ಬಿಎಂಟಿಸಿ ಡಬಲ್ ಡೆಕ್ಕರ್ ಬಸ್‌ಗಳಿಗೆ ಟೆಂಡರ್: 2023ರ ಅಂತ್ಯದ ವೇಳೆಗೆ ಕಾರ್ಯಾಚರಣೆ

ಒಂದು ಕಾಲದಲ್ಲಿ ಬೆಂಗಳೂರಿನ ಆಕರ್ಷಣೆಯಾಗಿದ್ದ ಡಬಲ್ ಡೆಕ್ಕರ್ ಬಸ್‌ಗಳು ಈ ವರ್ಷಾಂತ್ಯದ ವೇಳೆಗೆ ನಗರದಲ್ಲಿ ಮತ್ತೆ ಸಂಚರಿಸಲಿವೆ. ಜೂನ್ ತಿಂಗಳಲ್ಲಿ 24 ಕೋಟಿ ರೂಪಾಯಿ ವೆಚ್ಚದಲ್ಲಿ ಹತ್ತು ಡಬಲ್ ಡೆಕ್ಕರ್ ಬಸ್‌ಗಳ ಖರೀದಿಗೆ ರಾಜ್ಯ ಸಚಿವ ಸಂಪುಟವು ಒಪ್ಪಿಗೆ ನೀಡಿದೆ..
ಬಿಎಂಟಿಸಿ ಡಬಲ್ ಡೆಕ್ಕರ್ ಬಸ್‌ಗಳಿಗೆ ಟೆಂಡರ್: 2023ರ ಅಂತ್ಯದ ವೇಳೆಗೆ ಕಾರ್ಯಾಚರಣೆ

ಬೆಂಗಳೂರು: ಒಂದು ಕಾಲದಲ್ಲಿ ಬೆಂಗಳೂರಿನ ಆಕರ್ಷಣೆಯಾಗಿದ್ದ ಡಬಲ್ ಡೆಕ್ಕರ್ ಬಸ್‌ಗಳು ಈ ವರ್ಷಾಂತ್ಯದ ವೇಳೆಗೆ ನಗರದಲ್ಲಿ ಮತ್ತೆ ಸಂಚರಿಸಲಿವೆ. ಜೂನ್ ತಿಂಗಳಲ್ಲಿ 24 ಕೋಟಿ ರೂಪಾಯಿ ವೆಚ್ಚದಲ್ಲಿ ಹತ್ತು ಡಬಲ್ ಡೆಕ್ಕರ್ ಬಸ್‌ಗಳ ಖರೀದಿಗೆ ರಾಜ್ಯ ಸಚಿವ ಸಂಪುಟವು ಒಪ್ಪಿಗೆ ನೀಡಿದ ಎರಡು ತಿಂಗಳ ನಂತರ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಶೀಘ್ರದಲ್ಲೇ ಟೆಂಡರ್ ಕರೆಯಲು ಸಜ್ಜಾಗಿದೆ.

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಈ ವಿಷಯದಲ್ಲಿ ದೃಢಪಡಿಸಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು, ಬಿಎಂಟಿಸಿ ಈ ಹಿಂದೆ ಐದು ಡಬಲ್ ಡೆಕ್ಕರ್ ಬಸ್‌ಗಳ ಪೂರೈಕೆಗಾಗಿ ಟೆಂಡರ್‌ ಕರೆದಿತ್ತು. ಬಿಡ್ ಮಾಡಿದ್ದವರು ಹೆಚ್ಚಿನ ಬೆಲೆಯನ್ನು ನಮೂದಿಸಿದ್ದರಿಂದ, ಮರು ಟೆಂಡರ್‌ಗೆ ಹೋಗಲು ಸಂಪುಟವು ಒತ್ತಾಯಿಸಿತು. ಅಲ್ಲದೆ ಈ ವೇಳೆ ಹತ್ತು ಡಬಲ್ ಡೆಕ್ಕರ್ ಬಸ್‌ಗಳ ಖರೀದಿಗೆ ಅನುಮೋದನೆ ನೀಡಿತ್ತು. 

ಟೆಂಡರ್ ವಿವರಗಳ ಬಗ್ಗೆ ನಿಗಮ ಕೆಲಸ ಮಾಡುತ್ತಿದ್ದು ಶೀಘ್ರದಲ್ಲೇ ಟೆಂಡರ್ ಕರೆಯಲಾಗುವುದು ಎಂದು ಅವರು ಹೇಳಿದರು.

