RSS ವ್ಯಕ್ತಿ ಶೆಟ್ಟರ್ ಪರ ಪ್ರಚಾರ, 'ನಿಮ್ಮಿಂದ ಇದನ್ನು ನಿರೀಕ್ಷಿಸಿರಲಿಲ್ಲ': ಸೋನಿಯಾ ಗಾಂಧಿ ವಿರುದ್ಧ ಒವೈಸಿ ವಾಗ್ದಾಳಿ
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಪರ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಪ್ರಚಾರ ಮಾಡಿರುವುದು ಖಂಡನೀಯ ಎಂದು AIMIM ಪಕ್ಷದ ಮುಖ್ಯಸ್ತ ಅಸಾದುದ್ದೀನ್ ಓವೈಸಿ, RSS ವ್ಯಕ್ತಿ ಶೆಟ್ಟರ್ ಪರ ಪ್ರಚಾರ ನಿಮ್ಮ ನಡೆ ಸರಿ ಇಲ್ಲ ಎಂದು ಕಿಡಿಕಾರಿದ್ದಾರೆ.
Published: 07th May 2023 04:08 PM | Last Updated: 08th May 2023 08:25 PM | A+A A-

ಒವೈಸಿ ಮತ್ತು ಸೋನಿಯಾ ಗಾಂಧಿ
ಹುಬ್ಬಳ್ಳಿ: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಪರ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಪ್ರಚಾರ ಮಾಡಿರುವುದು ಖಂಡನೀಯ ಎಂದು AIMIM ಪಕ್ಷದ ಮುಖ್ಯಸ್ತ ಅಸಾದುದ್ದೀನ್ ಓವೈಸಿ, RSS ವ್ಯಕ್ತಿ ಶೆಟ್ಟರ್ ಪರ ಪ್ರಚಾರ ನಿಮ್ಮ ನಡೆ ಸರಿ ಇಲ್ಲ ಎಂದು ಕಿಡಿಕಾರಿದ್ದಾರೆ.
ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಒವೈಸಿ RSS ಹಿನ್ನಲೆಯಿಂದ ಬಂದ ವ್ಯಕ್ತಿಯ ಪರ ಸೋನಿಯಾ ಗಾಂಧಿ ಅವರು ಪ್ರಚಾರ ಮಾಡಿರುವುದನ್ನು ಖಂಡಿಸಿದ್ದಾರೆ. ಈ ಕುರಿತು ಹುಬ್ಬಳ್ಳಿಯಲ್ಲಿ ಬಹಿರಂಗ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಓವೈಸಿ ಮೊದಲಿಗೆ ಕಾಂಗ್ರೆಸ್ ಪಕ್ಷ ಯಾವ ತರತ್ವ ಸಿದ್ದಾಂತದ ನಂಬಿಕೆ ಇಟ್ಟಿದೆ ಎಂಬುದನ್ನು ಖಚಿತಪಡಿಸಬೇಕು ಎಂದು ಅಗ್ರಹಿಸಿದ್ದಾರೆ.
Madam Sonia Gandhi ji, mujhe aapse ye ummid nahi thi ki aap ek @RSSorg ke aadmi ke liye campaign karne aayengi, Jagadish Shettar to RSS se hai. - Barrister @asadowaisi #Karnataka #hubli #OwaisiInKarnataka #KarnatakaAssemblyElection2023 #KarnatakaElections2023 pic.twitter.com/XxKFeHE57v
— AIMIM (@aimim_national) May 7, 2023
ಆರ್ಎಸ್ಎಸ್ ಹಿನ್ನೆಲೆಯಿಂದ ಬಂದ ಜಗದೀಶ್ ಶೆಟ್ಟರ್ ಪರ ಸೋನಿಯಾ ಗಾಂಧಿ ಪ್ರಚಾರ ಮಾಡುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ. ಇದೇನಾ ನಿಮ್ಮು ಸೆಕ್ಯೂಲರ್ ತತ್ವ ನೀತಿಗಳು ಮೋದಿ ವಿರುದ್ಧ ಹೋರಾಡುವುದು ಹೀಗೆಯೇನು?.. ಸೈದ್ಧಾಂತಿಕ ಹೋರಾಟದಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ವಿಫಲವಾಗಿರುವುದು ನಾಚಿಕೆಗೇಡಿನ ಸಂಗತಿ. ಅವರ ಪಕ್ಷದ ಗುಲಾಮರು ಹಾಗೂ ಜೋಕರ್ಗಳು ನನ್ನ ಮೇಲೆ ಆರೋಪ ಮಾಡುತ್ತಾರೆ. ಕಾಂಗ್ರೆಸ್ ಬಿಜೆಪಿಯ ಬಿ ಟೀಂ ರೀತಿ ವರ್ತಿಸುತ್ತಿದೆ ಮತ್ತು ನಮ್ಮ ಪಕ್ಷದ ಮೇಲೆ ಅವರ ಸದಸ್ಯರು ಆರೋಪ ಮಾಡುತ್ತಿದ್ದಾರೆ. ಇದೊಂದು ನಾಚಿಕೆಗೇಡಿನ ಸಂಗತಿ. ಕಾಂಗ್ರೆಸ್ ಸೈದ್ದಾಂತಿಕ ಹೋರಾಟದಲ್ಲಿ ವಿಫಲವಾಗಿದೆ ಎಂದು ಅಸಾದುದ್ದೀನ್ ಓವೈಸಿ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: 'ಆರ್ ಎಸ್ಎಸ್ ಚಡ್ಡಿ ಹಾಕಿಕೊಂಡು ಸಿಎಂ ಆಗಿದ್ದ ಶೆಟ್ಟರ್ ಕಾಂಗ್ರೆಸ್ ಸೇರಿದಾಕ್ಷಣ ಜಾತ್ಯಾತೀತವಾದಿಯಾದ್ರಾ?'
ಹುಬ್ಬಳ್ಳಿ–ಧಾರವಾಡ ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಜಗದೀಶ್ ಶೆಟ್ಟರ್ ಸ್ಪರ್ಧಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಇದೇ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದ ಶೆಟ್ಟರ್, ಈ ಬಾರಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದರು. ಶನಿವಾರ ಹುಬ್ಬಳ್ಳಿಯಲ್ಲಿ ನಡೆದ ಚುನಾವಣಾ ರ್‍ಯಾಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಾಯಕರಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಜೊತೆ ಶೆಟ್ಟರ್ ವೇದಿಕೆ ಹಂಚಿಕೊಂಡಿದ್ದರು.