ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಗ್ಯಾರಂಟಿ ಯೋಜನೆಗಳ ದುರುಪಯೋಗ: ಬಿಪಿಎಲ್ ಕಾರ್ಡ್ ಗಳ ವಿಭಜನೆಗೆ ಅವಕಾಶ ನೀಡದಂತೆ ಹಣಕಾಸು ಇಲಾಖೆ ಒತ್ತಾಯ

ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಹೆಚ್ಚಿನ ಫಲಾನುಭವಿಗಳು ಸೇರ್ಪಡೆಯಾಗುವ ನಿರೀಕ್ಷೆಯಿದ್ದು, ಒಂದೇ ಕುಟುಂಬದಲ್ಲಿ ಎರಡು ಮೂರು ಕಾರ್ಡ್ ವಿಭಜನೆಗೆ ಅವಕಾಶ ನೀಡದಂತೆ ಹಣಕಾಸು ಇಲಾಖೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯನ್ನು ಒತ್ತಾಯಿಸಿದೆ.
Published on

ಬೆಂಗಳೂರು: ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಹೆಚ್ಚಿನ ಫಲಾನುಭವಿಗಳು ಸೇರ್ಪಡೆಯಾಗುವ ನಿರೀಕ್ಷೆಯಿದ್ದು, ಒಂದೇ ಕುಟುಂಬದಲ್ಲಿ ಎರಡು ಮೂರು ಕಾರ್ಡ್ ವಿಭಜನೆಗೆ ಅವಕಾಶ ನೀಡದಂತೆ ಹಣಕಾಸು ಇಲಾಖೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯನ್ನು ಒತ್ತಾಯಿಸಿದೆ. ಇದರಿಂದ ಬಡತನ ರೇಖೆಗಿಂತ ಕೆಳಗಿನ ಕಾರ್ಡ್‌ಗಳ ದುರುಪಯೋಗ ತಡೆಗಟ್ಟುತ್ತದೆ ಎಂಬುದು ಇಲಾಖೆಯ ಅಭಿಪ್ರಾಯವಾಗಿದೆ.  ಕರ್ನಾಟಕದಲ್ಲಿ1.2 ಕೋಟಿ ಬಿಪಿಎಲ್ ಕಾರ್ಡ್ ಗಳಿದ್ದು, 4.4 ಕೋಟಿ ಫಲಾನುಭವಿಗಳು ಇದ್ದಾರೆ. 

ಗ್ಯಾರಂಟಿ ಯೋಜನೆಯಿಂದ ವಿಶೇಷವಾಗಿ ಗೃಹ ಲಕ್ಷ್ಮಿ ಮತ್ತು ಅನ್ನ ಭಾಗ್ಯ ಯೋಜನೆಯಡಿ ರಾಜ್ಯದಲ್ಲಿ 1.15 ಕೋಟಿ ಕುಟುಂಬಗಳು ಪ್ರಯೋಜನ ಪಡೆಯುತ್ತಿವೆ,  ಗೃಹ ಲಕ್ಷ್ಮಿ ಯೋಜನೆಯಡಿ ಕುಟುಂಬದ ಮುಖ್ಯಸ್ಥರಿಗೆ 2,000 ರೂ.ಗಳನ್ನು ನೀಡಲಾಗುತ್ತದೆ ಮತ್ತು ಅನ್ನ ಭಾಗ್ಯದ ಅಡಿಯಲ್ಲಿ ಹೆಚ್ಚುವರಿ 5 ಕೆಜಿ ಅಕ್ಕಿಯ ಹಣವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುತ್ತದೆ.

ಐದು ಗ್ಯಾರಂಟಿಗಳ ಅನುಷ್ಠಾನದಿಂದ ಬೊಕ್ಕಸಕ್ಕೆ ವಾರ್ಷಿಕ 55,000 ಕೋಟಿ ರೂ. ಹೊರೆ ಬೀಳಲಿದೆ.  ಈ ವರ್ಷ ಜೂನ್ ಮತ್ತು ಆಗಸ್ಟ್ ನಡುವೆ ಈ ಯೋಜನೆಗಳನ್ನು ಪರಿಚಯಿಸಿದಾಗಿನಿಂದ 2023-24 ರ ಆರ್ಥಿಕ ವರ್ಷದ ಉಳಿದ ತಿಂಗಳುಗಳಿಗೆ 36,000 ಕೋಟಿ ರೂ. ಗಳನ್ನು ಸಿದ್ದರಾಮಯ್ಯ ಸರ್ಕಾರ ಮೀಸಲಿಟ್ಟಿದೆ.

