ಕಾವೇರಿ 5ನೇ ಹಂತ: ನೀರು ಸರಬರಾಜಿಗೆ ಇನ್ನೂ ಕಾಯಬೇಕು!

110 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸಲು ಉದ್ದೇಶಿಸಿರುವ 5,500 ಕೋಟಿ ರೂ. ವೆಚ್ಚದ ಮಹತ್ವಾಕಾಂಕ್ಷೆಯ ಕಾವೇರಿ ನೀರು ಸರಬರಾಜು ಹಂತ 5 ಯೋಜನೆಯು ಫೆಬ್ರವರಿ ಅಥವಾ ಮಾರ್ಚ್ 2024 ರೊಳಗೆ ಕಾರ್ಯಾರಂಭ ಮಾಡುವ ಸಾಧ್ಯತೆಯಿದೆ.
ಟಿಕೆ ಹಳ್ಳಿ ನೀರು ಸಂಸ್ಕರಣಾ ಘಟಕ
ಟಿಕೆ ಹಳ್ಳಿ ನೀರು ಸಂಸ್ಕರಣಾ ಘಟಕ
Updated on

ಬೆಂಗಳೂರು: ನಗರದ ಹೊರವಲಯದ 225 ಚದರ ಕಿ.ಮೀ ವ್ಯಾಪ್ತಿಯ 110 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸಲು ಉದ್ದೇಶಿಸಿರುವ 5,500 ಕೋಟಿ ರೂ. ವೆಚ್ಚದ ಮಹತ್ವಾಕಾಂಕ್ಷೆಯ ಕಾವೇರಿ ನೀರು ಸರಬರಾಜು ಹಂತ 5 ಯೋಜನೆಯು ಫೆಬ್ರವರಿ ಅಥವಾ ಮಾರ್ಚ್ 2024 ರೊಳಗೆ ಕಾರ್ಯಾರಂಭ ಮಾಡುವ ಸಾಧ್ಯತೆಯಿದೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಇತ್ತೀಚಿಗೆ ಡಿಸೆಂಬರ್ 2023ರ ಗಡುವು ನೀಡಿತ್ತು. 

ಕೋವಿಡ್-19 ಸಾಂಕ್ರಾಮಿಕ ಕಾರ್ಮಿಕರು ಮತ್ತು ಕೈಗಾರಿಕಾ ಆಮ್ಲಜನಕದ ತೀವ್ರ ಕೊರತೆಗೆ ಕಾರಣವಾಗಿದ್ದು, ಯೋಜನೆಯು ಇತರ ಎಲ್ಲಾ ಯೋಜನೆಗಳಂತೆ ಜುಲೈ 2023 ಕ್ಕೆ ನೀಡಲಾದ ಗಡುವು ಮತ್ತೆ ಆರು ತಿಂಗಳು ವಿಸ್ತರಣೆಗೊಂಡಿದೆ. ಯೋಜನೆಯ ಶೇ. 80 ರಷ್ಟು ಕೆಲಸವನ್ನು ಪೂರ್ಣಗೊಳಿಸಿದ್ದೇವೆ. ಗುತ್ತಿಗೆದಾರರು ಮತ್ತು ಜಲಮಂಡಳಿ ಅಧಿಕಾರಿಗಳು ವಾರದ ಎಲ್ಲಾ ದಿನ ಕೆಲಸ ಮಾಡುವ ಮೂಲಕ ಡಿಸೆಂಬರ್ ನೊಳಗೆ ಕೆಲಸ ಪೂರ್ಣಗೊಳಿಸುವ ಗುರಿ ಹೊಂದಿದ್ದಾರೆ. ಆದರೆ ಕೆಲವು ಸಮಸ್ಯೆಗಳು ನಮ್ಮ ನಿಯಂತ್ರಣಕ್ಕೆ ಮೀರಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಉಕ್ರೇನ್ ಮತ್ತು ರಷ್ಯಾ ನಡುವಿನ ಸುದೀರ್ಘ ಸಂಘರ್ಷ ಸರಪಳಿ ಪೂರೈಕೆಗೆ ತೀವ್ರವಾಗಿ ಅಡ್ಡಿಪಡಿಸಿತು. ಭಾರೀ ಮಳೆಯಿಂದ ಕಾಮಗಾರಿ ನಡೆಯುವ ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿವೇರ್ಪಟ್ಟಿತ್ತು. ಟರ್ಕಿ ಬಿಕ್ಕಟ್ಟು ಕೂಡಾ ಯೋಜನೆ ಮೇಲೆ ಪರಿಣಾಮ ಬೀರಿದೆ. ಇವೆಲ್ಲದರ ಕಾರಣದಿಂದ ಇನ್ನೂ ಸಮಸ್ಯೆ ಎದುರಿಸುತ್ತಿರುವುದಾಗಿ ಅಧಿಕಾರಿ ತಿಳಿಸಿದರು.  ಒಟ್ಟಾರೇ ಯೋಜನೆ ವೆಚ್ಚದಲ್ಲಿ  ಜಪಾನ್ ಅಂತಾರಾಷ್ಟ್ರೀಯ ಸಹಕಾರ ಏಜೆನ್ಸಿ ಶೇ. 84 ರಷ್ಟು ಆರ್ಥಿಕ ನೆರವು ಒದಗಿಸುತ್ತಿದ್ದರೆ, ಬಿಡ್ಬ್ಲೂಎಸ್ ಎಸ್ ಬಿ ಮತ್ತು ರಾಜ್ಯ ಸರ್ಕಾರ ಶೇ. 8 ರಷ್ಟು ವೆಚ್ಚದ ಹಣ ನೀಡುತ್ತಿವೆ.

