ಸರ್ಕಾರ ರಜೆ ಘೋಷಿಸಿದ್ದರೂ ಬೆಂಗಳೂರಿನ ಜನ ಮತ ಹಾಕಿಲ್ಲ: ಶೋಭಾ ಕರಂದ್ಲಾಜೆ

ಪ್ರತಿಬಾರಿಯಂತೆ ಈ ಬಾರಿಯೂ ರಾಜಧಾನಿಯಲ್ಲಿ ಅತ್ಯಂತ ಕಡಿಮೆ ಮತದಾನವಾಗಿದ್ದು, ಬೆಂಗಳೂರಿನಲ್ಲಿ ಶೇ. 53 ರಷ್ಟು ಮಾತ್ರ ಮತದಾನವಾಗಿರುವುದು ಬೇಸರದ ಸಂಗತಿ ಎಂದು ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಅವರು ಗುರುವಾರ...
ಶೋಭಾ ಕರಂದ್ಲಾಜೆ
ಶೋಭಾ ಕರಂದ್ಲಾಜೆ

ಬೆಂಗಳೂರು: ಪ್ರತಿಬಾರಿಯಂತೆ ಈ ಬಾರಿಯೂ ರಾಜಧಾನಿಯಲ್ಲಿ ಅತ್ಯಂತ ಕಡಿಮೆ ಮತದಾನವಾಗಿದ್ದು, ಬೆಂಗಳೂರಿನಲ್ಲಿ ಶೇ. 53 ರಷ್ಟು ಮಾತ್ರ ಮತದಾನವಾಗಿರುವುದು ಬೇಸರದ ಸಂಗತಿ ಎಂದು ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಅವರು ಗುರುವಾರ ಹೇಳಿದ್ದಾರೆ.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವೆ, ಬೆಂಗಳೂರಿನಲ್ಲಿ ಶೇ. 53 ರಷ್ಟು ಮಾತ್ರ ಮತದಾನವಾಗಿರುವುದು ಬೇಸರದ ಸಂಗತಿ. ರಾಜ್ಯ ಸರ್ಕಾರ ರಜೆ ಘೋಷಣೆ ಮಾಡಿದ್ದರೂ ಜನ ಮತ ಹಾಕಿಲ್ಲ. ಮುಂದೆ ಆದರೂ ಬೆಂಗಳೂರಿನ ಜನ‌ ಮತ ಹಾಕಲು ಬರಲಿ ಎಂದಿದ್ದಾರೆ.

ಇದೇ ವೇಳೆ ಚುನಾವಣೋತ್ತರ ಸಮೀಕ್ಷೆಗಳ ಬಗ್ಗೆ ಪ್ರತಿಕ್ರಿಯಿಸಿದ ಶೋಭಾ ಕರಂದ್ಲಾಜೆ ಅವರು, ನಮ್ಮ ವರದಿ ಪ್ರಕಾರ ಬಿಜೆಪಿಗೆ 120-125 ಸ್ಥಾನ ಬರುತ್ತದೆ ಎಂದು ಕರಂದ್ಲಾಜೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸ್ವಂತ ಬಲದಲ್ಲಿ ನಾವೇ ಸರ್ಕಾರ ರಚನೆ ಮಾಡ್ತೇವೆ. ಜನ ಎಕ್ಸಿಟ್ ಪೋಲ್​​ ಸುಳ್ಳು ಮಾಡ್ತಾರೆಂದು ಮೊದಲೇ ಹೇಳಿದ್ದೆ. ಈಗಲೂ ನನಗೆ ಅದೇ ವಿಶ್ವಾಸವಿದೆ. ಬಿ.ಎಸ್​.ಯಡಿಯೂರಪ್ಪನವರ ವರದಿ ಯಾವತ್ತೂ ಸುಳ್ಳಾಗಿಲ್ಲ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com