ವರ್ಲ್ಡ್ ಫೇಮಸ್ ಆದ ಬೆಂಗಳೂರು ಟ್ರಾಫಿಕ್ ಜಾಮ್; ಬಸ್ ನಲ್ಲೇ ಊಟ ಮುಗಿಸಿದ BMTC ಚಾಲಕ, ವಿಡಿಯೋ ವೈರಲ್!

ಟ್ರಾಫಿಕ್ ಜಾಮ್​​ನಲ್ಲಿ ಸಿಲುಕಿ ಪ್ರಯಾಣ ಮುಂದುವರಿಸಲು ಕಾಯುತ್ತಿದ್ದ ಸಂದರ್ಭದಲ್ಲಿ ಬಿಎಂಟಿಸಿ ಬಸ್ ಚಾಲಕರೊಬ್ಬರು ಚಾಲಕರ ಆಸನದಲ್ಲಿಯೇ ಊಟ ಮುಗಿಸಿದ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.
ವರ್ಲ್ಡ್ ಫೇಮಸ್ ಆದ ಬೆಂಗಳೂರು ಟ್ರಾಫಿಕ್ ಜಾಮ್; ಬಸ್ ನಲ್ಲೇ ಊಟ ಮುಗಿಸಿದ BMTC ಚಾಲಕ, ವಿಡಿಯೋ ವೈರಲ್!

ಬೆಂಗಳೂರು: ಟ್ರಾಫಿಕ್ ಜಾಮ್​​ನಲ್ಲಿ ಸಿಲುಕಿ ಪ್ರಯಾಣ ಮುಂದುವರಿಸಲು ಕಾಯುತ್ತಿದ್ದ ಸಂದರ್ಭದಲ್ಲಿ ಬಿಎಂಟಿಸಿ ಬಸ್ ಚಾಲಕರೊಬ್ಬರು ಚಾಲಕರ ಆಸನದಲ್ಲಿಯೇ ಊಟ ಮುಗಿಸಿದ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.

ಬೆಂಗಳೂರಿನ ಟ್ರಾಫಿಕ್ ಕುಖ್ಯಾತಿ ಎಷ್ಟಿದೆ ಎಂದರೆ ಈಗಾಗಲೇ ಬೆಂಗಳೂರು ಟ್ರಾಫಿಕ್ ಜಾಮ್ ಕುರಿತು ಸಾಕಷ್ಟು ಮೀಮ್ ಗಳು, ಜೋಕ್ ಗಳು, ಶಾರ್ಟ್ ಸ್ಟೋರಿ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಹುಡುಗನೋರ್ವ ಬೆಂಗಳೂರು ಟ್ರಾಫಿಕ್ ನಲ್ಲಿ ಯುವತಿಯೊಬ್ಬಳನ್ನು ನೋಡಿ ಆಕೆಯನ್ನು ಅಲ್ಲೇ ಪ್ರೀತಿ, ಮದುವೆಯಾಗಿ ಮಕ್ಕಳಾದರೂ ಟ್ರಾಫಿಕ್ ಮಾತ್ರ ಕ್ಲಿಯರ್ ಆಗಿರಲಿಲ್ಲ ಎಂಬ ಜೋಕ್ ಗಳು ಈಗಾಗಲೇ ಸಾಕಷ್ಟು ಖ್ಯಾತಿ ಪಡೆದಿವೆ.

ಈ ಪಟ್ಟಿಗೆ ಇದೀಗ ಮತ್ತೊಂದು ವಿಡಿಯೋ ಸೇರ್ಪಡೆಯಾಗಿದ್ದು ಟ್ರಾಫಿಕ್ ಜಾಮ್​​ನಲ್ಲಿ ಸಿಲುಕಿ ಪ್ರಯಾಣ ಮುಂದುವರಿಸಲು ಕಾಯುತ್ತಿದ್ದ ಸಂದರ್ಭದಲ್ಲಿ ಬಿಎಂಟಿಸಿ ಬಸ್ ಚಾಲಕರೊಬ್ಬರು ಚಾಲಕರ ಆಸನದಲ್ಲಿಯೇ ಊಟ ಮುಗಿಸಿದ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.

ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ಸೆರೆಹಿಡಿದ ವಿಡಿಯೋವನ್ನು ಸಾಯಿಚಂದ್ ಶಬರೀಶ್ ಎಂಬ ವ್ಯಕ್ತಿ ಇನ್‌ಸ್ಟಾಗ್ರಾಮ್​​ನಲ್ಲಿ ಅಪ್‌ಲೋಡ್ ಮಾಡಿದ್ದು, ಮೇ 2 ರಂದು ‘ಬೆಂಗಳೂರಿನ ಪೀಕ್ ಟ್ರಾಫಿಕ್ ಮೊಮೆಂಟ್’ ಎಂಬ ಶೀರ್ಷಿಕೆಯೊಂದಿಗೆ ಅಪ್‌ಲೋಡ್ ಮಾಡಲಾದ ವೀಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ.

ಇದಕ್ಕೆ ಹಲವಾರು ನೆಟಿಜನ್‌ಗಳು ಪ್ರತಿಕ್ರಿಯಿಸಿದ್ದು, ಬೆಂಗಳೂರು ಟ್ರಾಫಿಕ್‌ನಲ್ಲಿ ತಾವು ಪಟ್ಟ ಪಾಡನ್ನು ವಿವರಿಸಿದ್ದಾರೆ ಮತ್ತು ಅನೇಕರು ಚಾಲಕನ ಸ್ಥಿತಿಯ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದ್ದಾರೆ. ಇದು ದುಃಖಕರವಾಗಿದೆ. ಟ್ರಾಫಿಕ್‌ನಿಂದಾಗಿ ಚಾಲಕನಿಗೆ ಶಾಂತಿಯುತವಾಗಿ ಕುಳಿತು ಊಟ ಮಾಡಲು ಸಹ ಸಮಯವಿಲ್ಲ ಎಂದು ವ್ಯಕ್ತಿಯೊಬ್ಬರು ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದಾರೆ. ಮತ್ತೋರ್ವ ವ್ಯಕ್ತಿ ‘ಅವರು ಸಮಯ ನಿರ್ವಹಣೆಯನ್ನು ಬೇರೆಯವರಿಗಿಂತ ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ’ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನು ಡಚ್ ಲೊಕೇಶನ್ ಟೆಕ್ನಾಲಜಿ ಸಂಸ್ಥೆಯಾದ TomTom 2023 ರ ಫೆಬ್ರವರಿಯಲ್ಲಿ ನಡೆಸಿದ್ದ ಅಧ್ಯಯನದ ಪ್ರಕಾರ, ಬೆಂಗಳೂರನಲ್ಲಿ ವಾಹನ ಚಾಲಕರು ವರ್ಷಕ್ಕೆ ಸರಾಸರಿ 260 ಗಂಟೆಗಳ ಕಾಲ ನಗರದಲ್ಲಿ ಚಾಲನೆ ಅಥವಾ ಪ್ರಯಾಣ ಮಾಡಿದರೆ ಈ ಪೈಕಿ 134 ಗಂಟೆಗಳ ಕಾಲ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿರುತ್ತಾರೆ ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com