ಬೆಂಗಳೂರಿನಲ್ಲಿ ಗ್ಲೋಬಲ್ ಡಿಸೈನ್ ಸೆಂಟರ್ ಪ್ರಾರಂಭಿಸಿದ ಸೆಮಿಕಂಡಕ್ಟರ್ ಸಂಸ್ಥೆ ಎಎಂಡಿ

ಸೆಮಿಕಂಡಕ್ಟರ್ ಸಂಸ್ಥೆ ಎಎಂಡಿ ಮಂಗಳವಾರ (ನ.28) ರಂದು ಬೆಂಗಳೂರಿನಲ್ಲಿ ತನ್ನ ಗ್ಲೋಬಲ್ ಡಿಸೈನ್ ಸೆಂಟರ್ ಗೆ ಚಾಲನೆ ನೀಡಿದೆ. 
ಎಎಂಡಿ  ಡಿಸೈನ್ ಸೆಂಟರ್ ಉದ್ಘಾಟನೆ
ಎಎಂಡಿ ಡಿಸೈನ್ ಸೆಂಟರ್ ಉದ್ಘಾಟನೆ

ಬೆಂಗಳೂರು: ಸೆಮಿಕಂಡಕ್ಟರ್ ಸಂಸ್ಥೆ ಎಎಂಡಿ ಮಂಗಳವಾರ (ನ.28) ರಂದು ಬೆಂಗಳೂರಿನಲ್ಲಿ ತನ್ನ ಗ್ಲೋಬಲ್ ಡಿಸೈನ್ ಸೆಂಟರ್ ಗೆ ಚಾಲನೆ ನೀಡಿದೆ. ಈ ಕೇಂದ್ರದಲ್ಲಿ 3,000 ಇಂಜಿನಿಯರ್ ಗಳು ಕಾರ್ಯನಿರ್ವಹಣೆ ಮಾಡಲಿದ್ದು, 3 ಡಿ ಸ್ಟಾಕಿಂಗ್, ಕೃತಕ ಬುದ್ಧಿಮತ್ತೆ ಹಾಗೂ ಮಷಿನ್ ಲರ್ನಿಂಗ್ ಸೇರಿದಂತೆ ಸೆಮಿಕಂಡಕ್ಟರ್  ತಂತ್ರಜ್ಞಾನದ ಅಭಿವೃದ್ಧಿ ಹಾಗೂ ವಿನ್ಯಾಸದತ್ತ ಕೆಲಸ ಮಾಡಲಿದ್ದಾರೆ ಎಂದು ಸಂಸ್ಥೆ ತಿಳಿಸಿದೆ. 

ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಕ್ಯಾಂಪಸ್ ನ್ನು ಉದ್ಘಾಟಿಸಿದರು. ಇದು ಕಂಪನಿಯ ಮುಂದಿನ 5 ವರ್ಷಗಳಲ್ಲಿ ಭಾರತದಲ್ಲಿ $400 ಮಿಲಿಯನ್ ಹೂಡಿಕೆಯ ಭಾಗವಾಗಿದೆ.

ಈ ಕ್ಯಾಂಪಸ್ ಡೇಟಾ ಸೆಂಟರ್ ಹಾಗೂ ಪಿಸಿಗಳು, ಡೇಟಾ ಸೆಂಟರ್ ಹಾಗೂ ಗೇಮಿಂಗ್ ಜಿಪಿಯು (ಗ್ರಾಫಿಕ್ಸ್ ಪ್ರೊಸೆಸಿಂಗ್ ಯುನಿಟ್) ಹಾಗೂ ಅಡಾಪ್ಟೀವ್ SoCs (System-on-Chip) ಹಾಗೂ ಎಫ್ ಪಿಜಿಎ (ಫೀಲ್ಡ್ ಪ್ರೋಗ್ರಾಮಬಲ್ ಗೇಟ್ ಅರೇ) ಎಂಬೆಡೆಡ್ ಉಪಕರಣಗಳಿಗಾಗಿ ಉನ್ನತ ಕಾರ್ಯಕ್ಷಮತೆಯ ಸಿಪಿಯುಗಳ ಅಭಿವೃದ್ಧಿಯ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ ಎಂದು ಎಎಂಡಿ ಹೇಳಿದೆ. “ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತದ ಸೆಮಿಕಂಡಕ್ಟರ್ ಕಾರ್ಯಕ್ರಮವು ಸೆಮಿಕಂಡಕ್ಟರ್ ಗಳ ವಿನ್ಯಾಸ ಮತ್ತು ಪ್ರತಿಭೆಗಳಿಗೆ ಸೂಕ್ತ ವ್ಯವಸ್ಥೆಯನ್ನು ಉತ್ತೇಜಿಸುವುದಕ್ಕೆ ಬಲವಾದ ಒತ್ತು ನೀಡುತ್ತದೆ. ಎಎಂಡಿ ತನ್ನ ಅತಿದೊಡ್ಡ ವಿನ್ಯಾಸ ಕೇಂದ್ರವನ್ನು ಬೆಂಗಳೂರಿನಲ್ಲಿ ಸ್ಥಾಪಿಸುತ್ತಿರುವುದು ಜಾಗತಿಕ ಕಂಪನಿಗಳು ಭಾರತದೆಡೆಗೆ ಹೊಂದಿರುವ ವಿಶ್ವಾಸಕ್ಕೆ ಸಾಕ್ಷಿಯಾಗಿದೆ ಎಂದು ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. 

ಎಎಎಂಡಿ'ಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ಮತ್ತು ಮುಖ್ಯ ತಂತ್ರಜ್ಞಾನ ಅಧಿಕಾರಿ ಮಾರ್ಕ್ ಪೇಪರ್‌ಮಾಸ್ಟರ್ ಮಾತನಾಡಿ, "ಈ ಹೊಸ ವಿನ್ಯಾಸ ಕೇಂದ್ರ ಎಎಮ್‌ಡಿ ಪೋರ್ಟ್‌ಫೋಲಿಯೊದಾದ್ಯಂತ ತಂತ್ರಜ್ಞಾನ ಮತ್ತು ಉತ್ಪನ್ನ ಅಭಿವೃದ್ಧಿಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ, ಮುಂದಿನ ಪೀಳಿಗೆಯ ಉನ್ನತ-ಕಾರ್ಯಕ್ಷಮತೆ, ಜಗತ್ತಿನಾದ್ಯಂತ ಇರುವ ನಮ್ಮ ಗ್ರಾಹಕರಿಗೆ ಅಡಾಪ್ಟಿವ್ ಮತ್ತು ಎಐ ಕಂಪ್ಯೂಟಿಂಗ್ ಪರಿಹಾರಗಳನ್ನು ಒದಗಿಸುವುದಕ್ಕೆ ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com