಂಡು ಮಾಲಿನ್ಯ ನಿಯಂತ್ರಣ ಮಂಡಳಿ ಸಹಿತ ಹಲವಾರು ಸಂಸ್ಥೆಗಳ ಪ್ರಕ್ರಿಯೆಗಳನ್ನು 'ಸಕಾಲ' ವ್ಯಾಪ್ತಿಗೆ ಒಳಪಡಿಸಲಾಗುವುದು ಎಂದು ಹೇಳಿದರು.
ಅಪಾರ್ಟ್ಮೆಂಟ್ ನಿವಾಸಿಗಳಿಗೆ ಸ್ವತ್ತಿನ ಮಾಲೀಕತ್ವ, ಆಸ್ತಿ ನೋಂದಣಿ, ವಿದ್ಯುತ್ ಬಿಲ್, ನೀರಿನ ಬಿಲ್ ಸೇರಿದಂತೆ ಯಾವುದೇ ವಿಷಯದಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳಲು ನಮ್ಮ ಬಿಜೆಪಿ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಫ್ಲಾಟ್ ಖರೀದಿದಾರರ ಸಂಘವನ್ನು ಸಹಕಾರ ಸಂಘವಾಗಿ ನೋಂದಾಯಿಸಿ: ಕರ್ನಾಟಕ ರೇರಾ ಕೋರ್ಟ್
ಬಿಎಎಫ್ ಉಪಾಧ್ಯಕ್ಷ ವಿಷ್ಣು ಗಟ್ಟುಪಲ್ಲಿ ಮಾತನಾಡಿ, ಅಪಾರ್ಟ್ ಮೆಂಟ್ ಗಳಲ್ಲಿ ವಾಸಿಸುವವರನ್ನು ಮಹತ್ವದ ಮತ ಬ್ಯಾಂಕ್ ಎಂದು ಪರಿಗಣಿಸುವುದಿಲ್ಲ. ಈ ಕಾರ್ಯಕ್ರಮವು ರಾಜಕಾರಣಿಗಳು ಮತ್ತು ಸಮುದಾಯದ ಸದಸ್ಯರಿಗೆ ನಗರದ ಸಮಸ್ಯೆಗಳ ಕುರಿತು ಚರ್ಚಿಸಲು ಅವಕಾಶಗಳನ್ನು ಒದಗಿಸುತ್ತದೆ ಎಂದರು.
ಆಸ್ತಿ ಮಾಲೀಕತ್ವ ಮತ್ತು ನಿರ್ವಹಣೆ, ಸಾರ್ವಜನಿಕ ಸೇವೆಗಳು, ಬಿಬಿಎಂಪಿ, ಪರಿಸರ ಸಂರಕ್ಷಣೆ, ನಗರ ಯೋಜನೆ ಮತ್ತು ಸಾರ್ವಜನಿಕ ಮೂಲಸೌಕರ್ಯ, ಸ್ಥಳೀಯ ಆಡಳಿತ ಮತ್ತು ಸಮಾಜ ಕಲ್ಯಾಣ ಸೇರಿದಂತೆ ವಿವಿಧ ವಿಷಯಗಳ ಕುರಿತು ಸಂಘವು ಅಧಿಕಾರಿಗಳಿಗೆ ಸಲಹೆಗಳನ್ನು ನೀಡಿತು.
ಪ್ರಣಾಣಿಕೆ ಸಿದ್ಧಪಡಿಸುವಾಗ ರಾಜಕೀಯ ಪಕ್ಷಗಳು ಈ ಸಲಹೆಗಳನ್ನು ಪರಿಗಣಿಸಬೇಕೆಂದು ಅವರು ಮನವಿ ಮಾಡಿಕೊಂಡರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ಶಾಸಕ ಆರ್.ರಾಮಲಿಂಗಾ ರೆಡ್ಡಿ, ಆಮ್ ಆದ್ಮಿ ಪಕ್ಷದ ಪೃಥ್ವಿ ರೆಡ್ಡಿ, ಜೆಡಿಎಸ್ ನ ತನ್ವೀರ್ ಅಹಮದ್ ಕೂಡ ಭಾಗವಹಿಸಿದ್ದರು.