ಪ್ರಧಾನಿ ಮೋದಿ ರೋಡ್‌ಶೋ ವೇಳೆ ಭದ್ರತಾ ಲೋಪ; ಯುವಕನ ಬಂಧನ, ಆತಂಕದಲ್ಲಿ ಗ್ರಾಮ ತೊರೆದ ಕುಟುಂಬಸ್ಥರು
ದಾವಣಗೆರೆಯಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿಯವರ ರೋಡ್ ಶೋ ವೇಳೆ ಭದ್ರತಾ ಲೋಪವಾಗಿದೆ ಎಂದು ವರದಿಯಾದ ಒಂದು ದಿನದ ನಂತರ, ಪ್ರಧಾನಿ ವಾಹನದ ಬಳಿ ಓಡಲು ಯತ್ನಿಸಿದ ಯುವಕನ ಕುಟುಂಬ ಸದಸ್ಯರು ಮನೆಗೆ ಬೀಗ ಹಾಕಿ ಗ್ರಾಮವನ್ನು ತೊರೆದಿದ್ದಾರೆ.
Published: 27th March 2023 01:50 PM | Last Updated: 27th March 2023 01:52 PM | A+A A-

ದಾವಣಗೆರೆಯಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿಯವರ ರೋಡ್ ಶೋ ವೇಳೆ ಪ್ರಧಾನಿ ಬೆಂಗಾವಲು ವಾಹನದತ್ತ ತೆರಳಲು ಮುಂದಾದ ಯುವಕ
ಕೊಪ್ಪಳ: ದಾವಣಗೆರೆಯಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿಯವರ ರೋಡ್ ಶೋ ವೇಳೆ ಭದ್ರತಾ ಲೋಪವಾಗಿದೆ ಎಂದು ವರದಿಯಾದ ಒಂದು ದಿನದ ನಂತರ, ಪ್ರಧಾನಿ ವಾಹನದ ಬಳಿ ಓಡಲು ಯತ್ನಿಸಿದ ಯುವಕನ ಕುಟುಂಬ ಸದಸ್ಯರು ಮನೆಗೆ ಬೀಗ ಹಾಕಿ ಗ್ರಾಮವನ್ನು ತೊರೆದಿದ್ದಾರೆ.
ಇದೇ ವೇಳೆ ಕೊಪ್ಪಳ ಜಿಲ್ಲೆಯ ಗುಡ್ಲಾನೂರಿನ ನಿವಾಸಿ ಬಸವರಾಜ ಕಟಗಿ ಎಂಬ ಯುವಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ.
#WATCH | Karnataka: Security breach during PM Modi's roadshow in Davanagere, earlier today, when a man tried to run towards his convoy. He was later detained by police.
(Visuals confirmed by police) pic.twitter.com/nibVxzgekz— ANI (@ANI) March 25, 2023
ದಾವಣಗೆರೆಯಲ್ಲಿ ನಡೆಯಲಿದ್ದ ಬಿಜೆಪಿ ಸಮಾವೇಶದಲ್ಲಿ ಭಾಗವಹಿಸಲು ಬಸವರಾಜ ಕಟಗಿ ತೆರಳಿದ್ದರು. ಅವರ ಗ್ರಾಮದಿಂದ ಮೂರು ವಾಹನ ಮಾಡಲಾಗಿದ್ದು, ಒಂದರಲ್ಲಿ ಬಸವರಾಜ್ ಇದ್ದರು ಎಂದು ಗುಡ್ಲನೂರಿನಲ್ಲಿ ಗ್ರಾಮಸ್ಥರು ಹೇಳಿದ್ದಾರೆ. ಸದ್ಯದಲ್ಲೇ ಪ್ರಧಾನಿ ಮೋದಿಯವರೊಂದಿಗೆ ಛಾಯಾಚಿತ್ರ ತೆಗೆಯುವುದಾಗಿ ಬಸವರಾಜ ಗ್ರಾಮದ ಹಲವರಿಗೆ ಹೇಳಿದ್ದರು ಎನ್ನಲಾಗಿದೆ.
