13ನೇ ವರ್ಷಕ್ಕೆ ಕಾಲಿಟ್ಟ ನಮ್ಮ ಮೆಟ್ರೋ! ಬೆಂಗಳೂರಿನಲ್ಲಿ ನಿತ್ಯ 8.5 ಲಕ್ಷ ಪ್ರಯಾಣಿಕರ ಸಂಚಾರ!

ಆರಂಭದ ವರ್ಷದಲ್ಲಿ ‘ಆಟಿಕೆ ರೈಲುಗಳು’ ಎಂಬ ಕೊಂಕು ಮಾತುಗಳು ಮತ್ತು ಹಾಸ್ಯಗಳಿಂದ ಹಿಡಿದು ಇಂದು ಕೋಚ್ ಗಳು, ಪ್ಲಾಟ್‌ಫಾರ್ಮ್‌ಗಳ ಕುರಿತು ಪದೇ ಪದೇ ದೂರುಗಳು ಬರುತ್ತಲೇ ಇದ್ದರೂ ನಮ್ಮ ಮೆಟ್ರೋ ನಗರದಲ್ಲಿನ ಹತಾಶ ಸಾರಿಗೆ ಬಿಕ್ಕಟ್ಟಿಗೆ ಪರಿಹಾರವಾಗುವುದರೊಂದಿಗೆ ನಿರ್ಣಾಯಕ ಸಾರಿಗೆ ವಿಧಾನವಾಗಿ ಹೊರಹೊಮ್ಮುತ್ತಿದೆ. 
ನಮ್ಮ ಮೆಟ್ರೋ ರೈಲು
ನಮ್ಮ ಮೆಟ್ರೋ ರೈಲು

ಬೆಂಗಳೂರು: ಆರಂಭದ ವರ್ಷದಲ್ಲಿ ‘ಆಟಿಕೆ ರೈಲುಗಳು’ ಎಂಬ ಕೊಂಕು ಮಾತುಗಳು ಮತ್ತು ಹಾಸ್ಯಗಳಿಂದ ಹಿಡಿದು ಇಂದು ಕೋಚ್ ಗಳು, ಪ್ಲಾಟ್‌ಫಾರ್ಮ್‌ಗಳ ಕುರಿತು ಪದೇ ಪದೇ ದೂರುಗಳು ಬರುತ್ತಲೇ ಇದ್ದರೂ ನಮ್ಮ ಮೆಟ್ರೋ ನಗರದಲ್ಲಿನ ಹತಾಶ ಸಾರಿಗೆ ಬಿಕ್ಕಟ್ಟಿಗೆ ಪರಿಹಾರವಾಗುವುದರೊಂದಿಗೆ ನಿರ್ಣಾಯಕ ಸಾರಿಗೆ ವಿಧಾನವಾಗಿ ಹೊರಹೊಮ್ಮುತ್ತಿದೆ. 

ಶುಕ್ರವಾರ 13 ನೇ ವರ್ಷಕ್ಕೆ ಮೆಟ್ರೋ ಕಾಲಿಟ್ಟಿದ್ದು, ಇತ್ತೀಚೆಗೆ ಪ್ರಾರಂಭವಾದ ಪೂರ್ಣ ನೇರಳೆ ಮಾರ್ಗದಲ್ಲಿ ನಿತ್ಯ 1 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರನ್ನು ಸಂಚರಿಸುತ್ತಿದ್ದಾರೆ. ಅದರ ಒಟ್ಟಾರೆ ನೆಟ್‌ವರ್ಕ್  73.81 ಕಿಮೀಗೆ ವಿಸ್ತರಿಸಿದೆ. ದೈನಂದಿನ ಸರಾಸರಿ ಪ್ರಯಾಣಿಕರ ಸಂಖ್ಯೆ  7 ಲಕ್ಷ ದಾಟುತ್ತಿದೆ. ಅಕ್ಟೋಬರ್ 13 ರಂದು 7.5 ಪ್ರಯಾಣಿಕರು ಸಂಚರಿಸಿದ್ದಾರೆ. 

