ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ದಸರಾ ಎಫೆಕ್ಟ್: ಬಸ್ ಗಳಲ್ಲಿ ಜನವೋ ಜನ, ಪರಿಸ್ಥಿತಿ ನಿಭಾಯಿಸಲು ಬಿಎಂಟಿಸಿ ಬಸ್ ಬಳಕೆಗೆ ಕೆಎಸ್ಆರ್'ಟಿಸಿ ನಿರ್ಧಾರ

ದಸರಾ ಹಬ್ಬದ ಹಿನ್ನೆಲೆಯಲ್ಲಿ ಸಾಕಷ್ಟು ಜನರು ತಮ್ಮ ತಮ್ಮ ಊರುಗಳಿಗೆ ಹೋಗುತ್ತಿದ್ದು, ಇದರ ಪರಿಣಾಮ ಕೆಎಸ್ಆರ್'ಟಿಸಿ ಬಸ್ ಗಳಲ್ಲಿ ಜನರು ತುಂಬಿ ತುಳುಕುತ್ತಿದ್ದಾರೆ.

ಬೆಂಗಳೂರು: ದಸರಾ ಹಬ್ಬದ ಹಿನ್ನೆಲೆಯಲ್ಲಿ ಸಾಕಷ್ಟು ಜನರು ತಮ್ಮ ತಮ್ಮ ಊರುಗಳಿಗೆ ಹೋಗುತ್ತಿದ್ದು, ಇದರ ಪರಿಣಾಮ ಕೆಎಸ್ಆರ್'ಟಿಸಿ ಬಸ್ ಗಳಲ್ಲಿ ಜನರು ತುಂಬಿ ತುಳುಕುತ್ತಿದ್ದಾರೆ.

ಈ ಪರಿಸ್ಥಿತಿ ಅಧಿಕಾರಿಗಳಿಗೆ ಸವಾಲಾಗಿ ಪರಿಣಮಿಸಿದ್ದು, ಪ್ರಸ್ತುತದ ಪರಿಸ್ಥಿತಿ ನಿಭಾಯಿಸಲು ಹೆಚ್ಚುವರಿಯಾಗಿ ಬಿಎಂಟಿಸಿ ಬಸ್ ಗಳ ಬಳಕೆ ಮಾಡಲು ಕೆಎಸ್ಆರ್'ಟಿಸಿ ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ಅಕ್ಟೋಬರ್ 23 ರವರೆಗೆ ಕೆಎಸ್‌ಆರ್‌ಟಿಸಿಯು ಬೆಂಗಳೂರಿನಿಂದ ದಾವಣಗೆರೆ, ಭದ್ರಾವತಿ, ಶಿವಮೊಗ್ಗ, ಚಿತ್ರದುರ್ಗ, ಹೊಸದುರ್ಗ, ಶ್ರೀರಾಂಪುರ, ಹಿರಿಯೂರು, ಬಳ್ಳಾರಿ, ಹಾಸನ, ಅರಸೀಕೆರೆ, ಕುಣಿಗಲ್, ಯಡಿಯೂರು, ಹಿರೀಸಾವೆ, ಚನ್ನಪಟ್ಟಣ, ಮೈಸೂರು, ಕೊಳ್ಳೇಗಾಲ, ಮೈಸೂರು, ಕೊಳ್ಳೇಗಾಲ, ತುಮಕೂರು, ಗುಬ್ಬಿ, ನಿಟ್ಟೂರಿ, ಕೆಬಿ ಕ್ರಾಸ್, ಧರ್ಮಸ್ಥಳ, ಹಾಸನ ಮತ್ತು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಬಿಎಂಟಿಸಿ ಬಸ್ ಗಳ ಬಳಕೆ ಮಾಡಲು ನಿರ್ಧರಿಸಿದೆ ಎಂದು ವರದಿಗಳು ತಿಳಿಸಿವೆ.

Related Stories

No stories found.

Advertisement

X
Kannada Prabha
www.kannadaprabha.com