ಒಳ ಮೀಸಲಾತಿ ಕುರಿತ ರಾಜ್ಯ ಸರ್ಕಾರದ ನಿರ್ಧಾರವನ್ನು ಕೇಂದ್ರ ಕಾಪಾಡಲಿದೆ: ಸಚಿವ ಮಾಧುಸ್ವಾಮಿ

ಸಮಾನತೆ ಸಾಧಿಸಲು ಮೀಸಲಾತಿ ಅಗತ್ಯವಿದ್ದು, ಒಳ ಮೀಸಲಾತಿ ಕುರಿತ ರಾಜ್ಯ ಸರ್ಕಾರದ ನಡೆಗೆ ಕೇಂದ್ರ ಸರ್ಕಾರ ಕಾಪಾಡಲಿದೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿಯವರು ಭಾನುವಾರ ಹೇಳಿದರು.
ಸಚಿವ ಮಾಧುಸ್ವಾಮಿ
ಸಚಿವ ಮಾಧುಸ್ವಾಮಿ
Updated on

ಬೆಂಗಳೂರು: ಸಮಾನತೆ ಸಾಧಿಸಲು ಮೀಸಲಾತಿ ಅಗತ್ಯವಿದ್ದು, ಒಳ ಮೀಸಲಾತಿ ಕುರಿತ ರಾಜ್ಯ ಸರ್ಕಾರದ ನಡೆಗೆ ಕೇಂದ್ರ ಸರ್ಕಾರ ಕಾಪಾಡಲಿದೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿಯವರು ಭಾನುವಾರ ಹೇಳಿದರು.

ತುಮಕೂರಿನಲ್ಲಿ ಮಾತನಾಡಿದ ಅವರು, ಅಸ್ಪೃಶ್ಯ ಜಾತಿಗಳಿಗೆ ಉತ್ತಮ ಸ್ಥಾನಮಾನ, ಸಾಮಾಜಿಕ ಸ್ಥಾನಮಾನ ಇದೂವರೆಗೆ ಸಿಕ್ಕಿಲ್ಲ. ಇದೂವರೆಗೂ ನಾವು ಅವರನ್ನು ನಮ್ಮವರು ಎಂಬಂತೆ ಕಂಡಿಲ್ಲ. ಅವರಿಗೆ ನಾವು ಸಾಮಾಜಿಕ ಸ್ಥಾನಮಾನ ನೀಡಿದಾಗ ಮಾತ್ರ ಸಮಾನಾತೆ ಸಾಧ್ಯ. ಅಲ್ಲಿಯವರೆಗೂ ಮೀಸಲಾತಿ ಅಗತ್ಯವಿದೆ ಎಂದು ಹೇಳಿದರು.

ಒಳ ಮೀಸಲಾತಿ ಕೇಂದ್ರಕ್ಕೆ ಶಿಫಾರಸು ಮಾಡಿರುವ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳ ಟೀಕೆಗಳ ಬಗ್ಗೆ ಪ್ರತಿಕ್ರಿಯಿ, ಟೀಕೆ ಮಾಡುವ ಪಾತ್ರವನ್ನು ಅಭಿನಯಿಸುತ್ತಿದ್ದಾರೆ. ಟೀಕೆ ಮಾಡಲಿ. ಸಿದ್ದರಾಮಯ್ಯನವರು ಆತ್ಮಸಾಕ್ಷಿಯಾಗಿ ಮಾತನಾಡಿರುವ ವಿಚಾರ ಅಲ್ಲ. ಪರಿಸ್ಥಿತಿಗೆ ಅನುಗುಣವಾಗಿ ಹೇಳಿರುವ ಮಾತು. ಮುಸ್ಲಿಂ ಸಮುದಾಯಕ್ಕೆ ಒಳ್ಳೆಯದಾಗಿದೆ ಎಂದು ನಾವು ಭಾವಿಸಿದ್ದೇವೆ ಎಂದು ತಿಳಿಸಿದರು.