ಟೈಮ್‌ಲೈನ್ ಮತ್ತು ಡಬಲ್ ಡೆಕ್ಕರ್ ಬಸ್‌ಗಳು ಬೆಂಗಳೂರು ರಸ್ತೆಗಳಲ್ಲಿ ಯಾವಾಗ ಸಂಚಾರ ಪ್ರಾರಂಭಿಸುತ್ತವೆ ಎಂದು ಕೇಳಿದ್ದಕ್ಕೆ ಉತ್ತರಿಸಿದ ಅವರು, ಅಶೋಕ್ ಲೇಲ್ಯಾಂಡ್‌ನ ಸ್ವಿಚ್ ಮೊಬಿಲಿಟಿ ಹೊರತುಪಡಿಸಿ, ಡಬಲ್ ಡೆಕ್ಕರ್ ಎಲೆಕ್ಟ್ರಿಕ್ ಬಸ್‌ಗಳನ್ನು ತಯಾರಿಸಲು ಯಾರೂ ಇಲ್ಲ. ನಮಗೆ ನಿಖರವಾಗಿ ಯಾವಾಗ ಟೆಂಡರ್ ಪ್ರಕ್ರಿಯೆ ಮುಗಿದ ನಂತರ ಬಸ್‌ಗಳನ್ನು ವಿತರಿಸಲಾಗುವುದು, ಶೀಘ್ರದಲ್ಲೇ ಬಸ್‌ಗಳು ರಸ್ತೆಗಿಳಿಯಲಿವೆ ಎಂದರು.

ಡಬಲ್ ಡೆಕ್ಕರ್ ಬಸ್ ಮಾರ್ಗ:
ನಗರದಲ್ಲಿ ಇತ್ತೀಚೆಗೆ ನೀರಿನ ಟ್ಯಾಂಕರ್ ವಿದ್ಯುತ್ ಕಂಬಕ್ಕೆ ಗುದ್ದಿದ್ದ ಪರಿಣಾಮ ಆ ಮಾರ್ಗವಾಗಿ ತೆರಳುತ್ತಿದ್ದ ಕಾಲೇಜು ವಿದ್ಯಾರ್ಥಿನಿಯೊಬ್ಬಳಿಗೆ ಶೇಕಡಾ 35ರಷ್ಟು ಸುಟ್ಟಗಾಯಗಳಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ, ಮಾರ್ಗಗಳ ಕುರಿತು ಪ್ರತಿಕ್ರಿಯಿಸಲು ಇನ್ನು ತುಂಬ ಸಮಯವಿದೆ ಎಂದು ಬಿಎಂಟಿಸಿ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದಾಗ್ಯೂ, ಫ್ಲೈಓವರ್‌ಗಳು ಮತ್ತು ಅಂಡರ್‌ಪಾಸ್‌ಗಳ ನಿರ್ಮಾಣದೊಂದಿಗೆ ನಗರದ ತ್ವರಿತ ಅಭಿವೃದ್ಧಿಯನ್ನು ಗಮನಿಸಿದರೆ, ಈ ಬಸ್‌ಗಳನ್ನು ಹೊರ ವರ್ತುಲ ರಸ್ತೆ ಮತ್ತು ಡಬಲ್ ಡೆಕ್ಕರ್ ಬಸ್‌ನ ಸಂಚಾರಕ್ಕೆ ಯಾವುದೇ ಅಡ್ಡಿಯಿಲ್ಲದ ಇತರ ಮಾರ್ಗಗಳಿಗೆ ಮೀಸಲಿಡಬಹುದು ಎಂದು ಅಧಿಕಾರಿ ಹೇಳಿದರು.

ಡಬಲ್ ಡೆಕ್ಕರ್ ಟೈಮ್‌ಲೈನ್

  • 1970 ಮತ್ತು 1980ರ ದಶಕದಲ್ಲಿ ಉದ್ಯಾನ ನಗರವನ್ನು ಡಬಲ್ ಡೆಕ್ಕರ್ ಬಸ್ಸುಗಳು ಆವರಿಸಿದ್ದವು.
  • 1997ರಲ್ಲಿ ಬೆಂಗಳೂರಿನಲ್ಲಿ ಅವುಗಳನ್ನು ಹಂತಹಂತವಾಗಿ ಬಿಟ್ಟು ಬಿಡಲಾಯಿತು.
  • ಎರಡು ಡೆಕ್ಕರ್ ಬಸ್‌ಗಳನ್ನು ಬೆಂಗಳೂರು ರಸ್ತೆಗೆ ತರಲು ಬಿಎಂಟಿಸಿ ದಶಕಕ್ಕೂ ಹೆಚ್ಚು ಸಮಯದಿಂದ ಪ್ರಯತ್ನಿಸುತ್ತಿದ್ದು ವಿಫಲವಾಗಿತ್ತು.
  • ಜನವರಿ 2023ರಲ್ಲಿ BMTC ಐದು ಡಬಲ್ ಡೆಕ್ಕರ್ ಬಸ್‌ಗಳ ಪೂರೈಕೆಗಾಗಿ ಟೆಂಡರ್‌ಗೆ ಕರೆದಿತ್ತು.
  • ಟೆಂಡರ್ ರದ್ದುಗೊಂಡಿದ್ದರಿಂದ ಬಿಎಂಟಿಸಿ ಶೀಘ್ರದಲ್ಲೇ ಮರು ಟೆಂಡರ್‌ಗೆ ಸಿದ್ಧತೆ ನಡೆಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com