ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ರಿಯಾಲಿಟಿ ಚೆಕ್: ನಗರಗಳನ್ನು ಜೋಡಿಸುವ ಹೆದ್ದಾರಿ ಜನರನ್ನು ಬೇರ್ಪಡಿಸುತ್ತಿದೆ!

ಎರಡು ನಗರಗಳ ನಡುವಿನ ಪ್ರಯಾಣದ ಅವಧಿಯನ್ನು ಕಡಿಮೆ ಮಾಡಲು ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ನಿರ್ಮಾಣ ಮಾಡಿ ಅದು ಉದ್ಘಾಟನೆಗೊಂಡು ವಾರವೇ ಕಳೆದಿದೆ. ಯೋಜನೆಯು ಪ್ರಯಾಣದ ಸಮಯವನ್ನು ಗಣನೀಯವಾಗಿ ಕಡಿಮೆಗೊಳಿಸಿದ್ದರೂ, ಸಮಸ್ಯೆಗಳು ಎಕ್ಸ್ ಪ್ರೆಸ್ ವೇಯನ್ನು ಹಾಳುಮಾಡುತ್ತಿದೆ
ಹೊಸದಾಗಿ ಉದ್ಘಾಟನೆಗೊಂಡ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಪ್ರವೇಶದ ನೈಸ್ ರಸ್ತೆಯ ಬಳಿ ಭಾರಿ ಸಂಚಾರ ದಟ್ಟಣೆ
ಹೊಸದಾಗಿ ಉದ್ಘಾಟನೆಗೊಂಡ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಪ್ರವೇಶದ ನೈಸ್ ರಸ್ತೆಯ ಬಳಿ ಭಾರಿ ಸಂಚಾರ ದಟ್ಟಣೆ

ಬೆಂಗಳೂರು: ಎರಡು ನಗರಗಳ ನಡುವಿನ ಪ್ರಯಾಣದ ಅವಧಿಯನ್ನು ಕಡಿಮೆ ಮಾಡಲು ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ನಿರ್ಮಾಣ ಮಾಡಿ ಅದು ಉದ್ಘಾಟನೆಗೊಂಡು ವಾರವೇ ಕಳೆದಿದೆ. ಯೋಜನೆಯು ಪ್ರಯಾಣದ ಸಮಯವನ್ನು ಗಣನೀಯವಾಗಿ ಕಡಿಮೆಗೊಳಿಸಿದ್ದರೂ, ಸಮಸ್ಯೆಗಳು ಎಕ್ಸ್ ಪ್ರೆಸ್ ವೇಯನ್ನು ಕಾಡುತ್ತಿವೆ. ದೂರದೃಷ್ಟಿಯಿಂದ ಯೋಜನೆಯನ್ನು ಯೋಜಿಸಿದ್ದರೆ ಅದನ್ನು ತಪ್ಪಿಸಬಹುದಿತ್ತು ಮತ್ತು ಸರ್ವಿಸ್ ರಸ್ತೆ ಪೂರ್ಣಗೊಳ್ಳುವವರೆಗೆ ಟೋಲ್ ಸಂಗ್ರಹವನ್ನು ನಿಲ್ಲಿಸಬಹುದು ಎಂಬುದು ಜನರ ಅಭಿಪ್ರಾಯ.

TNIE ತಂಡ ಆರು ಪಥದ ಇ-ವೇಯಲ್ಲಿ ಬೆಂಗಳೂರಿನ ಪ್ರಾರಂಭದ ಸ್ಥಳದಿಂದ ಮೈಸೂರಿನ ಅಂತ್ಯದವರೆಗೆ ಪ್ರಯಾಣಿಸುವ ಮೂಲಕ ಪ್ರಯಾಣಿಕರಿಗೆ ಏನನಿಸುತ್ತದೆ, ರಸ್ತೆ ಸ್ಥಿತಿ, ಸರ್ವಿಸ್ ರಸ್ತೆಯ ಸ್ಥಿತಿ ಮತ್ತು ಸ್ಥಳೀಯ ನಿವಾಸಿಗಳು, ಅಂಗಡಿಯವರು ಮತ್ತು ಎಕ್ಸ್ ಪ್ರೆಸ್ ವೇಯ ಬದಿಯಲ್ಲಿರುವ ತಿಂಡಿ-ತಿನಿಸುಗಳ ಮಾಲೀಕರು ಏನು ಹೇಳುತ್ತಾರೆಂದು ಎಂದು ತಿಳಿಯುವ ಪ್ರಯತ್ನ ಮಾಡಿತು. 