ನಾವು ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳ ಮಾಡಿದಾಗ ಇಡಬ್ಲ್ಯೂಎಸ್‌ನಲ್ಲಿ ಸ್ವಲ್ಪ ಕೋಟಾನಾ ಬಳಸಿಕೊಳ್ಳೋಣ ಎಂದುಕೊಂಡಿದ್ದೆವು. ಇಡಬ್ಲ್ಯೂಎಸ್‌ನಲ್ಲಿ ಶೇ.10 ಅನ್ನು ಸಂಪೂರ್ಣವಾಗಿ ಬಳಸಿಕೊಳ್ಳದೇ ಸ್ವಲ್ಪ ರೆಡ್ಯೂಸ್‌ ಮಾಡುತ್ತೇವೆಂದು ಭಾವಿಸಿದ್ದೆವು. ಆದರೆ, ಕೇಂದ್ರ ಸರ್ಕಾರ ಆ. ಶೇ. 10 ಅನ್ನು ಯಾವುದೇ ಕಾರಣಕ್ಕೂ ಮುಟ್ಟುವ ಹಾಗಿಲ್ಲ ಎಂದು ಸ್ಪಷ್ಟವಾಗಿ ಸೂಚಿಸಿತು. ಹಾಗಾಗಿ ಅದನ್ನು ಮುಟ್ಟಲು ಹೋಗಲಿಲ್ಲ. ಹೀಗಾಗಿ ನಮಗೆ ಆಯ್ಕೆ ಇದ್ದಿದ್ದು ಒಂದೇ, ಯಾವುದಾದರೂ ಒಂದು ದೊಡ್ಡ ಸಮುದಾಯವನ್ನು ಮೀಸಲಾತಿಯಿಂದ ಹೊರತೆಗೆದು ಇಡಬ್ಲ್ಯೂಎಸ್‌ನಲ್ಲಿ ಸೇರ್ಪಡೆ ಮಾಡುವುದು. ಆದ್ದರಿಂದ ರಾಜ್ಯದ ಜನಸಂಖ್ಯೆಯಲ್ಲಿ ಶೇ. 8 ರಿಂದ ಶೇ.10 ಇರುವ ಮುಸ್ಲಿಂ ಸಮುದಾಯವನ್ನು 2ಬಿಯಿಂದ ತೆಗೆದು ಇಡಬ್ಲ್ಯೂಎಸ್‌ಗೆ ಸೇರ್ಪಡೆ ಮಾಡಲಾಯಿತು ಎಂದು ಮಾಹಿತಿ ನೀಡಿದರು.

ಈ ಮೊದಲು ಮುಸ್ಲಿಂ ಸಮುದಾಯವನ್ನು 3 ಕೆಟಗರಿಯಲ್ಲಿ ಹಂಚಿಕೆ ಮಾಡಲಾಗಿತ್ತು. ಕೆಲವು ಮುಸಲ್ಮಾನರು ಪ್ರವರ್ಗ 1ರಲ್ಲಿ ಇದ್ದಾರೆ. ಇನ್ನು ಕೆಲವರು ಪ್ರವರ್ಗ 2ಎ ನಲ್ಲಿ ಇದ್ದಾರೆ. ಇನ್ನು ಬಹುಪಾಲು ಮುಸ್ಲಿಮರನನ್ನು ಪ್ರವರ್ಗ 2ಬಿನಲ್ಲಿ ಇಡಲಾಗಿತ್ತು. ಈಗ 2ಬಿಯಿಂದ ತೆಗೆದಿದ್ದರಿಂದ ಶೇ.4ಗಾಗಿ ಫೈಟ್ ಮಾಡುತ್ತಿದ್ದವರಿಗೆ ಮೀಸಲಾತಿ ಪ್ರಮಾಣ ಹೆಚ್ಚು ಸಿಗಲಿದೆ. ಈಗ ಶೇ.10 ಮೀಸಲಾತಿಯಲ್ಲಿ ಅವರು ಮೀಸಲಾತಿ ಪಡೆದುಕೊಳ್ಳಬಹುದು. ಎಸ್‌ಸಿ/ಎಸ್‌ಟಿಗಳ ಮೀಸಲಾತಿ ಹೆಚ್ಚಳ, ವರ್ಗೀಕರಣ ಮತ್ತು ಇತರ ಬದಲಾವಣೆಗಳನ್ನು ಸಂಸತ್ತು ಅನುಮತಿ ನೀಡಿದ ನಂತರವೇ ಜಾರಿಗೆ ತರಲಾಗುವುದು ಎಂದು ಸ್ಪಷ್ಟಪಡಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com