ಕಾರ್ಯಾರಂಭ ಮಾಡಿದಾಗ ಮಹದೇವಪುರ, ರಾಜರಾಜೇಶ್ವರಿ ನಗರ, ಬೊಮ್ಮನಹಳ್ಳಿ, ದಾಸರಹಳ್ಳಿ, ಯಲಹಂಕ, ಕೆಆರ್ ಪುರಂ ಮತ್ತು ಬ್ಯಾಟರಾಯನಪುರ ಗ್ರಾಮಗಳಿಗೆ ದಿನಕ್ಕೆ 775 ದಶಲಕ್ಷ ಲೀಟರ್ ನೀರು ಒದಗಿಸಲಾಗುವುದು ಎಂದು ಹೇಳಲಾಗಿತ್ತು. ಪ್ರಸ್ತುತ ಈ ಭಾಗದ 110 ಗ್ರಾಮಗಳ ಪೈಕಿ 55 ಗ್ರಾಮಗಳಿಗೆ ವಾರಕ್ಕೊಮ್ಮೆ ಅಥವಾ ವಾರಕ್ಕೆ ಎರಡು ಬಾರಿ ನೀರು ಪೂರೈಸುತ್ತಿದ್ದೇವೆ. ನಾವು ಅದನ್ನು ಪರಿಶೀಲಿಸಿದಾಗ ಅವರೆಲ್ಲರಿಗೂ ನಿಯಮಿತವಾಗಿ ನೀರು ಸಿಗುತ್ತದೆ ಎಂದು ಮೂಲವೊಂದು ತಿಳಿಸಿದೆ.

ಯೋಜನೆಯ ವೈಶಿಷ್ಟ್ಯಗಳು: ನೀರನ್ನು ಸಂಗ್ರಹಿಸಲು ಒಂಬತ್ತು ನೆಲಮಟ್ಟದ ಜಲಾಶಯಗಳನ್ನು (ಜಿಎಲ್‌ಆರ್‌) ನಿರ್ಮಿಸಲಾಗುತ್ತಿದೆ. ತೊರೆಕಾಡನಹಳ್ಳಿ (ಟಿಕೆ ಹಳ್ಳಿ) ಹಾರೋಹಳ್ಳಿ ಮತ್ತು ತಾತಗುಣಿ ನೀರು ಸರಬರಾಜು ಮಾರ್ಗದಲ್ಲಿ ತಲಾ ಒಂದು ಹೊಸ ಪಂಪಿಂಗ್ ಘಟಕ ನಿರ್ಮಿಸಲಾಗುತ್ತಿದೆ.  ಇನ್ನುಳಿದ ಆರು ಜಿಎಲ್‌ಆರ್‌ಗಳನ್ನು ಗೊಟ್ಟಿಗೆರೆ, ದೊಡ್ಡಕನಹಳ್ಳಿ, ಕಾಡುಗೋಡಿ, ಎಸ್‌ಎಂವಿ ಲೇಔಟ್ VIನೇ ಬ್ಲಾಕ್, ಲಿಂಗವೀರನಹಳ್ಳಿ ಮತ್ತು ಸಿಂಗಾಪುರದಲ್ಲಿ ನಿರ್ಮಿಸಲಾಗುತ್ತಿದೆ ಎಂದು ಮತ್ತೊಬ್ಬ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com