ಈ ವೇಳೆ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಕೆಲವು ಪ್ರಯಾಣಿಕರು 100 ಕಿಲೋಮೀಟರ್ ವೇಗದಲ್ಲಿ ಪ್ರಯಾಣಿಸಲು ಸಂತೋಷಪಟ್ಟರು, ಆದರೆ ಯೋಜನೆಯು ಅನೇಕ ಸಣ್ಣ ವಿಷಯಗಳನ್ನು ಪರಿಹರಿಸಲು ವಿಫಲವಾಗಿದೆ ಎಂದು ಹೇಳುತ್ತಾರೆ. ಬಿಡದಿಯಲ್ಲಿ ತಟ್ಟೆ ಇಡ್ಲಿ ಮತ್ತು ಚನ್ನಪಟ್ಟಣದಲ್ಲಿ ವರ್ಣರಂಜಿತ ಮರದ ಆಟಿಕೆಗಳಂತಹ ಉದ್ಯಮಗಳಿಗೆ ಇದರಿಂದ ಪೆಟ್ಟುಬಿದ್ದಿದೆ. ಸ್ಥಳೀಯ ಖಾದ್ಯಗಳ ಹೊಟೇಲ್ ಗಳು ಹೆದ್ದಾರಿ ಬದಿಯಲ್ಲಿ ಕಣ್ಮರೆಯಾಗಿವೆ. ಇನ್ನು ಎಕ್ಸ್ ಪ್ರೆಸ್ ವೇಯ ಪ್ರವೇಶ ಮತ್ತು ನಿರ್ಗಮನ ಸ್ಥಳಗಳಲ್ಲಿ ದಟ್ಟಣೆಯ ಬಗ್ಗೆ ದೂರಿದರು. ಇ-ವೇ ಶೌಚಾಲಯದಂತಹ ಮೂಲಭೂತ ಸೌಕರ್ಯಗಳ ಕೊರತೆಯನ್ನು ಪ್ರಸ್ತಾಪಿಸಿದರು.

ಆರಂಭದ ಹಂತದಲ್ಲಿ ಗೊಂದಲ, ದಟ್ಟಣೆ: ಬೆಂಗಳೂರಿನಿಂದ ಪ್ರಯಾಣಿಸುವವರು ನೈಸ್ ರಸ್ತೆ ಜಂಕ್ಷನ್‌ನ ನಂತರ ಪಂಚಮುಖ ಗಣಪತಿ ದೇವಸ್ಥಾನದ ಬಳಿ ಸಂಚಾರ ದಟ್ಟಣೆಯ ಮಾರ್ಗವನ್ನು ಹಾದು ಹೋಗಬೇಕಾಗುತ್ತದೆ. ಕೆಂಗೇರಿಯಲ್ಲಿ ನೈಸ್ ರಸ್ತೆಯಿಂದ ನಿರ್ಗಮಿಸುವ ನೂರಾರು ವಾಹನಗಳು ಎಡಕ್ಕೆ ಹೋಗಿ ಬೆಂಗಳೂರು ನಗರದಿಂದ ಬರುವ ಟ್ರಾಫಿಕ್‌ನೊಂದಿಗೆ ವಿಲೀನಗೊಂಡು ದಟ್ಟಣೆಯನ್ನು ಸೃಷ್ಟಿಸುತ್ತವೆ. ಪ್ರಯಾಣಿಕರು ತಾವು ಫ್ಲೈಓವರ್ ನ್ನು ತೆಗೆದುಕೊಳ್ಳಬೇಕೇ ಅಥವಾ ಕೆಳಗೆ ಹೋಗಬೇಕೇ ಎಂದು ಪರಿಶೀಲಿಸಲು ನಿಧಾನಗೊಳಿಸುತ್ತಾರೆ.

