ರಾಜ್ಯದಲ್ಲಿ ಧಾರಾಕಾರ ಮಳೆ; ಸಿಡಿಲು ಬಡಿದು ಬಾಲಕ, ಮೈಸೂರಿನಲ್ಲಿ ಮೂವರು ಸೇರಿ ಐವರು ಸಾವು

ರಾಜ್ಯದ ವಿವಿಧೆಡೆ ಭಾನುವಾರ ಭಾರಿ ಮಳೆಯಾಗಿದ್ದು, ತೀವ್ರ ಅವಘಡ ಸಂಭವಿಸಿದೆ. ಬೆಂಗಳೂರಿನ ಕೆಆರ್ ಸರ್ಕಲ್‌ನಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದು, ರಾಜ್ಯದ ವಿವಿಧೆಡೆ ಹಲವು ಮಂದಿ ಮಳೆಯಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯದ ವಿವಿಧೆಡೆ ಭಾನುವಾರ ಭಾರಿ ಮಳೆಯಾಗಿದ್ದು, ತೀವ್ರ ಅವಘಡ ಸಂಭವಿಸಿದೆ. ಬೆಂಗಳೂರಿನ ಕೆಆರ್ ಸರ್ಕಲ್‌ನಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದು, ರಾಜ್ಯದ ವಿವಿಧೆಡೆ ಹಲವು ಮಂದಿ ಮಳೆಯಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ.

ಮೈಸೂರು ಜಿಲ್ಲೆಯಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಿದ್ದು, ಸಿಡಿಲು ಬಡಿದು ಹಾಗೂ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಇಬ್ಬರು ರೈತರು ಮೃತಪಟ್ಟಿದ್ದಾರೆ.

ಹುಣಸೂರು ತಾಲ್ಲೂಕಿನ ಮಂಟಿಕೊಪ್ಪಲು ಗ್ರಾಮದ ಜಮೀನಿನಲ್ಲಿ ಶನಿವಾರ ರಾತ್ರಿ ಸಿಡಿಲು ಬಡಿದು ಗ್ರಾಮದ ನಿವಾಸಿ ಹರೀಶ್ (42) ಮೃತಪಟ್ಟಿದ್ದಾರೆ. ಪಿರಿಯಾಪಟ್ಟಣ ತಾಲ್ಲೂಕಿನ ಅವರ್ತಿ ಗ್ರಾಮದ ಲೋಕೇಶ್ (55) ಜಮೀನಿನಲ್ಲಿ ಕೆಲಸಮಾಡುತ್ತಿದ್ದಾಗ ಸಿಡಿಲು ಬಡಿದು ಭಾನುವಾರ ಸಂಜೆ ಮೃತಪಟ್ಟಿದ್ದಾರೆ.

ಬೆಟ್ಟದಪುರ ಸಮೀಪದ ಬಾರಸೆ ಗ್ರಾಮದ ಜಮೀನಿನಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಕೆ. ದೊಡ್ಡಕೊಪ್ಪಲು ಗ್ರಾಮದ ಸ್ವಾಮಿ (18) ಎಂಬುವವರು ಮೃತಪಟ್ಟಿದ್ದಾರೆ. ಜೋರು ಮಳೆ-ಗಾಳಿಯಿಂದಾಗಿ ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು. ಉಳುಮೆ ಮಾಡುವಾಗ ತಂತಿಯನ್ನು ತುಳಿದು ಮೃತಪಟ್ಟಿದ್ದಾರೆ.

ಸಿಡಿಲು ಬಡಿದು ಬಾಲಕ ಸಾವು

ಕೊಪ್ಪಳ ತಾಲ್ಲೂಕಿನ ಶಿವಪುರ ಗ್ರಾಮದಲ್ಲಿ ಶ್ರೀಕಾಂತ್ ಮೇಟಿ (16) ಎಂಬುವವರಿಗೆ ಸಿಡಿಲು ಬಡಿದು ಭಾನುವಾರ ಮೃತಪಟ್ಟಿದ್ದಾರೆ.

ಮರ ಬಿದ್ದು ಬೈಕ್ ಸವಾರ ಸಾವು

ಮೂಡಿಗೆರೆ ಬಳಿ ಚಿಕ್ಕಳ್ಳ– ಹಳ್ಳದಗಂಡಿ ಮಾರ್ಗದಲ್ಲಿ ಮಳೆ ಗಾಳಿಗೆ ಮರವೊಂದು ದ್ವಿಚಕ್ರವಾಹನದ ಮೇಲೆ ಬಿದ್ದು ಸವಾರ ವೇಣುಗೋ ಪಾಲ್ (60) ಸಾವಿಗೀಡಾಗಿದ್ದಾರೆ. ಸಂಜೆ ವೇಣುಗೋಪಾಲ್ ಮೂಡಿಗೆರೆಯಿಂದ ಹಳ್ಳದಗುಂಡಿಗೆ ಸಾಗುವಾಗ ಅವಘಡ ಸಂಭವಿಸಿದೆ. ವೇಣುಗೋಪಾಲ್ ಸ್ಥಳದಲ್ಲೇ ಸಾವಿಗೀಡಾಗಿದ್ದು, ವಾಹನ ಜಖಂಗೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com