ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನದ ಟರ್ಮಿನಲ್-2 ನಲ್ಲಿ ಚಿನ್ನ, ವಿದೇಶಿ ಸಿಗರೇಟ್ ವಶ

ಇತ್ತೀಚಿಗಷ್ಟೇ ಉದ್ಘಾಟನೆಯಾದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ -2 ನಲ್ಲಿ ಬುಧವಾರ ವಿಮಾನ  ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಚಿನ್ನ, ಸಿಗರೇಟ್ ಮತ್ತು ನಿಷೇಧಿತ ಸೌಂದರ್ಯವರ್ಧಕಗಳನ್ನು ವಶಪಡಿಸಿಕೊಂಡಿದ್ದಾರೆ.
ವಿದೇಶಿ ಸಿಗರೇಟ್ ಗಳು
ವಿದೇಶಿ ಸಿಗರೇಟ್ ಗಳು

ಬೆಂಗಳೂರು: ಇತ್ತೀಚಿಗಷ್ಟೇ ಉದ್ಘಾಟನೆಯಾದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ -2 ನಲ್ಲಿ ಬುಧವಾರ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಚಿನ್ನ, ಸಿಗರೇಟ್ ಮತ್ತು ನಿಷೇಧಿತ ಸೌಂದರ್ಯವರ್ಧಕಗಳನ್ನು ವಶಪಡಿಸಿಕೊಂಡಿದ್ದಾರೆ.

ಶಾರ್ಜಾದಿಂದ ಏರ್ ಅರೇಬಿಯಾ ವಿಮಾನದಲ್ಲಿ (ಜಿ 9 0496) ಆಗಮಿಸಿದ ಮಹಿಳಾ ಪ್ರಯಾಣಿಕರಿಂದ ಈ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಇದು ಹೊಸ ಟರ್ಮಿನಲ್ ನಲ್ಲಿ ದಾಖಲಾದ ಮೊದಲ ಪ್ರಕರಣವಾಗಿದೆ ಎಂದು ಕಸ್ಟಮ್ಸ್ ಮೂಲಗಳು ತಿಳಿಸಿವೆ.

ಮಹಿಳೆ 22.19 ಲಕ್ಷ ರೂ. ಮೌಲ್ಯದ 376.2 ಗ್ರಾಂ ತೂಕದ ಎರಡು ಚಿನ್ನದ ಸರಗಳನ್ನು ತನ್ನ ಒಳ ಉಡುಪುಗಳಲ್ಲಿ ಬಚ್ಚಿಟ್ಟು ಕಳ್ಳಸಾಗಣೆ ಮಾಡುತ್ತಿದ್ದ ಮಹಿಳೆಯನ್ನು ತಪಾಸಣೆ ನಡೆಸಿದಾಗ ಸಿಕ್ಕಿಬಿದ್ದಿದ್ದಾಳೆ. ಅದೇ ಇಂಡಿಗೋ ವಿಮಾನದಲ್ಲಿ (6E 1486) ದುಬೈನಿಂದ ಬಂದ ಇಬ್ಬರು ಪುರುಷ ಪ್ರಯಾಣಿಕರಿಂದ ಒಟ್ಟು 65,200 ರೂ. ಮೌಲ್ಯದ ವಿದೇಶಿ ಸಿಗರೇಟ್ ಕಡ್ಡಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ವೈಯಕ್ತಿಕ ತಪಾಸಣೆ ವೇಳೆ ಪ್ರಯಾಣಿಕನೊಬ್ಬನು ತನ್ನ ಚೆಕ್-ಇನ್‌ನಲ್ಲಿ ಸಿಗರೇಟ್‌ಗಳನ್ನು ಸಾಗಿಸಿದ್ದನ್ನು ಬಹಿರಂಗಪಡಿಸಿದ್ದು, ಬಾಕ್ಸ್ ಗಳಲ್ಲಿ ಒಟ್ಟು 57,200 ಸಿಗರೇಟ್ ಕಡ್ಡಿಗಳು ಪತ್ತೆಯಾಯಿತು. ವಿಮಾನದಲ್ಲಿದ್ದ ಮತ್ತೊಬ್ಬ ಪುರುಷ ಪ್ರಯಾಣಿಕ 8,000 ವಿದೇಶಿ ಸಿಗರೇಟ್ ಮತ್ತು 348 ಬ್ಯೂಟಿ ಕ್ರೀಮ್ ಬಾಕ್ಸ್‌ಗಳೊಂದಿಗೆ ಸಿಕ್ಕಿಬಿದ್ದಿದ್ದಾನೆ ಎಂದು ಕಸ್ಟಮ್ಸ್  ಮೂಲಗಳು ತಿಳಿಸಿವೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com