ಬಿಡದಿ ಮತ್ತು ರಾಮನಗರಕ್ಕೆ ತೆರಳಲು ಬಯಸುವ ಜನರು ಫ್ಲೈಓವರ್ ಕೆಳಗೆ ಹೋಗಬೇಕು ಅಥವಾ ಟೋಲ್ ಪಾವತಿಸಬೇಕು. ಅನೇಕ ಪ್ರಯಾಣಿಕರು ಗೊಂದಲಕ್ಕೊಳಗಾಗುತ್ತಾರೆ, ಇ-ವೇ ಪ್ರಾರಂಭವಾಗುವ ಮೊದಲು ದಟ್ಟಣೆಯುಂಟಾಗುತ್ತದೆ ಎಂದು ಹೇಳುತ್ತಾರೆ ಸುಬ್ರಹ್ಮಣ್ಯ. 

ಬಿಡದಿ ಮತ್ತು ರಾಮನಗರಕ್ಕೆ ತೆರಳಲು ಸಹ ಸಂಪೂರ್ಣ ಟೋಲ್ ಶುಲ್ಕ ವಸೂಲಿ ಮಾಡುತ್ತಿರುವುದನ್ನು ವಿರೋಧಿಸಿ ಹಲವು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಬಿಡದಿ ಮತ್ತು ರಾಮನಗರಕ್ಕೆ ತೆರಳುವ ಜನರಿಗೆ ಸರ್ವೀಸ್ ರಸ್ತೆಯಲ್ಲಿ ತೆರಳುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಬೋರ್ಡ್‌ಗಳನ್ನು ಹಾಕಿದೆ. ರಾಜರಾಜೇಶ್ವರಿ ವೈದ್ಯಕೀಯ ಕಾಲೇಜು ಮುಂದೆ ಫ್ಲೈಓವರ್ ತೆಗೆದುಕೊಂಡರೆ ಸಂಪೂರ್ಣ ಟೋಲ್ ಪಾವತಿಸಬೇಕಾಗುತ್ತದೆ.

ಇದರ ಹೊರತಾಗಿಯೂ, ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳಲ್ಲಿ ಅನೇಕ ಪ್ರಯಾಣಿಕರು ಫ್ಲೈಓವರ್ ನ್ನು ಬಳಸುತ್ತಾರೆ. ಯು-ಟರ್ನ್ ನ್ನು ಅಪಾಯಕಾರಿಯಾಗಿ ತಿರುವು ತೆಗೆದುಕೊಂಡು ಮತ್ತೆ ಅದೇ ಲೇನ್‌ನಲ್ಲಿ ಸರ್ವಿಸ್ ರಸ್ತೆಗೆ ಹೋಗುತ್ತಾರೆ. ಕೆಟ್ಟುಹೋದ ಟ್ರಕ್‌ಗಳು ಮತ್ತು ಕಾರುಗಳು ಮತ್ತು ಅಪಘಾತಗಳಲ್ಲಿ ಸಿಲುಕಿದ ವಾಹನಗಳು ಎಕ್ಸ್‌ಪ್ರೆಸ್‌ವೇಯಲ್ಲಿ ದಿನಗಟ್ಟಲೆ ನಿಂತಿರುವುದನ್ನು ನೋಡಬಹುದು. 

ಟೋಲ್ ಬಗ್ಗೆ ಆಕ್ಷೇಪ: ಫ್ಲೈಓವರ್ ಮೇಲೆ ವಾಹನವು 100 ಕಿಮೀ ವೇಗದಲ್ಲಿ ಸುಲಭವಾಗಿ ಚಲಿಸಬಹುದು. ಫ್ಲೈಓವರ್ ಮುಗಿದ ನಂತರ ಕಣಿಮಿಣಿಕೆ ಟೋಲ್ ಬೂತ್ ನ್ನು ತಲುಪಬಹುದು. ಬೂತ್‌ನಲ್ಲಿ ಪ್ರಯಾಣಿಕರು ಸಿಬ್ಬಂದಿಯೊಂದಿಗೆ ವಾಗ್ವಾದಕ್ಕಿಳಿದಿದ್ದು, ಜನಸಂದಣಿ ಇಲ್ಲದ ಸಮಯದಲ್ಲೂ 10ಕ್ಕೂ ಹೆಚ್ಚು ವಾಹನಗಳು ಟೋಲ್ ಗೇಟ್ ದಾಟಲು ಕಾದು ಕುಳಿತಿರುವುದು ಕಂಡು ಬಂತು. ಟೋಲ್ ಬೂತ್ ನಂತರವೂ ಸರ್ವಿಸ್ ರಸ್ತೆ ಅಪೂರ್ಣವಾಗಿರುವುದರಿಂದ, ಟೋಲ್ ತಪ್ಪಿಸಲು ಫ್ಲೈಓವರ್ ಕೆಳಗಿನಿಂದ ಸಾಗಿ ಬರುವ ವಾಹನಗಳು ಹಣ ಪಾವತಿಸದೆ ಇ-ವೇಗೆ ಬರುತ್ತವೆ.

