ತೆರಿಗೆ ವಂಚನೆ ಆರೋಪ: ಡ್ರೈಫ್ರೂಟ್ಸ್ ಮಳಿಗೆ, ಫುಡ್ ಇಂಡಸ್ಟ್ರಿ ಮೇಲೆ ಐಟಿ ದಾಳಿ

ತೆರಿಗೆ ವಂಚನೆ ಮಾಡಿದ ಆರೋಪದ ಮೇಲೆ ಬೆಂಗಳೂರಿನ ಫುಡ್ ಇಂಡಸ್ಟ್ರಿ ಮತ್ತು ಆಹಾರ ಉತ್ಪಾದನಾ ಘಟಕಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ. ರಾಜಾಜಿನಗರ, ಬಿವಿಕೆ ಅಯ್ಯಂಗಾರ್ ರಸ್ತೆಯಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಫುಡ್ ಇಂಡಸ್ಟ್ರಿ ಮೇಲೆ ಐಟಿ ದಾಳಿ
ಫುಡ್ ಇಂಡಸ್ಟ್ರಿ ಮೇಲೆ ಐಟಿ ದಾಳಿ
Updated on

ಬೆಂಗಳೂರು: ತೆರಿಗೆ ವಂಚನೆ ಮಾಡಿದ ಆರೋಪದ ಮೇಲೆ ಬೆಂಗಳೂರಿನ ಫುಡ್ ಇಂಡಸ್ಟ್ರಿ ಮತ್ತು ಆಹಾರ ಉತ್ಪಾದನಾ ಘಟಕಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ. ರಾಜಾಜಿನಗರ, ಬಿವಿಕೆ ಅಯ್ಯಂಗಾರ್ ರಸ್ತೆಯಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಡ್ರೈ ಫ್ರೂಟ್ಸ್ ವ್ಯಾಪಾರಿಗಳ ಅಂಗಡಿ ಹಾಗೂ ಮನೆಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಪರಿಶೀಲನೆ ಮಾಡುತ್ತಿದ್ದಾರೆ. ಇತ್ತೀಚಿಗೆ ಗುತ್ತಿಗೆದಾರರು, ಜ್ಯುವೆಲ್ಲರಿ ಮಾಲೀಕರ ಮನೆ ಹಾಗೂ ಕಚೇರಿಗಳ ಮೇಲೆ ಐಟಿ ದಾಳಿ ನಡೆಸಿತ್ತು. ಇದೀಗ ಫುಡ್ ಇಂಡಸ್ಟ್ರಿ ಮೇಲೆ ದಾಳಿ ನಡೆಸಲಾಗಿದೆ. ಡ್ರೈಫ್ರೂಟ್ಸ್ ಕಾರ್ಖಾನೆ ಹಾಗೂ ಸ್ಟೋರ್‌ಗಳ ಮೇಲೆ ಐಟಿ ದಾಳಿ ನಡೆಸಿದ್ದು, ಇಂದು ನಗರದ ಎರಡು ಕಡೆ ದಾಳಿ ಮಾಡಿದೆ.

ಹತ್ತಕ್ಕೂ ಹೆಚ್ಚು ವಾಹನಗಳಲ್ಲಿ ಬಂದ ಐಟಿ ಅಧಿಕಾರಿಗಳು ರಾಜಾಜಿನಗರ ಇಂಡಸ್ಟ್ರಿಯಲ್ ಎಸ್ಟೇಟ್ ಹಾಗೂ ಬಿವಿಕೆ ಅಯ್ಯಂಗಾರ್ ರಸ್ತೆ ಬಳಿ ದಾಳಿ ನಡೆಸಿದ್ದಾರೆ. ಪಿಎಸ್ ಆಗ್ರೋ ಫುಡ್ ಎಲ್‌ಎಲ್‌ಪಿ ಕಾರ್ಖಾನೆ ಹಾಗೂ ಮಾಣಕ್ ಮೇವಾ ಡ್ರೈಫ್ರೂಟ್ಸ್ ಸ್ಟೋರ್ ಮೇಲೆ ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com