ಈ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಮೆಟ್ರೋ ಕಾರ್ಯಾಚರಣೆ ಮತ್ತು ನಿರ್ವಹಣೆ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಎ.ಎಸ್.ಶಂಕರ್,  ಈ ವರ್ಷ ಹಬ್ಬದ ಸೀಸನ್ ಮುಗಿದು, ಎಲ್ಲಾ ಐಟಿ ಕಂಪನಿಗಳು ಕಚೇರಿಯಿಂದ ಕೆಲಸ ಮಾಡಲು ಒತ್ತಾಯಿಸಿದಾಗ ಪ್ರಯಾಣಿಕರ ಸಂಖ್ಯೆ  8.5 ಲಕ್ಷವನ್ನು ಮುಟ್ಟುವ ನಿರೀಕ್ಷೆಯಿದೆ. ಇದು 2024 ಜನವರಿ ಮತ್ತು ಮಾರ್ಚ್ ನಡುವೆ ಯಾವುದೇ ಸಮಯದಲ್ಲಿ ಸಂಭವಿಸಬಹುದು ಎಂದು ಅವರು ಹೇಳಿದರು. 

<strong>ಕಾರ್ಯನಿರ್ವಾಹಕ ನಿರ್ದೇಶಕ ಎ.ಎಸ್. ಶಂಕರ್</strong>
ಕಾರ್ಯನಿರ್ವಾಹಕ ನಿರ್ದೇಶಕ ಎ.ಎಸ್. ಶಂಕರ್

ಕೆಆರ್ ಪುರಕ್ಕೆ ಸಂಪರ್ಕ ಕಲ್ಪಿಸಿದ ನಂತರ 75,000 ಪ್ರಯಾಣಿಕರು ಸಂಚರಿಸಬಹುದೆಂದು ನಿರೀಕ್ಷಿಸಲಾಗಿತ್ತು. ಈಗ ಸುಮಾರು 80,000 ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಆರ್ ವಿ ರಸ್ತೆ-ಬೊಮ್ಮಸಂದ್ರ (ಹಳದಿ ಮಾರ್ಗ) ಕಾರ್ಯಾರಂಭವಾದಗ ಪ್ರಯಾಣಿಕರ ಸಂಖ್ಯೆಯಲ್ಲಿ ಇನ್ನೂ 1.5 ರಿಂದ 2 ಲಕ್ಷ ಹೆಚ್ಚಾಗಲಿದೆ. ಇನ್ನೂ ಕೆಲವೇ ದಿನಗಳಲ್ಲಿ ಇದು 10 ಲಕ್ಷ  ದಾಟಲಿದೆ ಎಂದು ತಿಳಿಸಿದರು. 

2024ರ ಫೆಬ್ರವರಿಯಲ್ಲಿ ಹಳದಿ ಮಾರ್ಗ ಕಾರ್ಯಾರಂಭವಾಗಬಹುದು ಎಂದು ಮತ್ತೋರ್ವ ಅಧಿಕಾರಿ ತಿಳಿಸಿದರು. ಇಲ್ಲಿಯವರೆಗೆ, ಮೆಟ್ರೋ ಪ್ರಾರಂಭವಾದಾಗಿನಿಂದ ಒಟ್ಟಾರೆ ಪ್ರಯಾಣಿಕರ ಸಂಖ್ಯೆ 94 ಕೋಟಿಯಾಗಿದೆ. ಬಿಎಂಆರ್ ಸಿಎಲ್  ತಿಂಗಳಿಗೆ 4 ಕೋಟಿ ರೂ.ಗಳ ಕಾರ್ಯಾಚರಣೆಯ ಲಾಭ ಪಡೆಯುತ್ತಿದೆ. ತಿಂಗಳಿಗೆ 50 ಕೋಟಿ ರೂ. ಆದಾಯವನ್ನು ಗಳಿಸುತ್ತೇವೆ. ಕಾರ್ಯಾಚರಣೆಯ ವೆಚ್ಚಗಳು ತಿಂಗಳಿಗೆ 46 ಕೋಟಿ ರೂಪಾಯಿಗಳಾಗಿವೆ ಎಂದು ಅವರು ಮಾಹಿತಿ ನೀಡಿದರು.