ಹಣಕಾಸು ಇಲಾಖೆಯ ಮೂಲಗಳ ಪ್ರಕಾರ, ಈ ಯೋಜನೆಗಳು 1.15 ಕೋಟಿ ಕುಟುಂಬಗಳು ಒಟ್ಟು  ಜನಸಂಖ್ಯೆಯ ಶೇಕಡಾ 70 ಕ್ಕಿಂತ ಹೆಚ್ಚು ಜನರನ್ನು ಒಳಗೊಂಡಿದೆ. ಆದರೆ, ಸವಲತ್ತುಗಳನ್ನು ದುರ್ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ ಕೆಲವರು ಈಗಿರುವ ಒಂದೇ ಕುಟುಂಬದ ಕಾರ್ಡ್‌ನಿಂದ ಪ್ರತ್ಯೇಕಗೊಂಡು ಹೊಸ ಪಡಿತರ ಚೀಟಿ ಪಡೆಯಲು ಮುಂದಾಗಿದ್ದಾರೆ. ಇದು ಹೆಚ್ಚಿನ ಸಂಖ್ಯೆಯ ಫಲಾನುಭವಿಗಳಿಗೆ ಕಾರಣವಾಗುತ್ತದೆ, ಸರ್ಕಾರಕ್ಕೆ ಆರ್ಥಿಕ ಹೊರೆಯನ್ನು ಹೆಚ್ಚಿಸುತ್ತದೆ.

ಪ್ರಸ್ತುತ ಇರುವ ಕಾರ್ಡ್‌ನಲ್ಲಿ ಈಗಾಗಲೇ ಹೆಸರಿರುವ ಕುಟುಂಬದ ಸದಸ್ಯರಿಗೆ ಹೊಸ ಕಾರ್ಡ್‌ ನೀಡುವುದನ್ನು ತಡೆಯುವಂತೆ  ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯನ್ನು ಒತ್ತಾಯಿಸಿದ್ದೇವೆ ಎಂದು ಬಲ್ಲ ಮೂಲಗಳು ತಿಳಿಸಿವೆ. 2,000 ರೂಪಾಯಿಗಳ ಆರ್ಥಿಕ ಸಹಾಯವನ್ನು ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಸೇರಿದವರು ಬಳಸುವುದರಿಂದ,  ಶೇ. 0-5 ರಷ್ಟು ಜಿಎಸ್‌ಟಿ ಆಕರ್ಷಿಸುವ ಅಗತ್ಯ ವಸ್ತುಗಳ ಮೇಲೆ ಫಲಾನುಭವಿಗಳು ಹಣವನ್ನು ಖರ್ಚು ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಅಲ್ಲದೆ, ಅವರು ನೆರೆಹೊರೆಯ ಅಂಗಡಿಯಿಂದ ದಿನಸಿ ಮತ್ತು ಇತರ ಅಗತ್ಯ ವಸ್ತುಗಳನ್ನು ಖರೀದಿಸುತ್ತಾರೆ ಮತ್ತು ಬ್ರಾಂಡ್ ಅಲ್ಲದ ವಸ್ತುಗಳಿಗೆ ಖರ್ಚು ಮಾಡುತ್ತಾರೆ, ಅದು ಮತ್ತೆ ಜಿಎಸ್‌ಟಿಗೆ ಸೇರುತ್ತದೆ. “ಇಂತಹ ವೆಚ್ಚಗಳೊಂದಿಗೆ, ಸರ್ಕಾರಕ್ಕೆ ಜಿಎಸ್‌ಟಿಯ ವಿಷಯದಲ್ಲಿ ಮೊತ್ತವು ಸಂಪೂರ್ಣವಾಗಿ ಬರುತ್ತಿಲ್ಲ. ಆದಾಗ್ಯೂ, ಜನರ ಕೊಳ್ಳುವ ಸಾಮರ್ಥ್ಯವು ಸುಧಾರಿಸಿದೆ, ಇದು ಅಂತಿಮವಾಗಿ ಆರ್ಥಿಕತೆಯನ್ನು ಮೇಲಕ್ಕೆ ತಳ್ಳುತ್ತದೆ ಎಂದು ಮೂಲಗಳು ತಿಳಿಸಿವೆ. ಇದೇ ವೇಳೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ, ಖಾತರಿ ಯೋಜನೆಗಳು ನಿಜವಾದ ಫಲಾನುಭವಿಗಳಿಗೆ ತಲುಪಬೇಕು, ಇಲ್ಲದಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ. 

ಬಾಕಿ ಉಳಿದಿರುವ ಅರ್ಜಿ ಇತ್ಯರ್ಥಪಡಿಸಲು  ಆದೇಶ:

ಹೊಸ ಪಡಿತರ ಚೀಟಿಗಾಗಿ ಬಾಕಿ ಉಳಿದಿರುವ 2.96 ಲಕ್ಷ ಅರ್ಜಿಗಳನ್ನು ಅಧಿಕಾರಿಗಳು ಇತ್ಯರ್ಥಪಡಿಸುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸೆ.29ರಂದು ಸರ್ಕಾರಿ ಆದೇಶ ಹೊರಡಿಸಿದೆ. ಈ ಅರ್ಜಿಗಳು ಮಾರ್ಚ್ 2023 ರಿಂದ ಬಾಕಿ ಉಳಿದಿವೆ. ಒಮ್ಮೆ ಅದನ್ನು ತೆರವುಗೊಳಿಸಿದರೆ, ಗ್ಯಾರಂಟಿ ಯೋಜನೆಗಳಿಗೆ ಹೆಚ್ಚಿನ ಫಲಾನುಭವಿಗಳನ್ನು ಸೇರಿಸುವ ನಿರೀಕ್ಷೆಯಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com