ಮಳೆ: ಜಲಾವೃತಗೊಂಡ ಕೆಆರ್ ಸರ್ಕಲ್ ಅಂಡರ್ ಪಾಸ್ ನಲ್ಲಿ ಸಿಲುಕಿದ್ದ ಮಹಿಳೆ ಸಾವು: 5 ಲಕ್ಷ ಪರಿಹಾರ ಘೋಷಿಸಿದ ಸಿಎಂ
ಬೆಂಗಳೂರಿನಲ್ಲಿ ಕುಂಭದ್ರೋಣ ಮಳೆಯ ಪರಿಣಾಮ ಜಲಾವೃತಗೊಂಡ ಕೆಆರ್ ವೃತ್ತದಲ್ಲಿನ ಅಂಡರ್ ಪಾಸ್ ನಲ್ಲಿ ಸಿಲುಕಿ ತೀವ್ರ ಅಸ್ವಸ್ಥವಾಗಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
Published: 21st May 2023 06:00 PM | Last Updated: 21st May 2023 07:52 PM | A+A A-

ಜಲಾವೃತಗೊಂಡ ಕೆಆರ್ ವೃತ್ತದ ಅಂಡರ್ ಪಾಸ್
ಬೆಂಗಳೂರು: ಬೆಂಗಳೂರಿನಲ್ಲಿ ಕುಂಭದ್ರೋಣ ಮಳೆಯ ಪರಿಣಾಮ ಜಲಾವೃತಗೊಂಡ ಕೆಆರ್ ವೃತ್ತದಲ್ಲಿನ ಅಂಡರ್ ಪಾಸ್ ನಲ್ಲಿ ಸಿಲುಕಿ ತೀವ್ರ ಅಸ್ವಸ್ಥವಾಗಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಅಂಡರ್ ಪಾಸ್ ನಲ್ಲಿ ಮುಳುಗಡೆಯಾಗಿದ್ದ ಕಾರಿನಲ್ಲಿ ನಾಲ್ವರನ್ನು ರಕ್ಷಣೆ ಮಾಡಲಾಗಿತ್ತು, ಘಟನೆಯಲ್ಲಿ ಮಗು ಕಾಣೆಯಾಗಿದ್ದು ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಧಾರಾಕಾರ ಮಳೆ; ಜಲಾವೃತಗೊಂಡ ಕೆ ಆರ್ ಸರ್ಕಲ್ ಅಂಡರ್ ಪಾಸ್ ನಲ್ಲಿ ಸಿಲುಕಿದ ಕಾರು- 4 ರಕ್ಷಣೆ, ಮಹಿಳೆ ಅಸ್ವಸ್ಥ
ಈ ನಡುವೆ ಅಸ್ವಸ್ಥಗೊಂಡಿದ್ದ ಮಹಿಳೆ ಭಾನುರೇಖಾ ಅವರು ಸೇಂಟ್ ಮಾರ್ಥಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಸಿಎಂ ಸಿದ್ದರಾಮಯ್ಯ ಸೇಂಟ್ ಮಾರ್ಥಾಸ್ ಗೆ ಭೇಟಿ ನೀಡಿದ್ದು, ಮಹಿಳೆ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ. ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ ತೋರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುವುದು ಎಂದು ಸಿಎಂ ಹೇಳಿದ್ದಾರೆ.
ಮೃತ ಮಹಿಳೆ ಕುಟುಂಬದವರು ಬೆಂಗಳೂರು ನೋಡಲು ವಿಜಯವಾಡದಿಂದ ಆಗಮಿಸಿದ್ದರು. ಇನ್ನು ಮಳೆಯ ಅವಾಂತರಕ್ಕೆ ಚಿಕ್ಕಮಗಳೂರಿನ ಮೂಡಿಗೆರೆಯ ಚಿಕ್ಕಳ್ಳ ಬಳಿ ಓರ್ವ ಬೈಕ್ ಸವಾರ ಬೃಹತ್ ಮರ ಬಿದ್ದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ನಗರದಲ್ಲಿ ಧಾರಾಕಾರ ಮಹಿಳೆಯ ಪರಿಣಾಮ ಮಹಾಲಕ್ಷ್ಮಿ ಲೇಔಟ್ ನಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ವಾಹನಗಳು ಮುಳುಗಡೆಯಾಗಿ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.