
ಐಪಿಎಲ್ ವೀಕ್ಷಿಸುತ್ತಿರುವ ಸಿದ್ದರಾಮಯ್ಯ.
ಬೆಂಗಳೂರು: ರಾಜಕೀಯ ಜಂಜಾಟಗಳ ನಡುವೆಯೂ ರಾಜ್ಯದ ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯಅವರು ತಾವೊಬ್ಬ ಅಪ್ಪಟ ಕ್ರಿಕೆಟ್ ಅಭಿಮಾನಿ ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ.
ರಾಜಕೀಯ ಒತ್ತಡಗಳ ಬದಿಗೊತ್ತಿದ ಸಿದ್ದರಾಮಯ್ಯ ಅವರು, ನಿನ್ನೆ ಐಪಿಎಲ್ ಕ್ರಿಕೆಟ್ ಮ್ಯಾಚ್ ವೀಕ್ಷಣೆ ಮಾಡಿದರು.
ಸಿದ್ದರಾಮಯ್ಯ ಅವರು ಆರ್ಸಿಬಿ ಮ್ಯಾಚ್ ವೀಕ್ಷಿಸುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಿಎಲ್‍ಪಿ ಸಭೆ ಮುಗಿಸಿ ನಿವಾಸಕ್ಕೆ ಹೋದ ಬಳಿಕ ಸಿದ್ದರಾಮಯ್ಯ ಅವರು ಬೆಂಬಲಿಗರ ಜೊತೆ ಕೆಲಕಾಲ ಐಪಿಎಲ್ ಮ್ಯಾಚ್ ವೀಕ್ಷಿಸಿ ಎಂಜಾಯ್ ಮಾಡಿದರು. ಈ ಮೂಲಕ ರಿಲ್ಯಾಕ್ಸ್ ಮೂಡ್'ಗೆ ಜಾರಿದರು.
ಸಿದ್ದರಾಮಯ್ಯ ಅವರು ಈ ಹಿಂದೆಯೂ ಚುನಾವಣಾ ಪ್ರಚಾರಕ್ಕೆ ವಿರಾಮ ನೀಡಿ ಕ್ರೀಡಾಂಗಣದಲ್ಲಿ ಆಟ ನೋಡಿ ಆನಂದಿಸಿದ್ದರು.