ಈ ವಿಷಯವು ಹೈಕೋರ್ಟ್‌ನಲ್ಲಿರುವ ಕಾರಣ ಇನ್ನೂ ಸುಮಾರು 100 ಮೀಟರ್‌ಗೆ ಸೇವಾ ರಸ್ತೆಯನ್ನು ನಿರ್ಮಿಸಲು ಎನ್‌ಎಚ್‌ಎಐ ಹೇಳಿದೆ. ಸ್ಟೆ ತೆರವಾದಾಗ ಸ್ಟ್ರೆಚ್ ಪೂರ್ಣಗೊಳಿಸಿ ವಾಹನಗಳು ಟೋಲ್ ಬೈಪಾಸ್ ಮಾಡಿ ಇ-ವೇ ಪ್ರವೇಶಿಸದಂತೆ ತಡೆಯುತ್ತೇವೆ ಎಂದರು.

ಇ-ವೇಯು ಬಿಡದಿ ಮತ್ತು ವಂಡರ್ಲಾವನ್ನು ತಲುಪಲು ಪ್ರಯಾಣಿಕರಿಗೆ ಮಾರ್ಗವನ್ನು ಒದಗಿಸಿದರೆ, ತಟ್ಟೆ ಇಡ್ಲಿಗಳನ್ನು ಸವಿಯುವವರು ಎಕ್ಸ್ ಪ್ರೆಸ್ ವೇ ಬಂದ ಮೇಲೆ ಕಡಿಮೆಯಾಗಿದೆ. ಹಿಂದೆ, ವಾರಾಂತ್ಯ ಮತ್ತು ರಜಾದಿನಗಳಲ್ಲಿ ನಮ್ಮ ಹೋಟೆಲ್‌ಗೆ 3,000 ಕ್ಕೂ ಹೆಚ್ಚು ಜನರು ಬರುತ್ತಿದ್ದರು. ಈಗ, ನಾವು ನಮ್ಮ ವ್ಯಾಪಾರದ ಶೇಕಡಾ 70 ರಷ್ಟು ಕಳೆದುಕೊಂಡಿದ್ದೇವೆ. ಇ-ವೇಯಿಂದ  ಹಳೆ ಗ್ರಾಹಕರು ಬಿಟ್ಟು ಹೊಸಬರು ಬರುತ್ತಿಲ್ಲ ಎಂದು ಬಿಡದಿಯ ಹೋಟೆಲ್ ಗುರು ಮಾಲೀಕ ದಯಾನಂದ ಹೇಳಿದರು, ಇವರ ಹೊಟೇಲ್ ತಟ್ಟೆ ಇಡ್ಲಿಗೆ ಪ್ರಸಿದ್ಧವಾಗಿದೆ. ಸುಮಾರು 20 ಸಿಬ್ಬಂದಿಯನ್ನು ಹೊಂದಿದ್ದ 27 ವರ್ಷದ ಹೋಟೆಲ್ ನ್ನು ಐದಕ್ಕೆ ಇಳಿಸಲಾಗಿದೆ ಎಂದು ಅವರು ವಿಷಾದಿಸುತ್ತಾರೆ. ಹಲವು ಹೊಟೇಲ್‌ಗಳು ಮುಚ್ಚಿ ‘ಟು-ಲೆಟ್’ ಬೋರ್ಡ್‌ಗಳನ್ನು ನೇತು ಹಾಕಿವೆ.

