ಕಾಂಗ್ರೆಸ್ ಗ್ಯಾರಂಟಿ: ಮಹಿಳೆಯರ ಸಬಲೀಕರಣಕ್ಕೆ ನೆರವಾಗಲಿದೆ 'ಗೃಹ ಲಕ್ಷ್ಮಿ' ಯೋಜನೆ

ರಾಜ್ಯದ ಒಟ್ಟು ಮತದಾರಲ್ಲಿ ಶೇ.50ರಷ್ಟು ಮಹಿಳಾ ಮಣಿಯರಿದ್ದು, ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಘೋಷಿಸಿದ ಗೃಹ ಲಕ್ಷ್ಮೀ ಯೋಜನೆ ಮಹಿಳಾ ಮಣಿಯರ ಮನ ಗೆದ್ದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದ ಒಟ್ಟು ಮತದಾರಲ್ಲಿ ಶೇ.50ರಷ್ಟು ಮಹಿಳಾ ಮಣಿಯರಿದ್ದು, ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಘೋಷಿಸಿದ ಗೃಹ ಲಕ್ಷ್ಮೀ ಯೋಜನೆ ಮಹಿಳಾ ಮಣಿಯರ ಮನ ಗೆದ್ದಿದೆ.

ಯೋಜನೆಯಡಿ, ರಾಜ್ಯ ಸರ್ಕಾರವು ಪ್ರತಿ ಮನೆಯ ಮಹಿಳೆಯೊಬ್ಬರಿಗೆ ತಿಂಗಳಿಗೆ 2,000 ರೂಪಾಯಿಗಳ ಆರ್ಥಿಕ ನೆರವನ್ನು ನೀಡುತ್ತದೆ. ಆಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ಯೋಜನೆಯು ಮಹಿಳೆಯರ ಮನಗೆಲ್ಲಲು ಸಹಾಯ ಮಾಡಿತ್ತು.  ಆದರೆ, ಯೋಜನೆ ಒಮ್ಮೆ ನೀಡಿ ಸುಮ್ಮನಾಗುವಂತಹ ಯೋಜನೆಯಲ್ಲ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರುವವರೆಗೂ ಅಂದರೆ, ಮುಂದಿನ 5 ವರ್ಷಗಳ ವರೆಗೂ ಮಹಿಳೆಯರಿಗೆ ನೆರವು ನೀಡಬೇಕಿರುವುದರಿಂದ ಸರ್ಕಾರಕ್ಕೆ ಈ ಯೋಜನೆ ದೊಡ್ಡ ಸವಾಲಾಗಿ ಪರಿಣಮಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, ಯೋಜನೆ ಒಂದು ಬಾರಿ ಹಣ ನೀಡಿ ಸುಮ್ಮನಾಗುವಂತಹ ಯೋಜನೆಯಲ್ಲ. ಯೋಜನೆಯಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಭಾರೀ ಹೊರೆಯಾಗಲಿದೆ ಎಂದು ಹೇಳಿದ್ದಾರೆ.

ಗ್ರಾಮೀಣ ಮತ್ತು ಅರೆ ನಗರ ಪ್ರದೇಶಗಳಲ್ಲಿನ ಮಹಿಳೆಯರಿಗೆ ಪ್ರತೀ ತಿಂಗಳು ರೂ.2000 ನೀಡಲು ಸರ್ಕಾರ ಬದ್ಧವಾಗಿದೆ. ಆದರೆ, ಯೋಜನೆಗೆ ಅರ್ಹರಾಗುವವರನ್ನು ಗುರ್ತಿಸುವುದು ಸವಾಲಾಗಿ ಪರಿಣಮಿಸಲಿದೆ. ಯೋಜನೆ ಸಂಬಂಧ ವಿವರವಾದ ಮಾರ್ಗಸೂಚಿಗಳನ್ನು ಹೊರಡಿಸಿದರೆ ಮಾತ್ರ ಸ್ಪಷ್ಟತೆಗಳು ಸಿಗಲಿದೆ. ಈ ಯೋಜನೆಯು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸಹಾಯ ಮಾಡಲಿದೆ. ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಆಧಾರ್ ಸಂಖ್ಯೆಗೆ ಲಿಂಕ್ ಮಾಡಲಾದ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಮೊತ್ತವನ್ನು ಕಳುಹಿಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com