ಬೆಳ್ಳಂದೂರು ರಸ್ತೆ-ಕಾರ್ಮೆಲರಾಮ್ ಜೋಡಿ ಹಳಿ ರೈಲ್ವೆ ಮಾರ್ಗ ಮಾರ್ಚ್ 2024 ಕ್ಕೆ ಪೂರ್ಣ

ಬೈಯ್ಯಪ್ಪನಹಳ್ಳಿಯಿಂದ ಹೊಸೂರು ವರೆಗಿನ 48 ಕಿ.ಮೀ ವ್ಯಾಪ್ತಿಯ ಜೋಡಿ ಹಳಿ ರೈಲ್ವೆ ಮಾರ್ಗ ಈ ಪ್ರದೇಶದಲ್ಲಿ ಸಂಚರಿಸುವವರಿಗೆ ದೊಡ್ಡ ಉಪಶಮನ ನೀಡಲಿದೆ.
ಬೆಳ್ಳಂದೂರು ಮಾರ್ಗದಲ್ಲಿನ ರೈಲ್ವೆ ಹಳಿ (ಸಂಗ್ರಹ ಚಿತ್ರ)
ಬೆಳ್ಳಂದೂರು ಮಾರ್ಗದಲ್ಲಿನ ರೈಲ್ವೆ ಹಳಿ (ಸಂಗ್ರಹ ಚಿತ್ರ)

ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿಯಲ್ಲಿ ಉದ್ಯೋಗ ಮಾಡುವ ನೌಕರರು ಆರ್ ವಿ ರಸ್ತೆಯಿಂದ ಬೊಮ್ಮಸಂದ್ರದವರೆಗಿನ ಮೆಟ್ರೋ ಮಾರ್ಗದ ಉದ್ಘಾಟನೆಯನ್ನು ಎದುರು ನೋಡುತ್ತಿದ್ದರೆ, ಇತ್ತ ಬೈಯ್ಯಪ್ಪನಹಳ್ಳಿಯಿಂದ ಹೊಸೂರು ವರೆಗಿನ 48 ಕಿ.ಮೀ ವ್ಯಾಪ್ತಿಯ ಜೋಡಿ ಹಳಿ ರೈಲ್ವೆ ಮಾರ್ಗ ಈ ಪ್ರದೇಶದಲ್ಲಿ ಸಂಚರಿಸುವವರಿಗೆ ದೊಡ್ಡ ಉಪಶಮನ ನೀಡಲಿದೆ. 

ಚಂದಾಪುರ ಸುತ್ತಮುತ್ತಲ ಪ್ರದೇಶದಲ್ಲಿನ ಹೀಲಳಿಗೆ ರೈಲ್ವೆ ನಿಲ್ದಾಣ ಎಲೆಕ್ಟ್ರಾನಿಕ್ ಸಿಟಿ-2 ನಿಂದ 3 ಕಿ.ಮೀ ಹಾಗೂ ಎಲೆಕ್ಟ್ರಾನಿಕ್ ಸಿಟಿ-1 ರಿಂದ 5 ಕಿ.ಮೀ ದೂರದಲ್ಲಿದೆ.

ಸುಮಾರು 498.73 ಕೋಟಿ ರೂಪಾಯಿ ವೆಚ್ಚದಲ್ಲಿ ನಡೆಯುತ್ತಿರುವ ಈ ಜೋಡಿ ಹಳಿ ರೈಲ್ವೆ ಮಾರ್ಗ ಬೈಯ್ಯಪ್ಪನಹಳ್ಳಿಯಿಂದ ಪ್ರಾರಂಭಗೊಂಡು, ಬೆಳ್ಳಂದೂರು ರಸ್ತೆ, ಕಾರ್ಮೆಲರಾಮ್, ಹುಸ್ಕೂರು, ಹೀಲಳಿಗೆ, ಆನೇಕಲ್, ಮಾರನಾಯಕನಹಳ್ಳಿ ಮಾರ್ಗವಾಗಿರಲಿದ್ದು ಹೊಸೂರು ಬಳಿ ಪೂರ್ಣಗೊಳ್ಳುತ್ತದೆ ಎಂದು ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ಧಿ ಉದ್ಯಮಗಳ ನಿರ್ದೇಶಕ (ಕೆ-ರೈಡ್) ಆರ್ ಕೆ ಸಿಂಗ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಕಾರ್ಮೆಲರಾಮ್ ನಿಂದ ಹೀಲಳಿಗೆ ನಿಲ್ದಾಣಗಳ 10.5 ಕಿ.ಮೀ ವ್ಯಾಪ್ತಿಯ ಜೋಡಿ ಹಳಿ ರೈಲು ಮಾರ್ಗ ಈಗಾಗಲೇ ಕಾರ್ಯಾಚರಣೆ ಆರಂಭ ಮಾಡಿದೆ. ಈ ಆರ್ಥಿಕ ವರ್ಷದ ಅಂತ್ಯದ ವೇಳೆಗೆ, ಬೆಳ್ಳಂದೂರು- ಕಾರ್ಮೆಲರಾಮ್ ನಡುವಿನ 3.5 ಕಿ.ಮೀ ಮಾರ್ಗ ಕಾರ್ಯನಿರ್ವಹಿಸಲಿದೆ. ಇದೇ ವೇಳೆ ಆನೇಕಲ್-ಮಾರನಾಯಕನಹಳ್ಳಿ ನಡುವಿನ ಮಾರ್ಗವೂ ಕಾರ್ಯಾರಂಭ ಮಾಡಲಿದೆ ಎಂದು ರೈಲ್ವೆ ಅಧಿಕಾರಿ ತಿಳಿಸಿದ್ದಾರೆ. 