ಇದನ್ನೂ ಓದಿ: ದಾವಣಗೆರೆಯಲ್ಲಿ ಮೋದಿ ಭದ್ರತೆಯಲ್ಲಿ ಲೋಪ ಆಗಿಲ್ಲ: ಎಡಿಜಿಪಿ ಅಲೋಕ್ ಕುಮಾರ್
'ಬಸವರಾಜ ಬಿಜೆಪಿ ಪಕ್ಷದ ಕಾರ್ಯಕರ್ತ ಮತ್ತು ಪ್ರಧಾನಿ ಮೋದಿ ಅವರ ಕಟ್ಟಾ ಅಭಿಮಾನಿ. ಅವರು ಪ್ರಧಾನಿಯೊಂದಿಗೆ ಫೋಟೊ ತೆಗೆದುಕೊಳ್ಳುತ್ತೇನೆ ಎಂದು ಹೇಳಿದಾಗ ನಾವು ನಂಬಲಿಲ್ಲ. ಆದರೆ, ಆತ ಪ್ರಧಾನಿ ಬೆಂಗಾವಲು ಪಡೆಯತ್ತ ಓಡಿದಾಗ ನಾವು ಗಾಬರಿಗೊಂಡೆವು. ಅದೃಷ್ಟವಶಾತ್, ಅಲ್ಲಿ ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ ಮತ್ತು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ' ಎಂದು ಗ್ರಾಮಸ್ಥರು ಹೇಳಿದರು.
ಭದ್ರತಾ ಲೋಪ ಯತ್ನದಿಂದಾಗಿ ಬಸವರಾಜ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಧಾನಿ ಮೋದಿ ರೋಡ್ ಶೋ ವೇಳೆ ಪ್ರಧಾನಿ ಬೆಂಗಾವಲು ವಾಹನದತ್ತ ತೆರಳಲು ಮುಂದಾದ ಬಸವರಾಜನನ್ನು ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಮತ್ತು ಎಸ್‌ಪಿಜಿ ಸಿಬ್ಬಂದಿ ತಡೆದರು. ಕರ್ತವ್ಯದಲ್ಲಿದ್ದ ಪೊಲೀಸ್ ಪೇದೆಗಳು ಆತನನ್ನು ಕಾರ್ಯಕ್ರಮದ ಸ್ಥಳದಿಂದ ದೂರವಿರಿಸಿ ಸ್ಥಳೀಯ ಪೊಲೀಸ್ ಠಾಣೆಗೆ ಕರೆದೊಯ್ದಿದ್ದರು.
ಇದನ್ನೂ ಓದಿ: ದಾವಣಗೆರೆ: ಪ್ರಧಾನಿ ಮೋದಿ ರೋಡ್ ಶೋ ವೇಳೆ ಭದ್ರತಾ ಲೋಪ! ವಿಡಿಯೋ
'ಗ್ರಾಮದಲ್ಲಿ ಬಂಧನದ ಸುದ್ದಿ ಹರಡಿದ ನಂತರ, ಅವರ ಕುಟುಂಬಸ್ಥರು ಭಯಭೀತರಾದರು. ಭಾನುವಾರ ಬೆಳಿಗ್ಗೆ ತಮ್ಮ ಸಂಬಂಧಿಕರ ಮನೆಗೆ ಹೋಗಲು ನಿರ್ಧರಿಸಿದರು ಮತ್ತು ಅವರ ಮನೆಯಿಂದ ಹೊರಟರು. ಅನೇಕ ಬಿಜೆಪಿ ನಾಯಕರು ಮಧ್ಯಪ್ರವೇಶಿಸಿ ಯುವಕನ ವಿರುದ್ಧ ಯಾವುದೇ ಪ್ರಕರಣ ದಾಖಲಿಸದಂತೆ ನೋಡಿಕೊಂಡರು. ಈ ಬಗ್ಗೆ ಕುಟುಂಬ ಸದಸ್ಯರಿಗೆ ದೂರವಾಣಿ ಮೂಲಕ ವಿವರಿಸಿದರು' ಎಂದು ಗ್ರಾಮಸ್ಥರು ತಿಳಿಸಿದರು.