ಚುನಾವಣೆಯಲ್ಲಿ ಕ್ರಿಮಿನಲ್ ಗಳು ಸ್ಪರ್ಧಿಸಬಹುದಾದರೆ, ಕೈದಿಗಳಿಗೆ ಮತದಾನದ ಹಕ್ಕು ಏಕಿಲ್ಲ?

ಜೈಲಿನಲ್ಲಿರುವ ಕೈದಿಗಳಿಗೆ ಅವರ ಹಕ್ಕು ಚಲಾಯಿಸುವುದನ್ನು ನಿರ್ಬಂಧಿಸಲಾಗಿದೆ. ಆದರೆ ಕ್ರಿಮಿನಲ್ ಆರೋಪ ಎದುರಿಸುತ್ತಿರುವ ನಾಯಕರು ಜೈಲಿನಲ್ಲಿದ್ದರೂ ಸ್ಪರ್ಧಿಸಲು ಅವಕಾಶ ನೀಡಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಜೈಲಿನಲ್ಲಿರುವ ಕೈದಿಗಳಿಗೆ ಅವರ ಹಕ್ಕು ಚಲಾಯಿಸುವುದನ್ನು ನಿರ್ಬಂಧಿಸಲಾಗಿದೆ. ಆದರೆ ಕ್ರಿಮಿನಲ್ ಆರೋಪ ಎದುರಿಸುತ್ತಿರುವ ನಾಯಕರು ಜೈಲಿನಲ್ಲಿದ್ದರೂ ಸ್ಪರ್ಧಿಸಲು ಅವಕಾಶ ನೀಡಲಾಗಿದೆ.

ಪ್ರಸ್ತುತ ರಾಜ್ಯದ ಜೈಲುಗಳಲ್ಲಿರುವ 16,000ಕ್ಕೂ ಹೆಚ್ಚು ಕೈದಿಗಳು ಮತದಾನ ಮಾಡಲು ಸಾಧ್ಯವಾಗುತ್ತಿಲ್ಲ. ಪ್ರಜಾಪ್ರತಿನಿಧಿ ಕಾಯಿದೆ, 1951 ರ ಸೆಕ್ಷನ್ 62 (5) ರ ಪ್ರಕಾರ, “ಯಾವುದೇ ವ್ಯಕ್ತಿಯು ಬಂಧನಕ್ಕೊಳಗಾಗಿ ಜೈಲಿನಲ್ಲಿದ್ದರೆ, ಜೈಲು ಶಿಕ್ಷೆ ಅಥವಾ ಇನ್ನಾವುದೇ ರೀತಿಯಲ್ಲಿ ಕಾನೂನುಬದ್ಧ ಬಂಧನದಲ್ಲಿದ್ದರೆ ಅವರು ಚುನಾವಣೆಯಲ್ಲಿ ಮತ ಚಲಾಯಿಸುವಂತಿಲ್ಲ. ಆದರೆ ಜಾಮೀನಿನ ಮೇಲೆ ಇರುವವರಿಗೆ ಇದು ಅನ್ವಯಿಸುವುದಿಲ್ಲ.

"ವಿಚಾರಣಾಧೀನ ಕೈದಿಗಳು ಅಥವಾ ಅಪರಾಧಿಗಳಾಗಿರುವ ಕೈದಿಗಳು ಮತದಾನ ಮಾಡುವಂತಿಲ್ಲ. ಆದರೆ ಕ್ರಿಮಿನಲ್ ಆರೋಪ ಹೊತ್ತಿರುವ ವ್ಯಕ್ತಿಗಳು ಜೈಲಿನೊಳಗಿದ್ದರೂ ಚುನಾವಣೆಗೆ ಸ್ಪರ್ಧಿಸಬಹುದು" ಎಂದಿರುವ ಕರ್ನಾಟಕ ಕಾರಾಗೃಹ ಇಲಾಖೆಯ ಮಾಜಿ ಮುಖ್ಯಸ್ಥ ಡಾ.ಎಸ್.ಟಿ.ರಮೇಶ್ ಅವರು, ಅಂಚೆ ಮತದಾನದ ಆಯ್ಕೆಯನ್ನು ಕೈದಿಗಳಿಗೂ ವಿಸ್ತರಿಸಬಹುದು ಎಂದು ಅವರು ಹೇಳಿದ್ದಾರೆ.

ರಾಜ್ಯದಲ್ಲಿ 12,823 ವಿಚಾರಣಾಧೀನ ಕೈದಿಗಳು ಸೇರಿದಂತೆ 16,510 ಕೈದಿಗಳಿದ್ದಾರೆ. ಕೈದಿಗಳು ಮತದಾನ ಮಾಡಲು ಕಾನೂನಿಲ್ಲಿ ಅವಕಾಶ ಇಲ್ಲ. ಹೀಗಾಗಿ ಜೈಲುಗಳಲ್ಲಿ ಯಾವುದೇ ಮತದಾನದ ವ್ಯವಸ್ಥೆ ಮಾಡಿಲ್ಲ" ಎಂದು ಎಡಿಜಿಪಿ ಮನೀಶ್ ಖಾರ್ಬಿಕರ್ ಅವರು ತಿಳಿಸಿದ್ದಾರೆ.

ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಮಾತನಾಡಿ, ‘ಜೈಲಿಗೆ ಕಳುಹಿಸಿದರೂ ವ್ಯಕ್ತಿಯ ಶಾಸನಬದ್ಧ ಹಕ್ಕುಗಳು ಹಾಗೆಯೇ ಇರುತ್ತವೆ. ಆಹಾರ, ಆರೋಗ್ಯ, ಶಿಕ್ಷಣ ಮತ್ತು ಇತರ ಮೂಲಭೂತ ಸೌಲಭ್ಯಗಳನ್ನು ಅವರಿಗೆ ನೀಡಲಾಗುತ್ತದೆ ಎಂದಿದ್ದಾರೆ.

ಕರ್ನಾಟಕ ರಾಜ್ಯದ ಮಾಜಿ ಪ್ರಾಸಿಕ್ಯೂಟರ್ ಬಿಟಿ ವೆಂಕಟೇಶ್ ಮಾತನಾಡಿ, ಕಾರಾಗೃಹಗಳು "ಸುಧಾರಣಾಶೀಲ" ಸ್ವಭಾವದ ಹೊರತಾಗಿಯೂ ಚುನಾವಣಾ ಆಯೋಗ(ಇಸಿ) ಕೈದಿಗಳಿಗೆ ಮತದಾನದ ಅವಕಾಶ ನೀಡದಿರುವುದು ತಪ್ಪು. ಅವರಿಗೆ ಮತದಾನ ಮಾಡಲು ಏಕೆ ಅವಕಾಶ ನೀಡಬಾರದು? ಅವರು ಭಾರತದ ಪ್ರಜೆಗಳು ಎಂದು ಕೈದಿಗಳ ಮತದಾನದ ಮೇಲಿನ ನಿಷೇಧವನ್ನು ಪ್ರಶ್ನಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com