“ಬೆಳ್ಳಂದೂರು ರಸ್ತೆಯಲ್ಲಿರುವ ಏಕ ರೈಲು ಹಳಿಯನ್ನು ಈಗ ಇನ್ನೂ ನಾಲ್ಕು ಹಳಿಗಳೊಂದಿಗೆ ಹೆಚ್ಚಿಸಲಾಗುತ್ತಿದೆ, ಆ ಮೂಲಕ ಇಲ್ಲಿ 5 ಹಳಿಗಳನ್ನು ಹೊಂದಲು ನಮಗೆ ಅವಕಾಶ ಮಾಡಿಕೊಟ್ಟಿದೆ. ಕರ್ಮೇಲರಂ ಮತ್ತು ಹೀಲಲಿಗೆ ನಡುವೆ ಹುಸ್ಕೂರಿನಲ್ಲಿ ಹೊಸ ನಿಲ್ದಾಣವನ್ನು ಸಹ ರಚಿಸಲಾಗುತ್ತಿದೆ. ಇವೆಲ್ಲವೂ ಹೆಚ್ಚಿನ ರೈಲುಗಳಿಗೆ ಚಾಲನೆ ನೀಡಲು ಮೂಲಸೌಕರ್ಯಗಳನ್ನು ನವೀಕರಿಸುವ ಕ್ರಮಗಳಾಗಿವೆ.

SWR ಈಗ ಬೆಂಗಳೂರು ಕಂಟೋನ್ಮೆಂಟ್‌ನಲ್ಲಿ ನಾಲ್ಕು ಹೊಸ ಪ್ಲಾಟ್ ಫಾರ್ಮ್ ಗಳನ್ನು ಸಹ ನಿರ್ಮಿಸಿದೆ. "ಇಂತಹ ಮೂಲಸೌಕರ್ಯಗಳೊಂದಿಗೆ, SWR ಮಾರ್ಚ್ 2024 ರಿಂದ ಕಂಟೋನ್ಮೆಂಟ್‌ನಿಂದ ಹೀಲಲಿಗೆ ಕಡೆಗೆ ಪ್ರತಿ 30 ನಿಮಿಷಗಳಿಗೊಮ್ಮೆ ರೈಲನ್ನು ಆರಂಭಿಸಬಹುದಾಗಿದೆ. ಈ ಟ್ರಿಪ್‌ಗಳನ್ನು ಚಲಾಯಿಸಲು ಎರಡು ಹೊಸ MEMU 8-ಕೋಚ್ ರೈಲುಗಳನ್ನು ಸಿದ್ಧಪಡಿಸಬೇಕಾಗಿದೆ."

ಡಬ್ಲಿಂಗ್ ಯೋಜನೆಗೆ ಸಂಬಂಧಿಸಿದಂತೆ ಬೈಯಪ್ಪನಹಳ್ಳಿ ಮತ್ತು ವೈಟ್‌ಫೀಲ್ಡ್ ನಡುವಿನ ಸೇತುವೆಯ ಕೆಳಗಿರುವ ರಸ್ತೆಯನ್ನು ಸಹ ವಿಸ್ತರಿಸಲಾಗುತ್ತಿದೆ. ನಗರ ಸಾರಿಗೆ ತಜ್ಞ ಸಂಜೀವ್ ದ್ಯಾಮ್ಮನವರ್ ಮಾತನಾಡಿ, “ಕಂಟೋನ್ಮೆಂಟ್ ಮತ್ತು ವೈಟ್‌ಫೀಲ್ಡ್ ನಡುವಿನ ಚತುಷ್ಪಥ ಯೋಜನೆ ಮತ್ತು ಈ ದ್ವಿಗುಣಗೊಳಿಸುವ ಯೋಜನೆಯು ಒಟ್ಟಾಗಿ ಜನರ ಪ್ರಯಾಣದಲ್ಲಿ ದೊಡ್ಡ ಬದಲಾವಣೆಯನ್ನು ಉಂಟುಮಾಡಬಹುದು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com