ಹೊಸ ಯೋಜನೆಗಳ ಕುರಿತು ಪ್ರತಿಕ್ರಿಯಿಸಿದ ಶಂಕರ್, ಸದ್ಯ, ಮೊಬೈಲ್‌ ಮೂಲಕ ಖರೀದಿಸಬಹುದಾದ ಕ್ಯೂಆರ್ ಟಿಕೆಟ್ ಒಬ್ಬ ಪ್ರಯಾಣಿಕರಿಗೆ ಮಾತ್ರ ಅನುವು ಮಾಡಿಕೊಡುತ್ತದೆ. ಶೀಘ್ರದಲ್ಲಿಯೇ ಒಂದು ಟಿಕೆಟ್ ನ್ನು ಆರು ಜನರು ಬಳಸುವ ವ್ಯವಸ್ಥೆಗೆ ಚಾಲನೆ ನೀಡಲಾಗುವುದು. ಬೆಂಗಳೂರು ಮೆಟ್ರೋ ತರಬೇತಿ ಪಡೆಯುತ್ತಿರುವ 96 ಹೊಸ ರೈಲು ನಿರ್ವಾಹಕರನ್ನು ನೇಮಿಸಿಕೊಂಡಿದೆ ಎಂದು ಅವರು ತಿಳಿಸಿದರು. 

ಪ್ರಸ್ತುತ, 52 ರೈಲುಗಳು ಕಾರ್ಯನಿರ್ವಹಿಸುತ್ತಿವೆ, ಅವುಗಳಲ್ಲಿ 30 ನೇರಳೆ ಮಾರ್ಗದಲ್ಲಿ (ಶೇ. 99.35 ರಷ್ಟು ಸಮಯಪಾಲನೆ ದಾಖಲೆ) ಸಂಚರಿಸುತ್ತಿದ್ದರೆ, ಗ್ರೀನ್ ಲೈನ್‌ ನಲ್ಲಿ  22 ರೈಲುಗಳು ಶೇ.  99.28 ರಷ್ಟು ಸಮಯಪಾಲನೆ ದಾಖಲೆ ಹೊಂದಿವೆ.

<strong>ವೈಟ್ ಫೀಲ್ಡ್ ವರೆಗೆ ಮೆಟ್ರೋ ರೈಲಿನಲ್ಲಿ ಸಂಚರಿಸಿದ ಪ್ರಿಯಾಂಕ್ ಖರ್ಗೆ</strong>
ವೈಟ್ ಫೀಲ್ಡ್ ವರೆಗೆ ಮೆಟ್ರೋ ರೈಲಿನಲ್ಲಿ ಸಂಚರಿಸಿದ ಪ್ರಿಯಾಂಕ್ ಖರ್ಗೆ

ವೈಟ್ ಫೀಲ್ಡ್ ವರೆಗೆ ಮೆಟ್ರೋ ರೈಲಿನಲ್ಲಿ ಸಂಚರಿಸಿದ ಪ್ರಿಯಾಂಕ್ ಖರ್ಗೆ: ಐಟಿ/ಬಿಟಿ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಗುರುವಾರ ಮೆಟ್ರೋದಲ್ಲಿ ಪ್ರಯಾಣ ಮಾಡಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಈ ವಿಚಾರವನ್ನು ಅವರು ಹಂಚಿಕೊಂಡಿದ್ದಾರೆ.

ಕೆಲಸದ ನಿಮಿತ್ತ ನೇರಳೆ ಮಾರ್ಗದಲ್ಲಿ ಪ್ರಯಾಣಿಸಿದೆ. ಇದು ಉತ್ತಮ ಪ್ರಯಾಣವಾಗಿತ್ತು. ವಿಧಾನಸೌಧದಿಂದ ವೈಟ್‌ಫೀಲ್ಡ್‌ಗೆ 30-40 ನಿಮಿಷಗಳ ಪ್ರಯಾಣಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಸಂಜೆ ಸಂಪುಟ ಸಭೆಗೆ ವಾಪಸ್ಸಾದೆ. ಸಹ ಪ್ರಯಾಣಿಕರ ಜೊತೆಗಿನ ಸಂವಾದ ಅದ್ಬುತವಾಗಿತ್ತು ಎಂದು ಅವರು ಬರೆದುಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com