ಎಕ್ಸ್‌ಪ್ರೆಸ್‌ವೇಯಲ್ಲಿ ಅಪರಾಧ: ಇನ್ನೊಂದು ಪ್ರಮುಖ ಕಳವಳವೆಂದರೆ ಇತ್ತೀಚಿನ ದಿನಗಳಲ್ಲಿ ಅಪರಾಧ. ಎಕ್ಸ್‌ಪ್ರೆಸ್‌ವೇಯಲ್ಲಿ ಮೈಸೂರಿನ ಇಬ್ಬರು ಜೋಡಿಗಳನ್ನು ಚಾಕು ತೋರಿಸಿ ದರೋಡೆ ಮಾಡಲಾಗಿದೆ. AI-ಸ್ಥಾಪಿತ ವೈಶಿಷ್ಟ್ಯಗಳನ್ನು ಒಳಗೊಂಡಂತೆ ಹೆಚ್ಚಿನ CCTVಗಳು ಅಪರಾಧದ ಪ್ರಮಾಣವನ್ನು ಕಡಿಮೆ ಮಾಡಬಹುದು, ಟ್ರಾಫಿಕ್ ಉಲ್ಲಂಘನೆ ಮತ್ತು ಮಿತಿಮೀರಿದ ವೇಗವನ್ನು ಪತ್ತೆ ಮಾಡುತ್ತದೆ ಮತ್ತು ಅವರಿಗೆ ಸೂಚನೆಗಳನ್ನು ನೀಡುತ್ತದೆ.

ಎಕ್ಸ್ ಪ್ರೆಸ್ ವೇಗೆ ಏನು ಬೇಕು?: ಆರು-ಪಥದ ಎಕ್ಸ್‌ಪ್ರೆಸ್‌ವೇ ಎಲ್ಲಾ ಸಿದ್ಧವಾಗಿದ್ದರೂ, ಅದರ ಸಂಪೂರ್ಣ ಪ್ರಯೋಜನವನ್ನು ಸಾಧಿಸಲು ಸರ್ವಿಸ್ ರಸ್ತೆಗಳು ಸೇರಿದಂತೆ ಕಾಮಗಾರಿ ಬಾಕಿ ಇರುವ ರಸ್ತೆಗಳ ವಿಸ್ತರಣೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಸರಿಯಾದ ಶೌಚಾಲಯಗಳು, ಇಂಧನ ಕೇಂದ್ರಗಳು, ಫುಡ್ ಕೋರ್ಟ್‌ಗಳು, ವಾಹನಗಳಿಗೆ ಪಾರ್ಕಿಂಗ್ ಸ್ಥಳಗಳು, SOS ಮತ್ತು ಸಹಾಯವಾಣಿಗಳ ಸರಿಯಾದ ಕಾರ್ಯನಿರ್ವಹಣೆಯನ್ನು ಒಳಗೊಂಡಂತೆ ದಾರಿಬದಿಯ ಸೌಕರ್ಯಗಳನ್ನು ಒದಗಿಸುವುದರ ಮೇಲೆ ಈಗ ಮುಖ್ಯ ಗಮನಹರಿಸಬೇಕು, TNIE ಯ ಪರಿಶೀಲನೆಯ ಸಮಯದಲ್ಲಿ ಅಸಮರ್ಪಕವಾಗಿ ಕಂಡುಬಂದಿದೆ. ಇ-ವೇ ಪ್ರವೇಶ ಮತ್ತು ನಿರ್ಗಮನದಲ್ಲಿ ದಟ್ಟಣೆಯನ್ನು ಪರಿಹರಿಸಬೇಕೆಂದು ಪ್ರಯಾಣಿಕರು ಬಯಸುತ್ತಾರೆ.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು 23 ಸ್ಥಳಗಳಲ್ಲಿ ರಸ್ತೆ ಬದಿ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದ್ದರೂ, ಮುಂದಿನ ಆರು ತಿಂಗಳೊಳಗೆ ಅವುಗಳನ್ನು ಸ್ಥಾಪಿಸಬೇಕು, ಕಲಾವಿದರು ಮತ್ತು ಕುಶಲಕರ್ಮಿಗಳು ತಮ್ಮ ಕರಕುಶಲ ವಸ್ತುಗಳು, ಕೈಮಗ್ಗಗಳು, ರೇಷ್ಮೆಗಳನ್ನು ಪ್ರದರ್ಶಿಸಲು, ಮರದ ಕೆತ್ತನೆಗಳು, ಪೀಠೋಪಕರಣಗಳು ಮತ್ತು ಶ್ರೀಗಂಧದ ಉತ್ಪನ್ನಗಳು ಮತ್ತು ಮಾರಾಟ ಮಾಡಲು ಗಮನಹರಿಸಬೇಕು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com